ETV Bharat / state

ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಸಮೀಕ್ಷೆಗೆ ಎಫ್​​ಕೆಸಿಸಿಐ ನಿರ್ಧಾರ - imported goods from China

ಭಾರತವು ಈಗಾಗಲೇ ಆರ್ಥಿಕವಾಗಿ ಚೀನಾ ದೇಶವನ್ನು ಹಿಮ್ಮೆಟ್ಟಿಸಲು ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮಗಳನ್ನು ಘೋಷಿಸಿದೆ. ಈ ದಿಸೆಯಲ್ಲಿ ಚೀನಾ ದೇಶದಿಂದ ಅತೀ ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳಲಾಗುತ್ತಿರುವ ವಸ್ತುಗಳ ಪಟ್ಟಿ ತಯಾರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಎಫ್​​ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ಧನ್ ಹೇಳಿದ್ದಾರೆ.

ಎಫ್​​ಕೆಸಿಸಿಐ
ಎಫ್​​ಕೆಸಿಸಿಐ
author img

By

Published : Jun 22, 2020, 8:52 PM IST

ಬೆಂಗಳೂರು: ಕರ್ನಾಟಕದ ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳು ಮತ್ತು ವ್ಯಾಪಾರಸ್ಥರು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಸಮೀಕ್ಷೆ ನಡೆಸಲಾಗುವುದು ಎಂದು ಎಫ್​​ಕೆಸಿಸಿಐ ನಿರ್ಧಾರ ಮಾಡಿದೆ.

ಭಾರತವು ಈಗಾಗಲೇ ಆರ್ಥಿಕವಾಗಿ ಚೀನಾ ದೇಶವನ್ನು ಹಿಮ್ಮೆಟ್ಟಿಸಲು ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮಗಳನ್ನು ಘೋಷಿಸಿದೆ. ಹಲವು ರಾಜ್ಯಗಳಲ್ಲಿ ಚೀನಾ ಕಂಪನಿಗಳಿಗೆ ನೀಡಿದ್ದ ಹಾಗೂ ನೀಡಬೇಕಾಗಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ದಿಸೆಯಲ್ಲಿ ಚೀನಾ ದೇಶದಿಂದ ಅತೀ ಕಡಿಮೆ ಬೆಲೆಯ ವಸ್ತುಗಳ ಆಮದು ಹಾಗೂ ಕೈಗಾರಿಕೆಗಳು ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಪಟ್ಟಿ ತಯಾರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಎಫ್​​ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ಧನ್ ಹೇಳಿದ್ದಾರೆ.

ಎಫ್​​ಕೆಸಿಸಿಐ ಸಂಸ್ಥೆಯು ತನ್ನ ಎಲ್ಲಾ ಸದಸ್ಯರಿಂದ ಈ ಮಾಹಿತಿಯನ್ನು ಸಂಗ್ರಹಿಸಲು ಕರೆ ನೀಡಿದೆ. ಪ್ರತಿಯೊಂದು ಜಿಲ್ಲೆಯಿಂದ ಈ ಮಾಹಿತಿಯನ್ನು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ಪಡೆದುಕೊಳ್ಳಲಾಗುವುದು. ಸಂಸ್ಥೆಯು ಈಗಾಗಲೇ ಚೀನಾ ದೇಶದಿಂದ ಸ್ಥಳಾಂತರ ಗೊಳ್ಳುತ್ತಿರುವ ಬಂಡವಾಳವನ್ನು ಕರ್ನಾಟಕಕ್ಕೆ ಆಕರ್ಷಿಸಲು ಹಾಗೂ ಕಾಂಪೀಟ್ ಚೀನಾ ಯೋಜನೆಯ ಅನುಷ್ಠಾನಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಿದೆ.

ಜುಲೈ ತಿಂಗಳಲ್ಲಿ ಎಫ್​​ಕೆಸಿಸಿಐ ಸಂಸ್ಥೆಯು ಚೀನಾ ಬಂಡವಾಳ ಹಾಗೂ ಕಾಂಪೀಟ್ ಚೀನಾ ಕುರಿತ ಒಂದು ದಿನದ brain storming seminar ಮಾಡುವ ಉದ್ದೇಶ ಹೊಂದಿದೆ. ಅಂದು ಈ ವಿಷಯಗಳಲ್ಲಿ ಪರಿಣತಿ ವ್ಯಕ್ತಿಗಳನ್ನು ಕರೆಸಿ ಮಾತುಕತೆ ನಡೆಸಲಾಗುವುದು.

ರಾಜ್ಯ ಸರ್ಕಾರವು ರಚಿಸಿರುವ ಇನ್ವೆಸ್ಟ್ಮೆಂಟ್ ಟಾಸ್ಕ್ ಫೋರ್ಸ್ ನಲ್ಲಿ ಎಫ್​​ಕೆಸಿಸಿಐ ಸಂಸ್ಥೆಗೆ ಪ್ರಾತಿನಿಧ್ಯತೆ ನೀಡಲು ಕೋರಿದ್ದು, ಸರ್ಕಾರ ಇನ್ನೂ ಪರಿಗಣಿಸಿಲ್ಲ. ಈ ವಿಷಯವನ್ನು ಕೈಗಾರಿಕಾ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಇವರ ಗಮನಕ್ಕೆ ತಂದಿದ್ದು, ಕೂಡಲೇ ಪರಿಗಣಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.