ಬೆಂಗಳೂರು: ರಾಮನಗರ ಜಿಲ್ಲೆಗೆ ನವ ಬೆಂಗಳೂರು ಹೆಸರಿಡುವ ಸರ್ಕಾರದ ಚಿಂತನೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು. ಹೊರತು ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿಯಾಗುವುದಿಲ್ಲ ಎಂದರು.
ರಾಮನಗರ ಜಿಲ್ಲೆಗೆ ಹೂಡಿಕೆ ಬರುತ್ತೆ ಎಂದು ಸರ್ಕಾರ ಹೀಗೆ ಮಾಡುತ್ತಿದೆ. ಆದರೆ ಅದಕ್ಕೆ ಪೂರಕವಾದ ವಾತಾವರಣವನ್ನು ಮೊದಲು ನಿರ್ಮಾಣ ಮಾಡಬೇಕು. ಜಿಡಿಪಿ 2.5 % ಆಗಿ, ಇನ್ವೆಸ್ಟ್ಮೆಂಟ್ ಬರಬೇಕು ಅಂದ್ರೆ ಎಲ್ಲಿಂದ ಬರುತ್ತೆ ಎಂದು ಅವರು ಪ್ರಶ್ನಿಸಿದರು.