ETV Bharat / state

'ಭಗವಂತ ನನಗೆ ಮೂರನೇ ಜನ್ಮ ಕೊಟ್ಟಿದ್ದಾನೆ': ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ - etv bharat kannada

ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ನಿಮಿತ್ತ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರಿಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

HDK
ಹೆಚ್​ಡಿಕೆ
author img

By ETV Bharat Karnataka Team

Published : Sep 3, 2023, 12:42 PM IST

Updated : Sep 3, 2023, 2:42 PM IST

ಬೆಂಗಳೂರು: ಅನಾರೋಗ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ‌.ಕುಮಾರಸ್ವಾಮಿ ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ​ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಭಗವಂತ ನನಗೆ ಮೂರನೇ ಜನ್ಮ ಕೊಟ್ಟಿದ್ದಾನೆ. ಎರಡನೇ ಬಾರಿ ನಾನು ಸ್ಟ್ರೋಕ್​ನಿಂದ ಗುಣಮುಖನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ, ಇಂತಹ ಆರೋಗ್ಯ ಸಮಸ್ಯೆ ಇರುವವರು ನಿರ್ಲಕ್ಷಿಸದೇ ಸಕಾಲಕ್ಕೆ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆಗೆ ಒಳಗಾಗುವಂತೆಯೂ ಅವರು ಮನವಿ ಮಾಡಿದರು. ಕಳೆದ 5 ದಿನಗಳಲ್ಲಿ ನನ್ನ ಸ್ನೇಹಿತರಲ್ಲಿ ಅನುಕಂಪ ಮತ್ತು ಭಯದ ವಾತಾವರಣ ಇತ್ತು. ನನ್ನ ಹಿತೈಷಿಗಳಿಗೆ ನನ್ನ ಆರೋಗ್ಯದ ಮಾಹಿತಿ ನೀಡಲು ಮಾಧ್ಯಮದವರು ಶ್ರಮ ಹಾಕಿದ್ದಾರೆ. ಭಗವಂತ, ತಂದೆ ತಾಯಿಯ ಆಶೀರ್ವಾದದಿಂದ ನನಗೆ ಪುನರ್ಜನ್ಮ ಸಿಕ್ಕಿದೆ. ಇದಕ್ಕೆ ಕಾರಣರಾದ ವೈದ್ಯರಿಗೆ ವಿಶೇಷವಾಗಿ ಡಾ.ಸತೀಶ್ ಅವರಿಗೆ ಧನ್ಯವಾದ ತಿಳಿಸಿದರು.

ತೋಟದ ಮನೆಯಲ್ಲಿ ‌ರಾತ್ರಿ ಎರಡು ಗಂಟೆಗೆ ಎಚ್ಚರವಾಯ್ತು. ಭಗವಂತನ ಪ್ರಾರ್ಥನೆ ‌ಮಾಡಿದೆ. ನನ್ನ ಧ್ವನಿಯಲ್ಲಿ ವ್ಯತ್ಯಾಸವಾಗಿದ್ದು ಗೊತ್ತಾಯ್ತು. ಮೊದಲು ಕುಟುಂಬ ವೈದ್ಯರಾದ ಮಂಜುನಾಥ್ ಅವರಲ್ಲಿ ಮಾತನಾಡಿ, ಆನಂತರ ಅಪೊಲೋ ಆಸ್ಪತ್ರೆಯ ವೈದ್ಯರಲ್ಲಿ ಮಾತನಾಡಿದೆ. ಕೇವಲ‌ 20 ನಿಮಿಷದಲ್ಲಿ ಆಸ್ಪತ್ರೆಗೆ ಬಂದೆವು. ಸ್ಟ್ರೋಕ್ ಬಂದಾಗ ವೇಗವಾಗಿ ಆಸ್ಪತ್ರೆಗೆ ಬರಬೇಕು. ಅದು ಬಡವನೇ ಆಗಿರಲಿ ಅಥವಾ ಶ್ರೀಮಂತನೇ ಆಗಲಿ, ಆದಷ್ಟು‌ ಬೇಗ ಆಸ್ಪತ್ರೆಗೆ ಬರಬೇಕು. ನನಗೆ ಮೂರನೇ ಜನ್ಮವನ್ನು ಭಗವಂತ ಕೊಟ್ಟಿದ್ದಾನೆ. ನಾನು ಉಳಿಯಲು ಭಗವಂತ ಮತ್ತು ವೈದ್ಯರೇ ಕಾರಣ ಎಂದು ಹೇಳಿದರು.

former-cm-hd-kumaraswamy-discharged-from-hospital
ಡಿಸ್ಚಾರ್ಜ್ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ

ನಾನು ರಾತ್ರಿ ಹೋಗುವ ಬದಲು ಬೆಳಗ್ಗೆ ಹೋಗುತ್ತೇನೆ ಅಂದುಕೊಂಡಿದ್ದರೆ ನಾನಿವತ್ತು ಸರಾಗವಾಗಿ ಮಾತನಾಡಲು ಆಗುತ್ತಿರಲಿಲ್ಲ. ನಾನು ಆಸ್ಪತ್ರೆಗೆ ದಾಖಲಾದಾಗ ನನಗೆ 1 ಗಂಟೆಯೊಳಗೆ ಸ್ಕ್ಯಾನ್, ಚಿಕಿತ್ಸೆ ಎಲ್ಲ ನೀಡಬೇಕಿತ್ತು. ಒಂದು ಕ್ಷಣವೂ ಕೂಡ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ನೀಡಿದರು. ಪರಿಣಾಮವಾಗಿ ನಾನು ಬೆಡ್ ರೆಸ್ಟ್​ಗೆ ಒಳಗಾಗುವುದು ತಪ್ಪಿತು. 1 ಗಂಟೆಯಲ್ಲೇ ಚೇತರಿಸಿಕೊಂಡೆ. ಇದಕ್ಕೆಲ್ಲಾ ನಾನು ಸಕಾಲಕ್ಕೆ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದು ಮತ್ತು ಗೋಲ್ಡನ್ ಪೀರಿಯಡ್​ನಲ್ಲೇ ನನಗೆ ಚಿಕಿತ್ಸೆ ಸಿಕ್ಕಿದ್ದು ಕಾರಣ. ಹಾಗಾಗಿ ರಾತ್ರಿ ವೇಳೆ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ತಡಮಾಡದೇ ಆಸ್ಪತ್ರೆಗೆ ತೆರಳಿ ಎಂದು ಜನರಿಗೆ ಸಲಹೆ ನೀಡಿದರು.

ನನಗೆ ಎರಡು ಬಾರಿ ಹೃದಯದ ವಾಲ್ವ್ ರೀಪ್ಲೇಸ್​ಮೆಂಟ್ ಆಗಿದೆ. ಎರಡನೇ ಬಾರಿ ಪಾರ್ಶ್ವವಾಯು ಆಗಿದೆ. ಎರಡನೇ ಬಾರಿ ಸಿಎಂ ಆಗಿದ್ದಾಗ ನನ್ನ ಎಡಭಾಗ ಸ್ವಾಧೀನ ಕಳೆದುಕೊಂಡಿತ್ತು. ಆಗ ವೈದ್ಯರು ಸರಿಯಾದ ಚಿಕಿತ್ಸೆ ನೀಡಿದ ಕಾರಣ ಹುಷಾರಾದೆ. ಈ ಬಾರಿ ಹೆಚ್ಚಾಗಿ‌ ಡ್ಯಾಮೇಜ್ ಆಗಿತ್ತು. ಯಾರಿಗಾದರೂ ಪಾರ್ಶ್ವವಾಯು ಆದಾಗ ಸಮಯ ವ್ಯರ್ಥ ಮಾಡಬೇಡಿ. ಚಂದ್ರಯಾನ ಆಯ್ತು, ಸೂರ್ಯಯಾನವೂ ಆಗ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತ ವೈದ್ಯರಿದ್ದಾರೆ. ಹಾಗಾಗಿ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ಆಸ್ಪತ್ರೆಗೆ ತೆರಳಲು ನಿರ್ಲಕ್ಷ್ಯ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ತಂದೆಗೆ ನಿಖಿಲ್ ಮನವಿ: ಹೆಚ್​ಡಿಕೆ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿದರು. ತಂದೆ, ತಾಯಿ ಅವರು ಮಾಡಿದ ಜನಪರ ಕೆಲಸಗಳು ಅವರನ್ನು ಕಾಪಾಡಿವೆ. ನಾವು ಸಹಜವಾಗಿ ಒತ್ತಡದಲ್ಲಿದ್ದೆವು. ಹಾಗಾಗಿ ಮಾಧ್ಯಮದವರ ಜೊತೆಗೆ ಈವರೆಗೂ ಮಾತಾಡಲು ಆಗಲಿಲ್ಲ ಎಂದ ಅವರು, ಮಗನಾಗಿ ನಮ್ಮ ತಂದೆ ಅವರ ಬಳಿ ಕೇಳುವುದಿಷ್ಟೇ, 'ನೀವು ಜನರ ಆಸ್ತಿ, ನೀವು ಹಲವಾರು ವರ್ಷಗಳ ಕಾಲ ನಮ್ಮ ಜೊತೆ ಇರಬೇಕು. ಮುಂದಿನ ದಿನಗಳಲ್ಲಿ ಜೀವನ ಶೈಲಿ ಬದಲಿಸಿಕೊಳ್ಳಿ. ಸರಿಯಾಗಿ ಊಟ ಮಾಡಿ, ನಿದ್ರೆ ಮಾಡಿ' ಎಂದು ಮಾಧ್ಯಮದವರ ಎದುರಲ್ಲೇ ಮನವಿ ಮಾಡಿಕೊಂಡರು.

ಎಚ್ಚರಿಕೆ ಮಾತು ಹೇಳಿದ ವೈದ್ಯರು: ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ವೈದ್ಯರಾದ ಡಾ.ಸತೀಶ್ ಚಂದ್ರ ಮಾತನಾಡಿ, ಪಾರ್ಶ್ವವಾಯು ಎನ್ನುವುದು ಬಹಳ ಸಾಮಾನ್ಯ ಕಾಯಿಲೆಯಾದರೂ ಅದರ ಬಗ್ಗೆ ತಿಳುವಳಿಕೆ ಅವಶ್ಯಕತೆ ಇದೆ. ಅದರ ಚಿಹ್ನೆಗಳನ್ನು ತಿಳಿದುಕೊಂಡ ತಕ್ಷಣ ಆಸ್ಪತ್ರೆಗೆ ಬರಬೇಕು. ಕಣ್ಣು, ಕೈ, ಮಾತುಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ತಕ್ಷಣ ವೈದ್ಯರಿಗೆ ತೋರಿಸಬೇಕು. ಗೋಲ್ಡನ್ ಅವರ್​​ನಲ್ಲಿ ಆಸ್ಪತ್ರೆಗೆ ತಲುಪಬೇಕು. ಆಗ ಚಿಕಿತ್ಸೆ ನೀಡಲು ಅನುಕೂಲ ಆಗುತ್ತದೆ. ರಕ್ತದ ಒತ್ತಡ, ಹೃದಯದ ಕಾಯಿಲೆ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸ್ಟ್ರೋಕ್ ತಡೆಯಬಹುದು ಎಂದರು.

ಆಸ್ಪತ್ರೆಯ ಉಪಾಧ್ಯಕ್ಷ ಡಾ. ಗೋವಿಂದಯ್ಯ ಯತೀಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಅವರ ಆರೋಗ್ಯಕ್ಕಾಗಿ ಜನತೆಗೆ ಬಹಳಷ್ಟು ಕಾಳಜಿ, ಕಳಕಳಿ ಇತ್ತು. ಜನರ ಆತಂಕ, ಕಳಕಳಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಈ ಕಾರಣಕ್ಕಾಗಿ ಇಂದು ತಾವು ಅನುಭವಿಸಿದ ಸಂಕಷ್ಟವನ್ನು ಸ್ವತಃ ತಾವೇ ತಿಳಿಸುವಂತೆ ಕುಮಾರಸ್ವಾಮಿ ಅವರನ್ನು ಮನವಿ ಮಾಡಿಕೊಂಡೆವು ಎಂದರು.

ಸುದ್ದಿಗೋಷ್ಠಿ ಮುಗಿಸಿದ ಬಳಿಕ ಹೆಚ್​.ಡಿ. ಕುಮಾರಸ್ವಾಮಿ ನೇರವಾಗಿ ಜೆ.ಪಿ ನಗರದ ನಿವಾಸಕ್ಕೆ ತೆರಳಿದರು. ಇಂದು ಡಿಸ್ಚಾರ್ಜ್​ ಆದ ಕಾರಣ ಮನೆಯಲ್ಲಿಯೇ ಅವರು ವಿಶ್ರಾಂತಿ ಪಡೆಯಲಿದ್ದು, ಆ ಬಳಿಕ ವೈದ್ಯರ ಒಪ್ಪಿಗೆ ಪಡೆದು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಹೆಚ್.ಡಿ.ಕುಮಾರಸ್ವಾಮಿ ಗುಣಮುಖ; ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್

Last Updated : Sep 3, 2023, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.