ETV Bharat / state

ಕೇಂದ್ರ ಬಜೆಟ್​ನಿಂದ ರಾಜ್ಯಕ್ಕೆ ಏನೂ ಪ್ರಯೋಜನ ಇಲ್ಲ: ವಹಿವಾಟು ತಜ್ಞರ ಅಭಿಪ್ರಾಯ - Central budget

ಕೇಂದ್ರ ಬಜೆಟ್​ನಲ್ಲಿ ಬೆಂಗಳೂರು ಮೆಟ್ರೋದ 2A ಮತ್ತು 2B ಫೇಸ್​ಗಳಿಗೆ ಅನುದಾನ ಘೋಷಿಸಲಾಗಿದೆ, ಅದು ಬಿಟ್ಟರೆ ಕರ್ನಾಟಕಕ್ಕೆ ಯಾವ ಕೊಡಗೆಯೂ ಇಲ್ಲ..

Transaction Experts Opinion on Central Budget
ಕೇಂದ್ರ ಬಜೆಟ್ ಬಗ್ಗೆ ವಹಿವಾಟು ತಜ್ಞರ ಅಭಿಪ್ರಾಯ
author img

By

Published : Feb 1, 2021, 4:55 PM IST

ಬೆಂಗಳೂರು : ಕೇಂದ್ರ ಬಜೆಟ್​ನಲ್ಲಿ ಬೆಂಗಳೂರು ಮೆಟ್ರೋ ಒಂದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಗಮನಾರ್ಹ ಕೊಡುಗೆ ಕರ್ನಾಟಕಕ್ಕೆ ಬಂದಿಲ್ಲ ಎಂದು ಎಫ್​ಕೆಸಿಸಿಐ ಕಚೇರಿಯಲ್ಲಿ ವಹಿವಾಟುಗಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ವಹಿವಾಟು ತಜ್ಞರ ಅಭಿಪ್ರಾಯ

ಎಫ್​ಕೆಸಿಸಿಐ ಅಧ್ಯಕ್ಷ ಪೆರಿಕಾಲ್ ಎಂ ಸುಂದರ್ ಮಾತನಾಡಿ, ಇದೊಂದು ಸಾಮಾನ್ಯ ಬಜೆಟ್, ಸಾಮಾನ್ಯ ಜನರಿಗೆ ಈ ಬಜೆಟ್​ನಿಂದ ಏನೂ ಪ್ರಯೋಜನ ಇಲ್ಲ. ಟೂರಿಸಂ ಸೇರಿ ಹೋಟೆಲ್ ಉದ್ಯಮದಲ್ಲಿ ಏನಾದ್ರೂ ಪ್ಯಾಕೇಜ್ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು.

ಬಜೆಟ್​ನಲ್ಲಿ ದೇಶದ ಹಣಕಾಸು ವ್ಯವಸ್ಥೆ ಬ್ಯಾಲೆನ್ಸ್ ಮಾಡಲಾಗಿದೆ. ಎಜುಕೇಷನ್ ಪಾಲಿಸಿಯಲ್ಲಿ 15 ಸ್ಕೂಲ್ ಮಾಡುತ್ತಾರೆ ಎಂಬುದನ್ನು ಸ್ವಾಗತಿಸುತ್ತೇವೆ. ಆರ್ಥಿಕ ತಜ್ಞ ನಿತ್ಯಾನಂದ ಮಾತನಾಡಿ, ಬಜೆಟ್​ನಲ್ಲಿ ಹೊಸ ಹೊರೆ ಇಲ್ಲ, ಹೊಸ ಬರೆ ಇಲ್ಲ.

ಯಾವುದೇ ನೂತನ ತೆರಿಗೆ ವಿಧಿಸಿ ಜನ ಸಾಮಾನ್ಯನಿಗೆ ಹೊರೆ ಇಲ್ಲವಾಗದಂತೆ ನೋಡಿಕೊಂಡಿರುವುದು ದೊಡ್ಡ ವಿಷಯ. ಮೆಟ್ರೋಗೆ ಅನುದಾನ ನೀಡಿರುವ ಹಿನ್ನೆಲೆ ಐಟಿ ವಲಯ ಅಭಿವೃದ್ಧಿ ಆಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.