ETV Bharat / state

ತಿಪ್ಪಗೊಂಡನಹಳ್ಳಿ ಬಫರ್ ವಲಯ ಕಡಿತಕ್ಕೆ ಸುರೇಶ್ ಕುಮಾರ್ ಆಕ್ಷೇಪ : ನಿರ್ಧಾರ ವಾಪಸ್​ಗೆ ಆಗ್ರಹ - ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುರೇಶ್ ಕುಮಾರ್

ತಿಪ್ಪಗೊಂಡನಹಳ್ಳಿ ಜಲಾಶಯ ಸಂಬಂಧ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಹೇಳಿಕೆಗೆ ಮಾಜಿ ಸಚಿವ ಸುರೇಶ್​ ಕುಮಾರ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

former-minister-suresh-kumar-objected-to-the-reduction-of-thippagondanahalli-buffer-zone
ತಿಪ್ಪಗೊಂಡನಹಳ್ಳಿ ಬಫರ್ ವಲಯ ಕಡಿತಕ್ಕೆ ಸುರೇಶ್ ಕುಮಾರ್ ಆಕ್ಷೇಪ : ನಿರ್ಧಾರ ವಾಪಸ್​ಗೆ ಆಗ್ರಹ
author img

By ETV Bharat Karnataka Team

Published : Oct 11, 2023, 2:10 PM IST

ಬೆಂಗಳೂರು : ತಿಪ್ಪಗೊಂಡನಹಳ್ಳಿ ಜಲಾಶಯದ ಬಫರ್‌ ವಲಯ-3 ಮತ್ತು 4 ಅನ್ನು 1 ಕಿ.ಮೀನಿಂದ 500 ಮೀಟರ್‌ಗೆ ಇಳಿಸುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಹೇಳಿಕೆಯನ್ನು ವಾಪಸ್​ ಪಡೆಯಬೇಕು ಮತ್ತು ಇಂತಹ ಪರಿಸರ ವಿರೋಧಿ ಯಾವುದೇ ಕ್ರಮದ ಬಗ್ಗೆ ಯೋಚನೆಯನ್ನು ಮಾಡಬಾರದು ಎಂದು ಆಗ್ರಹಿಸಿದ್ದಾರೆ.

former-minister-suresh-kumar-objected-to-the-reduction-of-thippagondanahalli-buffer-zone
ಪತ್ರಿಕಾ ಪ್ರಕಟಣೆ

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುರೇಶ್ ಕುಮಾರ್, ಬೆಂಗಳೂರಿನ ಪಶ್ಚಿಮ ಭಾಗಗಳಿಗೆ ಸುಮಾರು ಒಂದು ಶತಮಾನ ಕಾಲ ಕುಡಿಯುವ ನೀರು ಒದಗಿಸುತ್ತಿದ್ದ ಮತ್ತು ಇದೀಗ ಎತ್ತಿನಹೊಳೆ ಯೋಜನೆಯಿಂದ ಸುಮಾರು 1.5 ಟಿಎಂಸಿ ನೀರನ್ನು ಎದುರು ನೋಡುತ್ತಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ಬಫರ್‌ ವಲಯ-3 ಮತ್ತು 4 ಅನ್ನು 1 ಕಿ.ಮೀ. ಯಿಂದ 500 ಮೀಟರ್‌ಗೆ ಇಳಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ ಬಫರ್ ವಲಯದಲ್ಲಿ ಡಿಎಲ್‌ಎಫ್ ಸಂಸ್ಥೆ ಕಟ್ಟಲು ಉದ್ದೇಶಿಸಿದ್ದ, ಡಿಎಲ್‌ಎಫ್‌ ವಸತಿ ಸಮುಚ್ಚಯದ ವಿರುದ್ಧ 1992ರಲ್ಲಿ ನಾವು ಮಾಡಿದ ಯಶಸ್ವಿ ಹೋರಾಟ ನೆನಪಿಗೆ ಬರುತ್ತಿದೆ. ನಂತರ ಕುಮುದ್ವತಿ ದಂಡೆಯ ಮೇಲೆಯೇ ನಿರ್ಮಾಣವಾಗುತ್ತಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಕಟ್ಟಡ ವಿರುದ್ಧವೂ 1998-99ರಲ್ಲಿ ಹೋರಾಟ ಮಾಡಿ ಯಶಸ್ಸು ಕಂಡ ಆ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಹಳೆಯ ಹೋರಾಟಗಳನ್ನು ಪ್ರಸ್ತಾಪಿಸಿದ್ದಾರೆ.

ತಿಪ್ಪಗೊಂಡನಹಳ್ಳಿಯಂತಹ ಕುಡಿಯುವ ನೀರಿನ ಆಧಾರವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಗಳಾದ ಕುಮುದ್ವತಿ ಮತ್ತು ಅರ್ಕಾವತಿ ನದಿಗಳನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಯುತ್ತಿರುವಾಗ ಉಪ ಮುಖ್ಯಮಂತ್ರಿಗಳು ನೀಡಿರುವ ಈ ಹೇಳಿಕೆ ನಮಗೆ ಆಘಾತ ತಂದಿದೆ. ಬಫರ್ ವಲಯವನ್ನು ಕಡಿಮೆ ಮಾಡುವುದು ಎಂದರೆ ತಿಪ್ಪಗೊಂಡನಹಳ್ಳಿ ಜಲಾಶಯದ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಹಾಕಿದಂತೆ ಆಗುತ್ತದೆ. ಜಲಾಶಯ ಸುತ್ತಮುತ್ತಲಿನ ಜಾಗವನ್ನು ಉಳಿಸಿಕೊಳ್ಳಲು ಇನ್ನೂ ಹೆಚ್ಚಿನ ಕ್ರಮದ ಅಗತ್ಯವಿದೆ. ಹಾಗಾಗಿ ಅವರ ಈ ಹೇಳಿಕೆಯನ್ನು ವಾಪಸ್​ ಪಡೆಯಬೇಕು ಮತ್ತು ಇಂತಹ ಪರಿಸರ ವಿರೋಧಿ ಯಾವುದೇ ಕ್ರಮದ ಯೋಚನೆಯನ್ನು ಮಾಡಬಾರದೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ಗೆ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ : ಡಾ.ಸಿರಿಯಾಕ್ ಅಬ್ಬಿ ಫಿಲಿಪ್ಸ್ ಎಕ್ಸ್ ಖಾತೆಗೆ ಇದ್ದ ನಿರ್ಬಂಧ ಸಡಿಲಗೊಳಿಸಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.