ETV Bharat / state

ರೋಷನ್ ಬೇಗ್ ಬಿಡುಗಡೆ.. ಜೈಲಿನಲ್ಲಿ ಮಾಜಿ ಮೇಯರ್​ ಸಂಪತ್​ ರಾಜ್​ ಭಾವುಕ

ಐಎಂಎ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ರೋಷನ್ ಬೇಗ್ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಈ ವೇಳೆ ಗಲಭೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಮೇಯರ್ ಸಂಪತ್​ ರಾಜ್ ಬೇಗ್​ ಎದುರು ಭಾವುಕರಾದರು ಎಂದು ತಿಳಿದುಬಂದಿದೆ.

Bangalore
ಮಾಜಿ ಸಚಿವ ರೋಷನ್ ಬೇಗ್ ಹಾಗೂ ಮಾಜಿ ‌ಮೇಯರ್ ಸಂಪತ್​ ರಾಜ್
author img

By

Published : Dec 7, 2020, 1:12 PM IST

Updated : Dec 7, 2020, 1:17 PM IST

ಬೆಂಗಳೂರು: ಒಂದೇ ಪಕ್ಷದಲ್ಲಿ ಇದ್ದುಕೊಂಡು ಬಹಳ ಆತ್ಮೀಯರಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಹಾಗೂ ಮಾಜಿ ‌ಮೇಯರ್ ಸಂಪತ್​ ರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ವಾರ ಕಾಲ ಜೈಲಿನ ಆಸ್ಪತ್ರೆಯ ಬ್ಯಾರಕ್​​ನಲ್ಲಿ ಜೊತೆಗಿದ್ರು. ಇದೀಗ ಬೇಗ್​ಗೆ ಬೇಲು ಸಿಕ್ಕಿದ್ದರಿಂದ ಅವರು ಜೈಲಿನಿಂದ ಹೊರಗಡೆ ಬಂದಿದ್ದಾರೆ.

ರೋಷನ್ ಬೇಗ್​ ಐಎಂಎ ಪ್ರಕರಣದಲ್ಲಿ ಜೈಲು ಸೇರಿದ್ರೆ, ಮಾಜಿ ಮೇಯರ್ ಸಂಪತ್​ ರಾಜ್ ಅವರು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಹೀಗಾಗಿ ಪ್ರಕರಣ ಗಂಭೀರತೆಯಿಂದ ಕೂಡಿದ ಕಾರಣ ಎನ್​ಐಎ ಕೂಡ ತನಿಖೆ ನಡೆಸುತ್ತಿದೆ. ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೂ ಕೂಡ ಸದ್ಯ ಜಾಮೀನು ಸಿಕ್ಕಿಲ್ಲ. ಆದರೆ ರೋಷನ್ ಬೇಗ್ ಸಂಪತ್ ರಾಜ್ ಬಳಿಕ ಜೈಲಿಗೆ ಸೇರಿದರೂ ಕೂಡ ಅವರಿಗೆ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಸಿಕ್ಕಿದೆ.

ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬಂದ ಮಾಜಿ ಸಚಿವ ರೋಷನ್ ಬೇಗ್

ಹೀಗಾಗಿ ಸಂಪತ್ ರಾಜ್ ರೋಷನ್ ಬೇಗ್ ಹೊರಗಡೆ ಬರುವಾಗ ಭಾವುಕರಾಗಿದ್ದಾರೆ. ಸಿಬಿಐ ತನಿಖೆ ನಡೆಸಿದರೂ ಅವರಿಗೆ ಬೇಲ್ ಸಿಕ್ಕಿದೆ. ನನ್ನನ್ನು ಎನ್​ಐಎ ಅಧಿಕಾರಿಗಳು ಮತ್ತೆ ಆರೆಸ್ಟ್ ಮಾಡ್ತಾರೆ. ನನಗೂ ಕೂಡ ಜಾಮೀನು ಸಿಗಬೇಕು. ಆರೋಗ್ಯ ಸಮಸ್ಯೆ ಇದೆ ಎಂದು ಜೈಲಿನ ಸಿಬ್ಬಂದಿ ಜೊತೆ ಸಂಪತ್​ ನೋವು ತೋಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಶಾಸಕ ಅಖಂಡ‌ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣವನ್ನ ಎನ್​ಐಎ ಗಂಭೀರವಾಗಿ ಪರಿಗಣಿಸಿದೆ.

Last Updated : Dec 7, 2020, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.