ETV Bharat / state

237 ಲೀಟರ್ ಎದೆ ಹಾಲು ಸಂಗ್ರಹ, ಪ್ರತಿದಿನ 1.5 ಲೀಟರ್ ವಿತರಣೆ: ನವಜಾತ ಶಿಶುಗಳಿಗೆ ವರದಾನವಾಯ್ತು ಹ್ಯೂಮನ್ ಮಿಲ್ಕ್ ಬ್ಯಾಂಕ್​ನ ಈ ಕಾರ್ಯ

ಎದೆಹಾಲಿನ ಬೇಡಿಕೆಯನ್ನರಿತ ಸರ್ಕಾರ ಇದೀಗ ನಗರದಲ್ಲಿ ಇನ್ನೊಂದು ಎದೆ ಹಾಲು ಶೇಖರಣಾ ಘಟಕ ಸ್ಥಾಪಿಸಿದೆ. ಇದಕ್ಕೆ ಜುಲೈ 17ರಂದು ಚಾಲನೆ ಸಿಗಲಿದೆ.

ಹ್ಯೂಮನ್ ಮಿಲ್ಕ್ ಬ್ಯಾಂಕ್
ಹ್ಯೂಮನ್ ಮಿಲ್ಕ್ ಬ್ಯಾಂಕ್
author img

By

Published : Jul 16, 2023, 5:20 PM IST

ಬೆಂಗಳೂರು: 2022 ರ ಮಾರ್ಚ್ 8 ರಿಂದ 2023ರ ಜೂನ್ 30 ರ ವರೆಗೆ ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಎದೆ ಹಾಲು ಶೇಖರಣೆ ಘಟಕದಿಂದ 237 ಲೀಟರ್ ಎದೆ ಹಾಲನ್ನು ಸಂಗ್ರಹಿಸಲಾಗಿದೆ. ಈ ಪೈಕಿ ಶಿಶುಗಳಿಗೆ ಪ್ರತಿ ದಿನವೂ ಸುಮಾರು 1.5 ಲೀಟರ್ ಹಾಲನ್ನು ವಿತರಿಸಲಾಗುತ್ತಿದೆ. ಇದರ ಬೇಡಿಕೆಯನ್ನರಿತ ಸರ್ಕಾರ ಈಗ ನಗರದಲ್ಲಿ ಇನ್ನೊಂದು ಎದೆ ಹಾಲು ಶೇಖರಣಾ ಘಟಕ ಸ್ಥಾಪಿಸಿದ್ದು, ನಾಳೆ ( ಜು. 17) ಚಾಲನೆ ದೊರೆಯಲಿದೆ.

ಹುಟ್ಟಿದಾಗಿನಿಂದ ಶಿಶುವಿಗೆ ಆರು ತಿಂಗಳ ಕಾಲ ತಾಯಿ ಹಾಲನ್ನು ಬಿಟ್ಟು ಬೇರೆ ಏನನ್ನು ನೀಡಬಾರದೆಂದು ಮಕ್ಕಳ ತಜ್ಞರು ಸಲಹೆ ನೀಡುತ್ತಾರೆ. ಮಗು ಜನಿಸಿದ ಕೂಡಲೇ ಉತ್ಪತ್ತಿಯಾಗುವ ಕೊಲಸ್ಟ್ರಮ್ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಮುಂತಾದ ಸೋಂಕಿನಿಂದ ಮುಕ್ತವಾಗಿಸುತ್ತದೆ. ಎದೆ ಹಾಲಿನಲ್ಲಿ ಪ್ರೋಟಿನ್ ಅಂಶ, ಕ್ಯಾಲ್ಶಿಯಂ, ಪಾಸ್ಪರೆಸ್ ಹೆಚ್ಚಾಗಿರುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ.

ಹ್ಯೂಮನ್ ಮಿಲ್ಕ್ ಬ್ಯಾಂಕ್
ಹ್ಯೂಮನ್ ಮಿಲ್ಕ್ ಬ್ಯಾಂಕ್

ಅಕಾಲಿಕವಾಗಿ ಹಾಗೂ ತೂಕವಿಲ್ಲದೇ ಜನಿಸಿದ ಶಿಶುಗಳಿಗೆ ಹಾಗೂ ಹಲವು ಕಾರಣಗಳಿಂದ ತಾಯಂದಿರಿಂದ ದೂರ ಉಳಿದಿರುವ ಶೇ.73 ರಷ್ಟು ಶಿಶುಗಳಿಗೆ ಎದೆ ಹಾಲಿನ ಕೊರತೆಯಿದೆ. ಇದಕ್ಕಾಗಿಯೇ ಕಳೆದ ವರ್ಷ ಸರ್ಕಾರ ಹ್ಯೂಮನ್ ಮಿಲ್ಕ್ ಬ್ಯಾಂಕ್ ತೆರೆದಿದ್ದು, ಅಲ್ಲಿ ಶಿಥಿಲೀಕರಣ ಯಂತ್ರ, ಮಿಕ್ಸಿಂಗ್ ಯಂತ್ರ, ಡ್ರೈಯರ್, ಪಾಶ್ಚರೀಕರಿಸುವ ಯಂತ್ರ, ಬ್ರೆಸ್ಟ್ ಪಂಪ್‌ಗಳ ಕಾರ್ಯನಿರ್ವಹಣೆಯಿಂದ ತಾಯಂದಿರಿಗೆ ಹಾಗೂ ಶಿಶುಗಳಿಗೆ ಬಹು ಉಪಯೋಗವಾಗುತ್ತಿದೆ.

ಪ್ರತಿ ಮಗುವಿಗೆ 250 ಎಂ ಎಲ್ ಹಾಲು: ಕಳೆದ ವರ್ಷದ ಜೂನ್​ 30 ರಿಂದ ತಾಯಿ ಎದೆ ಹಾಲು ಶೇಖರಣೆ ಘಟಕದಿಂದ ಪಾಶ್ಚರೀಕರಣ ಮಾಡಿದ 213 ಲೀಟರ್ ಹಾಲು ಸಂಗ್ರಹವಾಗಿದ್ದು, ಇನ್ನೂ 24 ಲೀಟರ್ ಪಾಶ್ಚರೀಕರಣ ಮಾಡಬೇಕಿದೆ. ಒಟ್ಟು 237 ಲೀಟರ್ ಎದೆ ಹಾಲು ಸಂಗ್ರಹವಾಗಿದೆ. ಕಡಿಮೆ ತೂಕವುಳ್ಳ ಶಿಶು, ಅವಧಿಪೂರ್ವ ಶಿಶು, ತಾಯಿ ಮಗುವನ್ನು ಬಿಟ್ಟು ಹೋಗಿರುವ ಶಿಶುಗಳು ಸೇರಿದಂತೆ ಒಟ್ಟು 1500 ಶಿಶುಗಳಿಗೆ ಹಾಲು ಉಚಿತವಾಗಿ ವಿತರಿಸುವ ಕಾರ್ಯ ಮಾಡಲಾಗುತ್ತಿದೆ.

ಹ್ಯೂಮನ್ ಮಿಲ್ಕ್ ಬ್ಯಾಂಕ್
ಹ್ಯೂಮನ್ ಮಿಲ್ಕ್ ಬ್ಯಾಂಕ್

ಪ್ರತಿ ದಿನವೂ ಒಂದು ಮಗುವಿಗೆ ಸರಿಸುಮಾರು 250 ಮಿ.ಲೀ ಹಾಲಿನ ಅಗತ್ಯವಿದ್ದು, ಒಟ್ಟು 5 ರಿಂದ 6 ಮಕ್ಕಳಿಗೆ ಸುಮಾರು 1 ರಿಂದ 1.5 ಲೀಟರ್ ಹಾಲನ್ನು ಮಿಲ್ಕ್ ಬ್ಯಾಂಕ್​ನಿಂದ ನೀಡಲಾಗುತ್ತಿದೆ. ಸದ್ಯ ಕೆ ಆರ್ ಮಾರುಕಟ್ಟೆ ಬಳಿಯ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹುಟ್ಟಿರುವ ಕಂದಮ್ಮಗಳಿಗೆ ಮಾತ್ರ ಈ ಉಪಯೋಗವಾಗುತ್ತಿದೆ. ಹೊರಗಿನ ಯಾವುದೇ ಶಿಶುಗಳಿಗೆ ಎದೆ ಹಾಲು ಶೇಖರಣೆ ಘಟಕದಿಂದ ಹಾಲನ್ನು ನೀಡಲಾಗುತ್ತಿಲ್ಲ. ಆದರೆ, ಹೊರಗಿನಿಂದ ಬಂದು ತಾಯಂದಿರು ಹಾಲನ್ನು ಕೊಟ್ಟು ಹೋಗುತ್ತಿದ್ದಾರೆ.

ಹಾಲು ಶೇಖರಿಸುವ ಬಗೆ: ಮೊದಲು ಅನುಕೂಲವಾಗುವಂತಹ ಬ್ರೆಸ್ಟ್ ಪಂಪ್ ನೀಡಲಾಗುತ್ತದೆ. ಹಾಲು ಸಂಗ್ರಹವಾದ ಬಳಿಕ ಆಳವಾದ ತಾಪಮಾನದಲ್ಲಿ ಶೇಖರಿಸಿಡಲಾಗುತ್ತದೆ. ನಂತರ ಆಸ್ಪತ್ರೆಯಲ್ಲಿರುವ ಮೈಕ್ರೋ ಬಯಾಲಜಿ ಸೆಂಟರ್‌ನಲ್ಲಿ ಪರೀಕ್ಷಿಸಿ, ಎಲ್ಲಾ ಆಯಾಮಗಳಲ್ಲಿ ಎದೆ ಹಾಲು ಸುರಕ್ಷಿತವೆಂದು ಕಂಡು ಬಂದ ಮೇಲೆ ಪಾಶ್ಚರೀಕರಿಸಿದ ಹಾಲನ್ನು ಸ್ವಚ್ಛ ಬಾಟಲಿನಲ್ಲಿ ಕೂಡಿಟ್ಟು, 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸುಮಾರು 6 ತಿಂಗಳವರೆಗೂ ಸಂಗ್ರಹಣೆ ಮಾಡಬಹುದಾಗಿದೆ. ಇದೆಲ್ಲಾ ಪ್ರಕ್ರಿಯೆಯಾದ ನಂತರವೇ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಮಕ್ಕಳಿಗೆ ಕೊಡಲಾಗುತ್ತದೆ.

'ಎದೆ ಹಾಲು ಶೇಖರಣೆಗೆಂದು ಕೆಲ ಯಂತ್ರಗಳು, ಬಾಟಲ್‌ಗಳು ಸೇರಿದಂತೆ ಇತರೆ ಅಗತ್ಯ ಉಪಕರಣಗಳನ್ನು ಡೊನೇಷನ್ ಮೂಲಕ ದಾನಿಗಳು ನೀಡುತ್ತಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಈಗಿರುವುದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ತಾಪಮಾನದ ಯಂತ್ರ ಮತ್ತು ಹೆಚ್ಚಿನ ಸಾಮರ್ಥ್ಯವುಳ್ಳ ಹಾಲು ಸಂಗ್ರಹಣಾ ಯಂತ್ರವನ್ನು ಆಸ್ಪತ್ರೆಗೆ ನೀಡುತ್ತಿದ್ದಾರೆ' ಎಂದು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಸಿ. ಸವಿತಾ ತಿಳಿಸಿದ್ದಾರೆ.

ಘೋಷ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್: ವಾಣಿವಿಲಾಸ ಆಸ್ಪತ್ರೆಯ ಮಾದರಿಯಲ್ಲಿಯೇ ನಗರದ ಬೌರಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತದ ವ್ಯಾಪ್ತಿಯಲ್ಲಿ ಬರುವ ಘೋಷ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸೋಮವಾರದಿಂದ ಪ್ರಾರಂಭವಾಗುತ್ತಿದೆ. ಇದು ರಾಜಧಾನಿಯಲ್ಲಿ ಎರಡನೇ ಎದೆ ಹಾಲಿನ ಘಟಕವಾಗಿದ್ದು, ರೋಟರಿ ಸಂಸ್ಥೆಯ ಸಹಯೋಗದಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ. ಸಿಬ್ಬಂದಿ ತರಬೇತಿ ನಮ್ಮ ಆಸ್ಪತ್ರೆಯಲ್ಲಿಯೇ ಪೂರ್ಣಗೊಂಡಿದೆ. ಎದೆ ಹಾಲು ವಂಚಿತ ಶಿಶುಗಳಿಗೆ ಹಾಲು ನೀಡಲು ಘೋಷ ಆಸ್ಪತ್ರೆ ಸಿದ್ಧಗೊಂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇವರೊಂದು ಸ್ಪೂರ್ತಿ: ಎದೆಹಾಲು ದಾನ ಮಾಡಿ ಕಂದಮ್ಮಗಳ ಹೊಟ್ಟೆ ತುಂಬಿಸುವ ಶ್ರೀವಿದ್ಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.