ETV Bharat / state

ಕೇಂದ್ರ ಬಜೆಟ್ ಸಮತೋಲಿತ ; ಎಲ್ಲ ಕ್ಷೇತ್ರಗಳಿಗೂ ನ್ಯಾಯ ಒದಗಿಸುವ ಕಾರ್ಯವಾಗಿದೆ - ಐ ಎಸ್ ಪ್ರಸಾದ್

ಕೊರೊನಾ ಸಮಯದಲ್ಲಿ ಆರೋಗ್ಯ ತುಂಬಾ ಮುಖ್ಯ. ಈ ವೇವ್​ಗಳಲ್ಲೂ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಇದಕ್ಕೆ ನಾವು ಸ್ವಾಗತ ಮಾಡುತ್ತೇವೆ ಎಂದರು. ಕೈಗಾರಿಕಾ ವಲಯಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಕ್ರಿಪ್ಟೋ ಕರೆನ್ಸಿಗೆ ಹೊಸ ರೂಲ್ಸ್ ತರ್ತಾ ಇದ್ದಾರೆ. ಜನರಿಗೆ ಅನುಕೂಲ ಆಗುವಂತೆ ಬಜೆಟ್ ಇದೆ..

fkcci-president-is-prasad-spoke-about-central-budget
ಎಫ್​ಕೆಸಿಸಿಐ ಅಧ್ಯಕ್ಷ ಐ. ಎಸ್ ಪ್ರಸಾದ್
author img

By

Published : Feb 1, 2022, 5:16 PM IST

ಬೆಂಗಳೂರು : ಪ್ರಸಕ್ತ ಸಾಲಿನ ಕೇಂದ್ರ ಆಯ-ವ್ಯಯ ಸಮತೋಲಿತವಾಗಿದೆ. ಎಲ್ಲಾ ಕ್ಷೇತ್ರಗಳಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಎಫ್​ಕೆಸಿಸಿಐ ಅಧ್ಯಕ್ಷ ಐ ಎಸ್ ಪ್ರಸಾದ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ ಮಂಡನೆ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ನಾಲ್ಕು ಮುಖ್ಯ ಅಂಶ ಹೇಳಿದ್ದಾರೆ. ಕೈಗಾರಿಕಾ, ಕೃಷಿ, ಡಿಜಿಟಲ್ ಎಕಾನಮಿ ಸೇರಿ ನಾಲ್ಕು ಮುಖ್ಯ ಅಂಶ ಹೇಳಿದ್ದಾರೆ. ಜಿಎಸ್​ಟಿ ಕಲೆಕ್ಷನ್ ಹೆಚ್ಚಾಗಿದೆ. ಮಧ್ಯಮ ವರ್ಗದ ಆದಾಯ ಹೆಚ್ಚಾಗಲು ಕ್ರಮಕೈಗೊಳ್ಳಲಾಗಿದೆ ಎಂದರು.

ಕೇಂದ್ರ ಬಜೆಟ್ ಕುರಿತಂತೆ ಎಫ್​ಕೆಸಿಸಿಐ ಅಧ್ಯಕ್ಷ ಐ ಎಸ್ ಪ್ರಸಾದ್ ಮಾತನಾಡಿರುವುದು..

ಪಿಎಂ ಗತಿಶಕ್ತಿಗೆ ಹೆಚ್ಚು ಗಮನ ಹರಿಸಲು ಮುಂದಾಗಿದ್ದಾರೆ. ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರೈತರಿಗೆ ಆದಾಯ ದ್ವಿಗುಣವಾಗಿ ಬರಲು ಕ್ರಮ ವಹಿಸುತ್ತಿದ್ದಾರೆ. ಕೃಷಿ ವಲಯಕ್ಕೆ ಹೆಚ್ಚಿನ ಒಲವು ತೋರಿದ್ದಾರೆ. ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡೆಕ್ಟ್ ಅಡಿ ಕ್ರಮಕೈಗೊಳ್ಳಲಾಗಿದೆ.

ರೈಲ್ವೆ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ನಾಲ್ಕು ನದಿಗಳ ಜೋಡಣೆಗೆ ಒತ್ತು ನೀಡಲಾಗಿದೆ. ಕೃಷಿ ವಲಯಕ್ಕೆ ಏನು ಬೇಕೋ ಅದಕ್ಕೆ ಪ್ರೋತ್ಸಾಹ ಕೊಡಲಾಗುತ್ತಿದೆ ಎಂದು ಹೇಳಿದರು.

ಆತ್ಮ ನಿರ್ಭರ್ ಯೋಜನೆಯಡಿ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಿರುದ್ಯೋಗ ತೆಗೆದು ಹಾಕಲು ಅನೇಕರು ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗಿದೆ. ಕ್ರೈಮ್ಯಾಟಿಕ್ ಬಜೆಟ್​ಗೂ ಪ್ರೋತ್ಸಾಹ ಮಾಡಿದ್ದಾರೆ. ಕೃಷಿ, ಕೈಗಾರಿಕೆ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಒತ್ತು ನೀಡಲಾಗಿದೆ.

ಕೊರೊನಾ ಸಮಯದಲ್ಲಿ ಆರೋಗ್ಯ ತುಂಬಾ ಮುಖ್ಯ. ಈ ವೇವ್​ಗಳಲ್ಲೂ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಇದಕ್ಕೆ ನಾವು ಸ್ವಾಗತ ಮಾಡುತ್ತೇವೆ ಎಂದರು. ಕೈಗಾರಿಕಾ ವಲಯಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಕ್ರಿಪ್ಟೋ ಕರೆನ್ಸಿಗೆ ಹೊಸ ರೂಲ್ಸ್ ತರ್ತಾ ಇದ್ದಾರೆ. ಜನರಿಗೆ ಅನುಕೂಲ ಆಗುವಂತೆ ಬಜೆಟ್ ಇದೆ.

ನಾವು ಮೂರು ನಿರೀಕ್ಷೆ ಇಟ್ಟುಕೊಂಡಿದ್ದೆವು. ಈ ಮೂರು ನಿರೀಕ್ಷೆ ನಮಗೆ ಈಡೇರಿದೆ. ಟ್ಯಾಕ್ಸೆಷನ್, ಕೃಷಿ, ಕೈಗಾರಿಕೆ ಹೀಗೆ ಅನೇಕ ವಲಯಗಳ ಬಗ್ಗೆ ನಿರೀಕ್ಷೆ ಇತ್ತು. ಆ ನಿರೀಕ್ಷೆಗಳು ಕೂಡ ಈಡೇರಿದೆ. ಈ ಬಜೆಟ್ ಸ್ವಾಗತ ಮಾಡ್ತೀವಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಫ್​ಕೆಸಿಸಿಐ ಉಪಾಧ್ಯಕ್ಷ ರಮೇಶ್ಚಂದ್ರ ಲಹೋಟಿ, ಪಿ. ವಿ ಗೋಪಾಲರೆಡ್ಡಿ ಸೇರಿದಂತೆ ಹಲವು ವಾಣಿಜ್ಯೋದ್ಯಮಿಗಳು ಭಾಗವಹಿಸಿದ್ದರು.

ಓದಿ: ಇದು ರೈತ ಪರ ಬಜೆಟ್ ಅಲ್ಲ, ಉದ್ಯಮಿಗಳ ಬಜೆಟ್ : ಕುರುಬೂರು ಶಾಂತಕುಮಾರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.