ETV Bharat / state

ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳಾಪಟ್ಟಿ ಬದಲು: ಎಲ್ಲೆಲ್ಲಿ, ಯಾವಾಗ ಪ್ರಚಾರ ಗೊತ್ತಾ? - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರವಾಸ ಪಟ್ಟಿ

ಭಾನುವಾರ ಗೋಕಾಕ್​​ನಲ್ಲಿ ಪ್ರಚಾರ ನಡೆಸಿದ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರವಾಸ ಪಟ್ಟಿಯನ್ನು ಪರಿಷ್ಕರಿಸಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Nov 25, 2019, 1:18 PM IST

ಬೆಂಗಳೂರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ.

ನಿನ್ನೆ ಗೋಕಾಕ್​​ನಲ್ಲಿ ಪ್ರಚಾರ ನಡೆಸಬೇಕಿದ್ದ ಸಿದ್ದರಾಮಯ್ಯ, ಹೊಸಕೋಟೆಯಲ್ಲಿ ಪ್ರಚಾರ ನಡೆಸಿದ್ದರು. ಇದಾದ ಬಳಿಕ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗಿ ಬಂದ ಹಿನ್ನೆಲೆ ಅವರ ಪ್ರವಾಸ ಪಟ್ಟಿ ಪರಿಷ್ಕರಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿ:

ಇಂದು ಬೆಳಗ್ಗೆ ಬೆಂಗಳೂರಿನ ಹೆಚ್​​ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ಹುಬ್ಬಳ್ಳಿಗೆ ತೆರಳಿರುವ ಸಿದ್ದರಾಮಯ್ಯ, ಅಲ್ಲಿಂದ ಯಲ್ಲಾಪುರಕ್ಕೆ ತೆರಳಲಿದ್ದಾರೆ. ಅಲ್ಲಿ ತಮ್ಮ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಪ್ರಚಾರ ನಡೆಸಲಿದ್ದಾರೆ. ನಿನ್ನೆ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಪ್ರಚಾರ ನಡೆಸಿದ್ದರು. ಇಂದು ಸಿದ್ದರಾಮಯ್ಯ ಅಲ್ಲಿಗೆ ತೆರಳಿ ಸಂಜೆಯವರೆಗೆ ಪ್ರಚಾರ ನಡೆಸಲಿದ್ದು, ಕ್ಷೇತ್ರಕ್ಕೆ ಎರಡು ದಿನದಿಂದ ಹಿರಿಯ ನಾಯಕರ ಪ್ರಚಾರದಿಂದ ತಾರಾ ಮೆರುಗು ಬಂದಿದೆ.

ರಾತ್ರಿ 8.30ಕ್ಕೆ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿಯೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ ನ.26ರಂದು ಬೆಳಗ್ಗೆ ರಸ್ತೆ ಮೂಲಕ ರಾಣೆಬೆನ್ನೂರಿಗೆ ತೆರಳಲಿದ್ದಾರೆ. ಅಲ್ಲಿ ತಮ್ಮ ಅಭ್ಯರ್ಥಿ ಕೆ.ಬಿ. ಕೋಳಿವಾಡ ಪರ ಪ್ರಚಾರ ನಡೆಸಲಿದ್ದಾರೆ. ರಾತ್ರಿವರೆಗೆ ಪ್ರಚಾರ ನಡೆಸಿ, ದಾವಣೆಗೆರೆಗೆ ಬಂದು ವಾಸ್ತವ್ಯ ಹೂಡಲಿದ್ದಾರೆ. ನ.27ರಂದು ಹಾವೇರಿ ಜಿಲ್ಲೆಯ ಹಿರೇಕೆರೂರಿಗೆ ತೆರಳಿ ತಮ್ಮ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ್ ಪರ ಪ್ರಚಾರ ನಡೆಸಲಿದ್ದಾರೆ. ಮರಳಿ ರಾತ್ರಿ ದಾವಣಗೆರೆಗೆ ಬಂದು ವಾಸ್ತವ್ಯ ಹೂಡಲಿದ್ದಾರೆ.

ನ.28ರಂದು ದಾವಣಗೆರೆಯಿಂದ ಹೆಲಿಕಾಪ್ಟರ್ ಮೂಲಕ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ಪ್ರಯಾಣಿಸುವ ಸಿದ್ದರಾಮಯ್ಯ, ಅಲ್ಲಿ ದಿನವಿಡೀ ತಮ್ಮ ಅಭ್ಯರ್ಥಿ ವಿ.ವೈ. ಘೋರ್ಪಡೆ ಪರ ಪ್ರಚಾರ ನಡೆಸಿ ರಾತ್ರಿ ಜಿಂದಾಲ್ ಅತಿಥಿಗೃಹದಲ್ಲಿ ತಂಗಲಿದ್ದಾರೆ. ನ.29ರಂದು ಹೊಸಪೇಟೆಯಿಂದ ಹೆಲಿಕಾಪ್ಟರ್ ಮೂಲಕ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭೆ ಕ್ಷೇತ್ರಕ್ಕೆ ಆಗಮಿಸಿ ಅಲ್ಲಿ ಪ್ರಚಾರ ಸಭೆ ನಡೆಸಿ ತಮ್ಮ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರ ನಡೆಸಲಿದ್ದಾರೆ.

ನ.30ರಂದು ಬೆಳಗಾವಿ ಜಿಲ್ಲೆಯ ಕಾಗವಾಡಕ್ಕೆ ತೆರಳಿ ಅಲ್ಲಿ ತಮ್ಮ ಅಭ್ಯರ್ಥಿ ರಾಜು ಕಾಗೆ ಪರ ಪ್ರಚಾರ ನಡೆಸಲಿದ್ದಾರೆ. ರಾತ್ರಿವರೆಗೆ ಪ್ರಚಾರ ನಡೆಸಿ ಮರಳಿ ರಾತ್ರಿ 8ಕ್ಕೆ ಹುಕ್ಕೇರಿಯಲ್ಲಿರುವ ಹೊನ್ನೂರು ಅತಿಥಿ ಗೃಹಕ್ಕೆ ವಾಪಸಾಗಲಿದ್ದಾರೆ. ಪ್ರಚಾರದ ಕಡೆಯ ದಿನ ಡಿ.1 ಆಗಿದ್ದು, ಅಂದು ಬೆಳಗ್ಗೆ ಹೊನ್ನೂರು ಅತಿಥಿಗೃಹದಿಂದ ರಸ್ತೆ ಮಾರ್ಗದಲ್ಲಿ ಹೊರಟು ಬೆಳಗಾವಿ ಜಿಲ್ಲೆಯ ಗೋಕಾಕ್​ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಮತಬೇಟೆ ನಡೆಸಲಿದ್ದಾರೆ. ಅಲ್ಲಿಂದ ಸಂಜೆ 6 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 8.30ಕ್ಕೆ ಆಗಮಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.

Intro:newsBody:ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳಾಪಟ್ಟಿ ಬದಲು; ಎಲ್ಲೆಲ್ಲಿ ಯಾವಾಗ ಪ್ರಚಾರ ಗೊತ್ತಾ?!

ಬೆಂಗಳೂರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ವೇಳಾಪಟ್ಟು ಒಂದಿಷ್ಟು ಬದಲಾಗಿದೆ.
ನಿನ್ನೆ ಗೋಕಾಕ್ನಲ್ಲಿ ಪ್ರಚಾರ ನಡೆಸಬೇಕಿದ್ದ ಸಿದ್ದರಾಮಯ್ಯ, ಹಸಕೋಟೆಯಲ್ಲಿ ಪ್ರಚಾರ ನಡೆಸಿದ್ದರು. ಇದಾದ ಬಳಿಕ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗಿ ಬಂದ ಹಿನ್ನೆಲೆ ಅವರ ಪ್ರವಾಸ ಪಟ್ಟಿ ಪರಿಷ್ಕರಿಸಲಾಗಿದೆ.
ಪರಿಷ್ಕೃತ ವೇಳಾಪಟ್ಟಿ
ಇಂದು ಬೆಳಗ್ಗೆ ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ಹುಬ್ಬಳ್ಳಿಗೆ ತೆರಳಿರುವ ಸಿದ್ದರಾಮಯ್ಯ ಅಲ್ಲಿಂದ ರಸ್ತೆ ಮಾರ್ಗದಲ್ಲಿ ಯಲ್ಲಾಪುರಕ್ಕೆ ತೆರಳಲಿದ್ದು ತಮ್ಮ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಪ್ರಚಾರ ನಡೆಸಲಿದ್ದಾರೆ. ನಿನ್ನೆ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಪ್ರಚಾರ ನಡೆಸಿದ್ದರು. ಇಂದು ಸಿದ್ದರಾಮಯ್ಯ ಅಲ್ಲಿಗೆ ತೆರಳಿ ಸಂಜೆಯವರೆಗೆ ಪ್ರಚಾರ ನಡೆಸಲಿದ್ದು, ಕ್ಷೇತ್ರಕ್ಕೆ ಎರಡು ದಿನದಿಂದ ಹಿರಿಯ ನಾಯಕರ ಪ್ರಚಾರದಿಂದ ತಾರಾ ಮೆರುಗು ಬಂದಿದೆ.
ರಾತ್ರಿ 8.30ಕ್ಕೆ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿಯೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ ನ.26ರಂದು ಬೆಳಗ್ಗೆ ರಸ್ತೆ ಮೂಲಕ ರಾಣೆಬೆನ್ನೂರಿಗೆ ತೆರಳಿ ತಮ್ಮ ಅಭ್ಯರ್ಥಿ ಕೆ.ಬಿ. ಕೋಳಿವಾಡ ಪರ ಪ್ರಚಾರ ನಡೆಸಲಿದ್ದಾರೆ. ರಾತ್ರಿವರೆಗೆ ಪ್ರಚಾರ ನಡೆಸಿ, ದಾವಣೆಗೆರೆಗೆ ಬಂದು ವಾಸ್ತವ್ಯ ಹೂಡಲಿದ್ದಾರೆ. ನ.27ರಂದು ಹಾವೇರಿ ಜಿಲ್ಲೆಯ ಹಿರೇಕೆರೂರಿಗೆ ತೆರಳಿ ತಮ್ಮ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ್ ಪರ ಪ್ರಚಾರ ನಡೆಸಲಿದ್ದಾರೆ. ಮರಳಿ ರಾತ್ರಿ ದಾವಣಗೆರೆಗೆ ಬಂದು ವಾಸ್ತವ್ಯ ಹೂಡುವರು.
ನ.28ರಂದು ದಾವಣಗೆರೆಯಿಂದ ಹೆಲಿಕ್ಯಾಪ್ಟರ್ ಮೂಲಕ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ಪ್ರಯಾಣಿಸುವ ಸಿದ್ದರಾಮಯ್ಯ, ಅಲ್ಲಿ ದಿನವಿಡೀ ತಮ್ಮ ಅಭ್ಯರ್ಥಿ ವಿ.ವೈ. ಘೋರ್ಪಡೆ ಪರ ಪ್ರಚಾರ ನಡೆಸಿ ರಾತ್ರಿ ಜಿಂದಾಲ್ ಅತಿಥಿಗೃಹದಲ್ಲಿ ತಂಗಲಿದ್ದಾರೆ. ನ.29ರಂದು ಹೊಸಪೇಟೆಯಿಂದ ಹೆಲಿಕ್ಯಾಪ್ಟರ್ ಮೂಲಕ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭೆ ಕ್ಷೇತ್ರಕ್ಕೆ ಆಗಮಿಸಿ ಅಲ್ಲಿ ಪ್ರಚಾರ ಸಭೆ ನಡೆಸಿ ತಮ್ಮ ಅಭ್ಯರ್ಥಿ ಗಜಾನನ ಮಂಗ್ಸೂಳಿ ಪರ ಪ್ರಚಾರ ನಡೆಸಿ ಹೊನ್ನೂರು ಅತಿಥಿ ಗೃಹದಲ್ಲಿ ತಂಗಲಿದ್ದಾರೆ.
ನ.30ರಂದು ಹೊನ್ನೂರು ಅತಿಥಿ ಗೃಹ, ರಸ್ತೆ ಮೂಲಕ ಬೆಳಗಾವಿ ಜಿಲ್ಲೆಯ ಕಾಗವಾಡಕ್ಕೆ ತೆರಳಿ ಅಲ್ಲಿ ತಮ್ಮ ಅಭ್ಯರ್ಥಿ ರಾಜು ಕಾಗೆ ಪರ ಪ್ರಚಾರ ನಡೆಸಲಿದ್ದಾರೆ. ರಾತ್ರಿವರೆಗೆ ಪ್ರಚಾರ ನಡೆಸಿ ಮರಳಿ ರಾತ್ರಿ 8ಕ್ಕೆ ಹುಕ್ಕೇರಿಯಲ್ಲಿರುವ ಹೊನ್ನೂರು ಅತಿಥಿ ಗೃಹಕ್ಕೆ ವಾಪಾಸಾಗಲಿದ್ದಾರೆ. ಪ್ರಚಾರದ ಕಡೆಯ ದಿನ ಡಿ.1 ಆಗಿದ್ದು. ಅಂದು ಬೆಳಗ್ಗೆ ಹೊನ್ನೂರು ಅತಿಥಿಗೃಹದಿಂದ ರಸ್ತೆ ಮಾರ್ಗದಲ್ಲಿ ಹೊರಟು ಬೆಳಗಾವಿ ಜಿಲ್ಲೆಯ ಗೋಕಾಕ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರ ನಡೆಸುವರು. ಅಲ್ಲಿಂದ ಸಂಜೆ 6 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 8.30ಕ್ಕೆ ಬೆಂಗಳೂರು ತಲುಪುವರು.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.