ETV Bharat / state

ಎಫ್‌ಕೆಸಿಸಿಐ ಸರ್ಕಾರಿ ಸಂಸ್ಥೆಯಲ್ಲ ಅದರ ವಿರುದ್ಧ ಅರ್ಜಿ ಮಾನ್ಯ ಮಾಡುವುದಕ್ಕೆ ಸಾಧ್ಯವಿಲ್ಲ: ಹೈಕೋರ್ಟ್​ - Etv Bharat Kannada

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ದುರಾಡಳಿತ ನಡೆಯುತ್ತಿದೆ ಮತ್ತು ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪಿಸಿ ಶಂಕರಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯ ವಜಾಗೊಳಿಸಿದೆ.

KN_BNG_
ಹೈಕೋರ್ಟ್​
author img

By

Published : Oct 12, 2022, 11:01 PM IST

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ) ಖಾಸಗಿ ಸಂಸ್ಥೆಯಾಗಿದ್ದು ಅದರ ವಿರುದ್ಧದ ಅರ್ಜಿ ಮಾನ್ಯ ಮಾಡಲಾಗದು ಎಂದು ಹೈಕೋರ್ಟ್ ತಿಳಿಸಿದೆ.

ಸಂಸ್ಥೆಯಲ್ಲಿ ದುರಾಡಳಿತ ನಡೆಯುತ್ತಿದೆ ಮತ್ತು ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪಿಸಿ ಬಿ.ಎಲ್.ಶಂಕರಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ. ಅಲ್ಲದೇ, ಪ್ರತಿವಾದಿ ಸಂಸ್ಥೆ ಸಂವಿಧಾನದಡಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದು ಸರ್ಕಾರ ಮತ್ತು ಅದರ ಸಂಸ್ಥೆಗಳು ಮಾಡುವ ಕೆಲವು ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಆ ಕಾರಣಕ್ಕೆ ಅದು ಸರ್ಕಾರದ ಅಧೀನಕ್ಕೆ ಒಳಪಡುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಅದು ಯಾವುದೇ ವಿಧದಲ್ಲೂ ಸಂವಿಧಾನದ 12ನೇ ಕಲಂನಡಿ ಸರ್ಕಾರ ಅಧೀನಕ್ಕೆ ಒಳಪಡುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಎಫ್ ಕೆಸಿಸಿಐ ಅತ್ಯಂತ ಹಳೆಯ ಸಂಸ್ಥೆಯಾಗಿದ್ದು, ಅದರಲ್ಲಿ ಸುಮಾರು 3 ಸಾವಿರ ಪ್ರತ್ಯಕ್ಷ ಸದಸ್ಯರು ಮತ್ತು 2,50,000 ಪರೋಕ್ಷ ಸದಸ್ಯರಿದ್ದು, ಅವರು ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳನ್ನು ಪ್ರತಿನಿಸುತ್ತಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ನಿಂದ ನಾಳೆಯೇ ಹಿಜಾಬ್​ ತೀರ್ಪು ಪ್ರಕಟ ಸಾಧ್ಯತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.