ETV Bharat / state

ಬಡ ಜನರಿಗೆ ದಿನಸಿ ಕಿಟ್​​ ವಿತರಣೆ ಮಾಡಿದ ಮಾಜಿ ಸಚಿವ ಎಂಟಿಬಿ - ಎಂಟಿಬಿ ನಾಗರಾಜ್​ ಲೇಟೆಸ್ಟ್​ ನ್ಯೂಸ್​

ಇಂದು ಬೆಂಗಳೂರು ಹೊರವಲಯದ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಬಡ ಜನರಿಗೆ ಎಂಟಿಬಿ ನಾಗರಾಜ್​ ಆಹಾರ ಪದಾರ್ಥಗಳ ಕಿಟ್​​ ವಿತರಣೆ ಮಾಡಿದರು.

Former Minister MTB distributed food kit to poor people at Hoskote
ಬಡ ಜನರಿಗೆ ಆಹಾರ ಕಿಟ್​​ ವಿತರಣೆ ಮಾಡಿದ ಮಾಜಿ ಸಚಿವ ಎಂಟಿಬಿ
author img

By

Published : Apr 23, 2020, 9:05 PM IST

ಹೊಸಕೋಟೆ: ಇಂದು ಮಾಜಿ ಸಚಿವ ಎಂಟಿಬಿ ನಾಗರಾಜ್​ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿನ ಬಡ ಜನರಿಗೆ ಆಹಾರ ಪದಾರ್ಥಗಳ ಕಿಟ್​​ ವಿತರಣೆ ಮಾಡಿದರು.

ಬಡ ಜನರಿಗೆ ದಿನಸಿ ಕಿಟ್​​ ವಿತರಣೆ ಮಾಡಿದ ಮಾಜಿ ಸಚಿವ ಎಂಟಿಬಿ

ಬೆಂಗಳೂರು ಹೊರವಲಯದ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಇಂದು ಬಡ ಕೂಲಿ ಕಾರ್ಮಿಕರಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ‌ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಸಚಿವ ಅಲ್ಲಿನ ಜನರಿಗೆ ದಿನಸಿ ಕಿಟ್​​ ವಿತರಣೆ ಮಾಡಿದರು. ಈ ವೇಳೆ ಎಂಟಿಬಿಗೆ ಸ್ಥಳೀಯ ಮುಖಂಡ ಪಟೇಲ್​ ಬಾಬು ರೆಡ್ಡಿ ಸಾಥ್​ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ, ಈಗಾಗಲೇ ದೇಶದಲ್ಲಿ ಕೊರೊನಾ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ಎರಡು ಮೂರು‌ ಕೆಜಿ ಆಹಾರ ಪದಾರ್ಥಗಳನ್ನು ಒದಗಿಸಿದರೆ ಖಾಲಿಯಾದ ತಕ್ಷಣ ಜನ ಹೊರ ಬರುತ್ತಾರೆ. ಹಾಗಾಗಿ ಇಂದು ಬಡ ಜನರಿಗೆ ಆಹಾರ ಧಾನ್ಯವಿರುವ ಕಿಟ್​ ನೀಡಲಾಗಿದೆ. ಕಿಟ್​​ನಲ್ಲಿ ತಿಂಗಳಿಗಾಗುವಷ್ಟು ಅಕ್ಕಿ, ಬೇಳೆ ಸೇರಿದಂತೆ ಸುಮಾರು 28 ರೀತಿಯ ಸಾಮಗ್ರಿಗಳನ್ನು ಬಡ ಜನತೆಗೆ ಹಂಚಿಕೆ ಮಾಡಿ ಇನ್ನು ಒಂದು ತಿಂಗಳು ದಯಮಾಡಿ ಯಾರೂ ಹೊರಬರದಂತೆ ಮನವಿ‌ ಮಾಡಿಕೊಂಡರು.

ಶರತ್​ ಬಚ್ಚೇಗೌಡ ವಿರುದ್ಧ ಗುಡುಗಿದ ಎಂಟಿಬಿ:

ಇದೇ ವೇಳೆ ಶರತ್​ ಬಚ್ಚೇಗೌಡ ವಿರುದ್ಧ ಗುಡುಗಿದ ಎಂಟಿಬಿ, ಅಕ್ರಮ ಕೊಳವೆ ಬಾವಿಗಳನ್ನು ತೋಡಿ ನೀರಿನ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆಲ್ಲ ಅನುಮತಿ ಕೊಡಲು ಶಾಸಕರು ಯಾರು? ಈ ಕೂಡಲೇ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಂಟಿಬಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.