ಬೆಂಗಳೂರು: ನಗರದ ಯಶವಂತಪುರದ ಆರ್ಟಿಒ ಕಚೇರಿ ಆವರಣದಲ್ಲಿ ಪೌರಕಾರ್ಮಿಕರಿಗಾಗಿ ಸುವಿಧಾ ಕ್ಯಾಬಿನ್ ಉದ್ಘಾಟನೆಗೊಂಡಿದೆ. ಡಿಸಿಎಂ ಅಶ್ವತ್ಥ್ ನಾರಾಯಣ್, ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಉದ್ಘಾಟನೆಗೊಳಿಸಿದರು.
ಪೌರಕಾರ್ಮಿಕರಿಗೆ ಕೆಲಸದ ಅವಧಿಯಲ್ಲಿ ಅನುಕೂಲವಾಗಲು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಮೊಬೈಲ್ ಚಾರ್ಜಿಂಗ್ ಸೇರಿದಂತೆ ಹಲವು ಸೌಲಭ್ಯ ಮಾಡಲಾಗಿದೆ.
ಮೂರು ವರ್ಷಗಳ ಹಿಂದೆ ಮೇಯರ್ ಪದ್ಮಾವತಿ ಅವಧಿಯಲ್ಲೇ ಪೌರಕಾರ್ಮಿಕರಿಗೆ ಬಿಸಿಯೂಟ ಆರಂಭಿಸಿದಾಗ 198 ವಾರ್ಡ್ಗಳಲ್ಲೂ ಊಟ ಮಾಡಲು ಹಾಗೂ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಬರುವ ಪೌರಕಾರ್ಮಿಕರಿಗಾಗಿ ಬಟ್ಟೆ ಬದಲಾಯಿಸಲು ಸ್ಥಳಕ್ಕಾಗಿ ಮಸ್ಟರಿಂಗ್ ಸೆಂಟರ್ ಜಾಗದಲ್ಲಿ ಕೊಠಡಿ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿದ್ದರು.
ಆದರೆ ಆ ಅನುದಾನ ಬೇರೆಯದೇ ಉದ್ದೇಶಕ್ಕೆ ಬಳಕೆಯಾಗಿತ್ತು. ಬರೋಬ್ಬರಿ ಮೂರು ವರ್ಷಗಳ ಬಳಿಕ ಕೇವಲ ಒಂದೇ ಕಡೆ ಕ್ಯಾಬಿನ್ ನಿರ್ಮಾಣವಾಗಿದ್ದು, ಬಳಕೆಗೆ ಲಭ್ಯವಾಗಿದೆ.