ಬೆಂಗಳೂರು: ನಗರದ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ ಎಲ್) ಕೆಮಿಕಲ್ ಸ್ಫೋಟ ಹಿನ್ನೆಲೆಯಲ್ಲಿ ಐವರು ವಿಜ್ಞಾನಿಗಳು ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
9 ಜೀವಂತ ಡೆಟೊನೇಟರ್ ಗಳ ಪರೀಕ್ಷೆ ವೇಳೆ ಒಂದು ಡೆಟೊನೇರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ನವ್ಯ, ವಿಶ್ವನಾಥ್, ಶ್ರೀನಾಥ್, ಆಂಥೋಣಿ, ಪ್ರಭು, ದಲಾಯತ್ ಎಂಬ ಆರು ವಿಜ್ಞಾನಿಗಳು ಗಾಯಗೊಂಡಿದ್ದಾರೆ. ಅಲ್ಲದೇ ಸೀನಿಯರ್ ಸೈಂಟಿಫಿಕ್ ಅಫೀಸರ್ ಶ್ರೀನಾಥ್ ಅವರ ಬೆರಳು ತುಂಡಾಗಿವೆ.
ಈ ಘಟನೆ ಬೆನ್ನಲ್ಲೇ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಗೊಂಡಿರುವ ಐವರು ವಿಜ್ಞಾನಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ.