ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಎಫ್ಕೆಸಿಸಿಐ ಕಾನ್ಸುಲರ್ ಸಮ್ಮೇಳನವನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಮ್ಮೇಳನದಲ್ಲಿ 25 ದೇಶದ ರಾಯಭಾರಿಗಳು ಪಾಲ್ಗೊಂಡಿದ್ದರು.
ಹಿಂದೆ ನಡೆದಂತ ಏಷಿಯಾನ್ ಸಮ್ಮೇಳನದಲ್ಲಿ ರಾಜ್ಯಕ್ಕೆ ಸಾಕಷ್ಟು ಹೂಡಿಕೆಗಳ ಒಪ್ಪಂದದ ಸಹಿ ಹಾಕಲಾಗಿದೆ. ಅದರಂತೆ ಕಾನ್ಸುಲರ್ 2019 ರಲ್ಲಿ ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ, ಬೇರೆ ನಗರಗಳು ಅಷ್ಟೇ ಬಲಶಾಲಿ ಇದೆ ಎಂದು ತಿಳಿಸಿ ರಾಜ್ಯದ ವಿವಿಧ ನಗರದ ಬಗ್ಗೆ ವಿವಿಧ ದೇಶಗಳಿಗೆ ಪರಿಚಯ ಮಾಡಿಕೊಡಲಾಗುವುದು. ಇದರಿಂದ ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಬಹುದು ಎಂದು ಎಫ್ಕೆಸಿಸಿಐನ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ತಿಳಿಸಿದರು.
ಕಾಂಪಿಟ್ ವಿತ್ ಚೀನಾದಂತಹ ರಾಜ್ಯ ಸರ್ಕಾರದ ಹಾಗೂ ಮೇಕ್ ಇನ್ ಇಂಡಿಯಾದಂತಹ ಭಾರತ ಸರ್ಕಾರದ ಕಾರ್ಯಕ್ರಮಗಳಿಗೆ 2ನೇ ದರ್ಜೆ ಹಾಗೂ 3ನೇ ದರ್ಜೆಯ ನಗರಗಳು ಉತ್ತಮ. ಇದಕ್ಕೆ ಪೂರಕವಾಗಿ ವಿವಿಧ ದೇಶದಿಂದ ಬಂಡವಾಳ ಹರಿದು ಬಂದರೆ ಉದ್ಯೋಗ ಸೃಷ್ಟಿ ಆಗುವ ಎಲ್ಲಾ ಸಾಧ್ಯತೆ ಇರುತ್ತದೆ ಎಂದರು.