ETV Bharat / state

ಪರಿಷ್ಕೃತ ವಿದ್ಯುತ್ ದರ ಹಿಂಪಡೆಯುವಂತೆ ಎಫ್​ಕೆಸಿಸಿಐ ಒತ್ತಾಯ - ಏಕಾಏಕೀ ಏರಿಕೆಯಾದ ವಿದ್ಯುತ್ ದರ

ವಿದ್ಯುತ್ ದರ ಹೆಚ್ಚಳಕ್ಕೆ ಖಂಡನೆ ವ್ಯಕ್ತವಾಗಿದ್ದು, ಕೈಗಾರಿಕೆಗಳನ್ನ ಬಂದ್ ಮಾಡಿ ಬೀಗ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ. ಪರಿಷ್ಕೃತ ವಿದ್ಯುತ್ ದರ ಹಿಂಪಡೆಯುವಂತೆಯೂ ಒತ್ತಾಯಿಸಿದ್ದಾರೆ.

fkcci
fkcci
author img

By

Published : Nov 6, 2020, 1:19 PM IST

Updated : Nov 6, 2020, 7:30 PM IST

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯಿಂದ ವಿದ್ಯುತ್ ದರ ಹೆಚ್ಚಳಕ್ಕೆ ಖಂಡನೆ ವ್ಯಕ್ತವಾಗಿದ್ದು, ಕೈಗಾರಿಕೆಗಳನ್ನ ಬಂದ್ ಮಾಡಿ ಬೀಗ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಮುಗಿದ ನಂತರ ಏಕಾಏಕಿ ಏರಿಕೆಯಾದ ವಿದ್ಯುತ್ ದರದಿಂದ ಎಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹೆಚ್ಚಳವಾಗಿರೋ ವಿದ್ಯುತ್ ಬಿಲ್ ವಿರೋಧಿಸಿ ಎಲ್ಲ ಕೈಗಾರಿಕೆಗಳು ಆಕ್ರೋಶ ವ್ಯಕ್ತಪಡಿಸಿವೆ. ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಿರೋ ಸರ್ಕಾರ ಕೊರೊನಾ‌ ಸಮಯದಲ್ಲಿ ಈ ರೀತಿಯ ವಿದ್ಯತ್ ಹೆಚ್ಚಳ ಸರಿಯಲ್ಲ ಎಂದು ಸಂಸ್ಥೆ ತಿಳಿಸಿದೆ.

ನಾವು ಮೊದಲೇ ಸಂಕಷ್ಟದಲ್ಲಿದ್ದೇವೆ. ಏರಿಕೆಯಾಗಿರೋ ಹೊಸ ದರ ನಮಗೆ ಹೊರೆಯಾಗಲಿದೆ. ವಿದ್ಯುತ್ ದರ ಏರಿಕೆ ಮಾಡದಂತೆ ಈಗಾಗಲೇ ಎಫ್​ಕೆಸಿಸಿಐ ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರ ತಕ್ಷಣವೇ ದರ ಹೆಚ್ಚಳದ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಅಧ್ಯಕ್ಷ ಪೆರಿಕಲ್ ಸುಂದರ್ ಹೇಳಿಕೆ ನೀಡಿದ್ದಾರೆ.

ಪರಿಷ್ಕೃತ ವಿದ್ಯುತ್ ದರ ಹಿಂಪಡೆಯುವಂತೆ ಎಫ್​ಕೆಸಿಸಿಐ ಒತ್ತಾಯ

ಈಗಾಗಲೇ ಶೇ. 1ರಿಂದ 20ರಷ್ಟು ಕೈಗಾರಿಕೆಗಳು ಕೋವಿಡ್ ಪರಿಣಾಮದಿಂದ ಬಾಗಿಲು ಮುಚ್ಚಿದ್ದು, ಶೇ. 40ರಿಂದ 50ರಷ್ಟು ಮಾತ್ರ ಕಾರ್ಖಾನೆಗಳು ಕೆಲಸ ನಿರ್ವಹಿಸುತ್ತಿವೆ.

ಈ ನೀತಿ ಸರ್ಕಾರವೇ ಘೋಷಿಸಿರುವಂತೆ 5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ವಿರೋಧಾಭಾಸದ ನಡೆಯಾಗಿದ್ದು, ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳು ಸೃಷ್ಠಿ ಅಗಬೇಕಿದೆ. ಈ ರೀತಿಯ ನಡೆಯಿಂದ ಹಿನ್ನಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಪರಿಷ್ಕೃತ ದರ ಹಿಂಪಡೆಯದಿದ್ದರೆ, ಕೈಗಾರಿಕೆಗಳನ್ನು ಬಂದ್ ಮಾಡಿ ಕೀಲಿಯನ್ನ ಸರ್ಕಾರಕ್ಜೆ ಕೊಡುವುದಾಗಿ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ವಿದ್ಯುತ್ ದರ ಇಳಿಸಲು ಕಾಸಿಯಾ ಆಗ್ರಹ:

ಹೊಸ ದರವನ್ನ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿರುವ ಸಣ್ಣ ಕೈಗಾರಿಕೆಗಳ ಸಂಘ, ಕೊರೊನಾದಿಂದ ಕೈಗಾರಿಗಳು ಕುಂಟುತ್ತಾ ಸಾಗುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ವಿದ್ಯುತ್ ದರ ಏರಿಕೆ ಸರಿಯಲ್ಲ. ವಿದ್ಯುತ್ ದರ ಇಳಿಕೆ ಮಾಡಿದರೆ ಮಾತ್ರ ಕೈಗಾರಿಗಳು ಉಳಿಯಲು ಸಾಧ್ಯ. ಈ ಕೂಡಲೇ ಕೈಗಾರಿಕೆಗಳ ಉಳಿವಿಗಾಗಿ ಪರಿಷ್ಕೃತ ದರವನ್ನ ವಾಪಸ್ ಪಡೆಯಬೇಕು ಎಂದು ಕಾಸಿಯಾ ಆಗ್ರಹಿಸಿದೆ.

Last Updated : Nov 6, 2020, 7:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.