ಬೆಂಗಳೂರು : ಕರ್ನಾಟಕ ಗಣಿ ಪ್ರಭಾವಿತ ಪರಿಸರ ಸಂರಕ್ಷಣಾ ನಿಗಮ (ಕೆಎಂಇಆರ್‌ಸಿ)ದ CEPMIZನ ಕ್ರಿಯಾ ಯೋಜನೆ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಪ್ರಕರಣದಲ್ಲಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸುವುದನ್ನು ಮೇಲ್ವಿಚಾರಣೆ ಮಾಡಲು, ನಿರ್ಣಯಗಳನ್ನು ತೆಗೆದುಕೊಳ್ಳಲು ಸಂಪುಟ ಉಪ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
4 ಸದಸ್ಯರ ಸಂಪುಟ ಉಪ ಸಮಿತಿಗೆ ಕಾನೂನು ಸಚಿವ ಮಾಧುಸ್ವಾಮಿ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಸಚಿವ ಶ್ರೀರಾಮುಲು, ಸಿ ಸಿ ಪಾಟೀಲ್ ಹಾಗೂ ಆನಂದ್ ಸಿಂಗ್‌ರನ್ನು ನೇಮಿಸಲಾಗಿದೆ. ಸಂಪುಟ ಉಪ ಸಮಿತಿ ಕಾನೂನಾತ್ಮಕ ಪ್ರಕ್ರಿಯೆಗಳ ಮೇಲ್ವಿಚಾರಣೆ ಹಾಗೂ ಇತರೆ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಿದೆ.
ಓದಿ: ಸೋಮವಾರ ಸಚಿವ ಸಂಪುಟ ಸಭೆ : ಮಹತ್ವದ ವಿಷಯಗಳ ಚರ್ಚೆ
ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಉಂಟಾಗಿರುವ ಪರಿಸರ ಹಾನಿಗೆ ಸುಧಾರಣಾ ಕ್ರಮವಾಗಿ ಗಣಿಗಾರಿಕೆ ಪ್ರಭಾವ ವಲಯಗಾಗಿನ ಸಮಗ್ರ ಪರಿಸರ ಯೋಜನೆ (CEPMIZ) ರೂಪಿಸಲಾಗಿದೆ. 2012ರಲ್ಲಿ ಈ ಮೂರು ಜಿಲ್ಲೆಗಳಲ್ಲಿ ಸುಪ್ರೀಂಕೋರ್ಟ್ CEPMIZ ಜಾರಿಗೆ ಆದೇಶ ಹೊರಡಿಸಿತ್ತು.