ETV Bharat / state

ಬಿಜೆಪಿ ಮಾಜಿ ಶಾಸಕ ಬಸವರಾಜ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ - Former MLA basavaraj

ವಿರಾಜಪೇಟೆ ಮಾಜಿ ಶಾಸಕ ಬಸವರಾಜ್ ಎಎಪಿ ಪಾರ್ಟಿ ಸೇರ್ಪಡೆಯಾಗಿದ್ದಾರೆ..

Former MLA basavaraj joined AAP Party
ಮಾಜಿ ಶಾಸಕ ಬಸವರಾಜ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
author img

By

Published : Jul 9, 2021, 12:54 PM IST

Updated : Jul 9, 2021, 2:55 PM IST

ಬೆಂಗಳೂರು : ವಿರಾಜ ಪೇಟೆ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಸವರಾಜ್ ಇಂದು ನಗರದ ಪ್ರೆಸ್ ಕ್ಲಬ್​​ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಳಿಕ ಈಟಿವಿ ಭಾರತದೊಂದಿಗೆ ಬಸವರಾಜ್ ಪಕ್ಷ ಸೇರುವ ಉದ್ದೇಶ ಹಾಗೂ ಮುಂದಿನ ರಾಜಕೀಯದ ಬಗ್ಗೆ ಮಾತನಾಡಿದರು.

ರಾಜಕೀಯ ಪಕ್ಷಗಳನ್ನು ತೀರ ಹತ್ತಿರದಿಂದ ನೋಡಿದಾಗ ಜೆಡಿಎಸ್​​ನ ವೈಚಾರಿಕ ಮತ್ತು ಕುಟುಂಬ ರಾಜಕಾರಣ ನನಗೆ ಸರಿ ಕಾಣಲಿಲ್ಲ. ಇನ್ನು ಒಳ ಜಗಳದಲ್ಲಿರುವ ಕಾಂಗ್ರೆಸ್​​ನಲ್ಲಿ ಅಧಿಕಾರ ದಾಹಿಗಳು ಹೆಚ್ಚಾಗಿದ್ದಾರೆ. ಮತ್ತೆ ಅದೊಂದು ಸಾಗರ. ರಾಜ್ಯದ ಎಲ್ಲಾ ಪ್ರಮುಖ ನಾಯಕರು ಆ ಪಕ್ಷದಲ್ಲಿದ್ದಾರೆ. ಅವರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆಯೇ ವಿನಃ ರಾಜ್ಯದ ಜನರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಹಾಗೇ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಭಿನಾಭಿಪ್ರಾಯಗಳು ಹೆಚ್ಚಿರುವ ಕಾರಣ ಈ ನಿರ್ಧಾರ ಕೈಗೊಂಡಿರುವೆ ಎಂದು ಬಸವರಾಜ್​​ ತಿಳಿಸಿದರು.

ಇನ್ನು ಸಾಮಾನ್ಯ ಕಾರ್ಯಕರ್ತನಾಗಿ, ಸಾಮಾನ್ಯ ಜನರಿಗಾಗಿ ಕೆಲಸ ಮಾಡಲು ಸಹಕಾರ ನೀಡಬೇಕು. ಜನ ಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ದೊರಕಿಸಲು ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.

ಇದನ್ನೂ ಓದಿ: ಸಿಎಂ ನಿವಾಸಕ್ಕೆ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಭೇಟಿ.. ಕಾರಣ..

Last Updated : Jul 9, 2021, 2:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.