ETV Bharat / state

ಭಾರತದ ಹುಲಿ ಸಂರಕ್ಷಣಾ ಯೋಜನೆಗೆ 50ರ ಸಂಭ್ರಮ: ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರುವ ನಿರೀಕ್ಷೆ - Tiger Conservation Project of India

ಭಾರತದ ಹುಲಿ‌ ಸಂರಕ್ಷಣಾ ಯೋಜನೆಗೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆ, ಕರ್ನಾಟಕದಲ್ಲಿರುವ ಐದು ಹುಲಿ ಸಂರಕ್ಷಿತ ಅರಣ್ಯಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

five-tiger-reserves-of-karnataka
ಭಾರತದ ಹುಲಿ ಸಂರಕ್ಷಣಾ ಯೋಜನೆಗೆ ಐವತ್ತರ ಸಂಭ್ರಮ
author img

By

Published : Apr 8, 2023, 3:45 PM IST

ಬೆಂಗಳೂರು: ಭಾರತದ ಹುಲಿ‌ ಸಂರಕ್ಷಣಾ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಲಿರುವ ವಿಶ್ವದಲ್ಲೇ ಹುಲಿಗಳ ಪ್ರಮುಖ ಆವಾಸಸ್ಥಾನ ಎನಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಭಾರತದಲ್ಲಿ ಹುಲಿಗಳ ಸಂತತಿ ರಕ್ಷಿಸಲು ಮತ್ತು ಹೆಚ್ಚಿಸಲು 1973ರ ಏಪ್ರಿಲ್ 1ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಬಂಡೀಪುರದಲ್ಲಿ ಹುಲಿ ಯೋಜನೆಗೆ ಚಾಲನೆ ನೀಡಿದ್ದರು. ಅಂದಿನಿಂದ, ಹಂತಹಂತವಾಗಿ ಯೋಜನೆಯು ಯಶಸ್ಸಿನ ಹಾದಿಯಲ್ಲಿದ್ದು, ಹುಲಿಗಳ ಸಂತತಿ ಹೆಚ್ಚಿಸಲು ಮತ್ತು ಸಂರಕ್ಷಣೆ ಕಾರ್ಯ ನಡೆಯುತ್ತಿದೆ. 50 ವರ್ಷಗಳ ಸಂಭ್ರಮಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ತಲಾ 6, ಕರ್ನಾಟಕದಲ್ಲಿ‌ ಹಾಗೂ ತಮಿಳುನಾಡಿನಲ್ಲಿ ತಲಾ 5, ಅಸ್ಸೋಂ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 4, ಅರುಣಾಚಲ ಪ್ರದೇಶ ಹಾಗೂ ಛತ್ತೀಸ್​ಘಢದಲ್ಲಿ ತಲಾ 3, ಕೇರಳ, ಒಡಿಶಾ, ತೆಲಂಗಾಣ, ಉತ್ತರಾಖಂಡ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ 2, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ತಲಾ 1 ರಂತೆ ಒಟ್ಟು 54 ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಹುಲಿಗಳ ಗಣತಿ ನಡೆಸುತ್ತದೆ. 2018ರ ಗಣತಿಯ ಪ್ರಕಾರ 526 ಹುಲಿಗಳನ್ನ ಹೊಂದಿದ್ದ ಮಧ್ಯಪ್ರದೇಶ ಅಗ್ರ ಸ್ಥಾನದಲ್ಲಿದ್ದರೆ, 524 ಹುಲಿಗಳನ್ನ ಹೊಂದಿದ್ದ ಕರ್ನಾಟಕ ದ್ವಿತೀಯ ಮತ್ತು 442 ಹುಲಿಗಳನ್ನ ಹೊಂದಿದ್ದ ಉತ್ತರಾಖಂಡ ತೃತೀಯ ಸ್ಥಾನದಲ್ಲಿದ್ದವು. 2022ರ ಗಣತಿಯ ವರದಿ ಬಿಡುಗಡೆಯಾಗಬೇಕಿದೆ. 2018ರ ನಂತರದ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 34 ಹುಲಿಗಳು ಮೃತಪಟ್ಟಿದ್ದು, ಕರ್ನಾಟಕದಲ್ಲಿ 15 ಹುಲಿಗಳು ಮೃತಪಟ್ಟಿರುವುದರಿಂದ ಕರ್ನಾಟಕ ಅಗ್ರ ಸ್ಥಾನ ಅಲಂಕರಿಸಿರುವ ನಿರೀಕ್ಷೆಯಿದೆ.

five-tiger-reserves-of-karnataka
ಕರ್ನಾಟಕ 2018ರ ಗಣತಿಯ ಪ್ರಕಾರ 524 ಹುಲಿಗಳನ್ನ ಹೊಂದಿತ್ತು

ಕರ್ನಾಟಕದ ಐದು ಹುಲಿ ಸಂರಕ್ಷಿತ ಅರಣ್ಯಗಳು: ಬಂಡೀಪುರ: ಮೈಸೂರು ಮಹಾರಾಜರಿಂದ 1930ರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಾಪನೆಯಾದ ಬಂಡೀಪುರ ಅಭಯಾರಣ್ಯ ಮೊದಲು ವೇಣುಗೋಪಾಲ ವನ್ಯಜೀವಿ ಉದ್ಯಾನವನ ಎಂದಿತ್ತು. ಒಂದು ಕಾಲದಲ್ಲಿ ಮೈಸೂರು ರಾಜರ ವನ್ಯ ಬೇಟೆಯ ಸ್ಥಳವಾಗಿದ್ದ ಈ ಸ್ಥಳವನ್ನು ನಂತರ 1974ರಲ್ಲಿ ಹುಲಿ ಯೋಜನೆಯಡಿಯಲ್ಲಿ ಬಂಡೀಪುರ ಹುಲಿ‌ ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಲಾಗಿತ್ತು.

912.04 ಚದರ್​ ಕಿ.ಮೀ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹುಲಿಗಳು, ಏಷ್ಯನ್ ಆನೆ, ಬಂಗಾಳದ ಹುಲಿಗಳು, ನರಿ, ಜಿಂಕೆ, ಕರಡಿ, ಗಿಡುಗ, ಕೆಂಪು ತಲೆಯ ರಣಹದ್ದು, ರಣಹದ್ದಿನಂತಹ ಪಕ್ಷಿಗಳು, ಮೊಸಳೆ, ಭಾರತೀಯ ಊಸರವಳ್ಳಿ, ಹೆಬ್ಬಾವು, ಹಾರುವ ಹಲ್ಲಿಯಂತಹ ಸರೀಸೃಪಗಳು ಇಲ್ಲಿವೆ.

five-tiger-reserves-of-karnataka
1973ರ ಏಪ್ರಿಲ್ 1ರಲ್ಲಿ ಬಂಡೀಪುರದಲ್ಲಿ ಹುಲಿ ಯೋಜನೆ ಜಾರಿ

ಭದ್ರಾ: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 490 ಚದರ್​ ಕಿ.ಮೀ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಇದನ್ನು 1951ರಲ್ಲಿ ಜಾಗರ ಕಣಿವೆ ವನ್ಯಜೀವಿ ಅಭಯಾರಣ್ಯವೆಂದು ಸರ್ಕಾರ ಘೋಷಿಸಿತ್ತು. ನಂತರ ವಿಸ್ತಾರಗೊಳಿಸಿ 1974 ರಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಮರುನಾಮಕರಣ ಮಾಡಲಾಯಿತು.

1998ರಲ್ಲಿ ಹುಲಿ ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಿ ಸುತ್ತಮುತ್ತಲಿನ ಹಳ್ಳಿಗಳನ್ನ 50 ಕಿ.ಮೀ ದೂರದ ಊರುಗಳಿಗೆ ಸ್ಥಳಾಂತರಿಸಲಾಯಿತು. ಸದ್ಯ ಭದ್ರಾ ಅಭಯಾರಣ್ಯದಲ್ಲಿ ಹುಲಿಗಳು ಮಾತ್ರವಲ್ಲದೇ, ಚಿರತೆ, ಆನೆ, ಕರಡಿ, ಕಾಡು ಹಂದಿ, ಜಿಂಕೆ, ಪಂಗೋಲಿನ್, ಕಾಡುಬೆಕ್ಕು, ಕಾಡುಕೋಣಗಳು, ಪಕ್ಷಿಗಳು ಸೇರಿದಂತೆ ವೈವಿಧ್ಯಮಯ ಸರೀಸೃಪ ಹಾಗೂ ಪಕ್ಷಿಗಳ ಆವಾಸಸ್ಥಾನವಾಗಿದೆ.

ಬಿಳಿಗಿರಿ ರಂಗ ಸ್ವಾಮಿ: ಚಾಮರಾಜನಗರದ ಯಳಂದೂರು ತಾಲ್ಲೂಕಿನ ಬಿಳಿಗಿರಿನರಂಗನಾಥ ಸ್ವಾಮಿ ದೇವಾಲಯದ ಸುತ್ತಮುತ್ತಲಿನ 322.4 ಚದರ್​ ಕಿ.ಮೀ ವ್ಯಾಪ್ತಿಯ ಅರಣ್ಯ ಪ್ರದೇಶವನ್ನು 1974ರಲ್ಲಿ ಅಭಯಾರಣ್ಯ ಎಂದು ಘೋಷಿಸಲಾಗಿದ್ದು, ನಂತರ 540 ಚದರ್ ಕಿ.ಮೀಗೆ ಹೆಚ್ಚಿಸಲಾಗಿದೆ. 2011ರಲ್ಲಿ ಇದನ್ನ ಹುಲಿ ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಲಾಗಿದೆ. ಆನೆ, ಹುಲಿ, ಚಿರತೆ, ಕಾಡುನಾಯಿ, ಕರಡಿ, ದೈತ್ಯ ಅಳಿಲು, ಜಿಂಕೆಗಳನ್ನು ಒಳಗೊಂಡಿದೆ.

ಕಾಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಇದು ಆರಂಭದಲ್ಲಿ ದಾಂಡೇಲಿ - ಅಂಶಿ ಅಭಯಾರಣ್ಯ ಎಂದು 1956ರಲ್ಲಿ ಆರಂಭವಾಯಿತು. 2015ರ ಡಿಸೆಂಬರ್‌ನಲ್ಲಿ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಲಾಗಿದ್ದು, ಇದು 519.53 ಚದರ್ ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಹುಲಿ, ಕರಿ ಚಿರತೆ, ಕಾಡೆಮ್ಮೆ, ಜಿಂಕೆ, ಮುಂಗುಸಿ, ಮುಳ್ಳು ಹಂದಿ, ದೈತ್ಯ ಅಳಿಲು, ಪಂಗೋಲಿನ್, ಹೆಬ್ಬಾವುಗಳ ಆವಾಸಸ್ಥಾನವಾಗಿದೆ.

ನಾಗರಹೊಳೆ: ನಾಗ (ಹಾವು) ಮತ್ತು ಹೊಳೆ ಎಂಬುದನ್ನ ಸೇರಿಸಿ ನಾಗರಹೊಳೆ ಎಂಬ ಹೆಸರು ಪಡೆದಿರುವ ಈ ಅರಣ್ಯ ಪ್ರದೇಶ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಮೈಸೂರು ಅರಸರ ಬೇಟೆಯ ಮೀಸಲು ಅರಣ್ಯವಾಗಿದ್ದ ನಾಗರಹೊಳೆಯನ್ನು 1995ರಲ್ಲಿ ಅಭಯಾರಣ್ಯ ಎಂದು ಘೋಷಿಸಲಾಯಿತು. ನಂತರವ 1999ರಲ್ಲಿ ಹುಲಿ‌ ಸಂರಕ್ಷಿತ ಅಭಯಾರಣ್ಯವೆಂದು ಘೋಷಿಸಲ್ಪಟ್ಟಿದೆ. 511 ಚದರ್​ ಕಿ.ಮೀ ನಷ್ಟು ವ್ಯಾಪಿಸಿರುವ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಹುಲಿ, ಜಿಂಕೆ, ಕಾಡುಕುರಿ, ಕರಡಿ, ಚಿರತೆ, ಆನೆ, ಕಾಡುಪಾಪ, ನೀರುನಾಯಿ, ಮೊಸಳೆ, ಮರಕುಟುಕ, ನವಿಲು, ಹೆಬ್ಬಾವು, ಹದ್ದು, ಗಿಡುಗಗಳ ಪ್ರಭೇದವಿದೆ.

ಇದನ್ನೂ ಓದಿ:ಶನಿವಾರ ರಾಜ್ಯಕ್ಕೆ ಮೋದಿ: ಬಂಡೀಪುರದಲ್ಲಿ 15 ಕಿ.ಮೀ ಸಫಾರಿ, ಕಾಡಿನ ಮಕ್ಕಳಿಂದ ವಿಶೇಷ ಟೀ ವ್ಯವಸ್ಥೆ

ನಾಳಿನ ವರದಿಯ ಮೇಲೆ ಎಲ್ಲರ ಕಣ್ಣು: ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ನಡೆಸಿ, ನಂತರ ಮೈಸೂರಿನ ಕೆಎಸ್​ಒಯು ಭವನದಲ್ಲಿ 2022ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ವರದಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂಬ ಕಾತರ ಎಲ್ಲರಲ್ಲೂ ಮೂಡಿದೆ. ನಾಳಿನ ಕಾರ್ಯಕ್ರಮ ಬಂಡೀಪುರ ಹುಲಿ ಯೋಜನೆಗೆ 50ರ ಸಂಭ್ರಮ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.