ETV Bharat / state

ಪ್ರಥಮ ಚಿಕಿತ್ಸೆ, ಜೀವ ಉಳಿಸುವ ಕೌಶಲ್ಯ ತರಬೇತಿ: ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಾಗಾರ - ಬೆಂಗಳೂರಿನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರ

ಬೆಂಗಳೂರಿನಲ್ಲಿ ಅಪೊಲೋ ಆಸ್ಪತ್ರೆ ವತಿಯಿಂದ ಪ್ರಥನ ಚಿಕಿತ್ಸೆ ಹಾಗೂ ಜೀವ ಉಳಿಸಿಕೊಳ್ಳುವ ತರಬೇತಿ ಕಾರ್ಯಾಗಾರ ನಡೆಯಿತು. ಬೈಕ್​ ಸವಾರರು, ಪೊಲೀಸ್ ಸಿಬ್ಬಂದಿ, ಹಿರಿಯ ನಾಗರಿಕರು ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.

ಅಪೊಲೋ ಆಸ್ಪತ್ರೆ ವತಿಯಿಂದ ಪ್ರಥಮ ಚಿಕಿತ್ಸೆ ಹಾಗೂ ಜೀವ ಉಳಿಸುವ ಕೌಶಲ್ಯ ತರಬೇತಿ ನೀಡಲಾಯಿತು
author img

By

Published : Oct 13, 2019, 3:45 PM IST

ಬೆಂಗಳೂರು: ಅಪೊಲೋ ಆಸ್ಪತ್ರೆ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಜೀವ ಉಳಿಸುವ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಬನ್ನೇರುಘಟ್ಟ ರಸ್ತೆಯಲ್ಲಿನ ಅಪೊಲೋ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಪೊಲೋ ಆಸ್ಪತ್ರೆ ವತಿಯಿಂದ ಪ್ರಥಮ ಚಿಕಿತ್ಸೆ ಹಾಗೂ ಜೀವ ಉಳಿಸುವ ಕೌಶಲ್ಯ ತರಬೇತಿ ಕಾರ್ಯಾಗಾರ

ತುರ್ತು ಪರಿಸ್ಥಿತಿ ಅಥವಾ ಅಪಘಾತ ಸಂದರ್ಭಗಳಲ್ಲಿ ರೋಗಿಯನ್ನು ಹೇಗೆ ಆರೈಕೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಯಿತು.

ಸುವರ್ಣ ನಿಮಿಷ ಎಂದು ಕರೆಯಲ್ಪಡುವ ಸಮಯದಲ್ಲಿ ವ್ಯಕ್ತಿಯನ್ನು ಹೇಗೆ ವೈದ್ಯಕೀಯ ಸಾಧನವಿಲ್ಲದೆ ಆರೈಕೆ ಮಾಡಬಹುದು ಹಾಗೂ ಸಾವನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ನುರಿತ ತಜ್ಞರು ಮಾಹಿತಿ ನೀಡಿದರು.

ಅಪಘಾತ ಮಾತ್ರವಲ್ಲದೆ ರಕ್ತಸ್ರಾವ, ಪಾರ್ಶ್ವವಾಯು, ಕಾಲು ಮುರಿತ, ಉಸಿರುಗಟ್ಟುವಿಕೆ, ಹಾವು ಕಡಿತ ಮತ್ತು ವಿದ್ಯುತ್ ಆಘಾತದಿಂದ ಸಾವು ಸಂಭವಿಸಬಹುದು. ಆದರೆ, ಅಂತಹ ಸಂದರ್ಭದಲ್ಲಿ ಜೀವವನ್ನು ಉಳಿಸುವುದು ಹೇಗೆ ಮತ್ತು ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಲಾಯಿತು.

ಮುಂದಿನ ದಿನಗಳ ಕಾಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ, ಹಿರಿಯ ನಾಗರಿಕರ ಕ್ಲಬ್, ಎನ್​ಸಿಸಿ ಕೆಡೆಟ್, ಪೊಲೀಸ್ ಸಿಬ್ಬಂದಿ ಹಾಗೂ ಎನ್​ಜಿಒ ಸಂಸ್ಥೆಗಳಿಗೆ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಡಾ. ವೆಂಕಟೇಶ್ ತಿಳಿಸಿದರು.

Intro:ಬೈಟ್ - ಡಾ.ವೆಂಕಟೇಶ್, ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರು

ಬೈಟ್ _ ದೇವ್ ಪ್ರಭು ಬೈಕ್ ಸವಾರ

ಅಪೊಲೋ ಆಸ್ಪತ್ರೆ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಜೀವ ಉಳಿಸುವ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಇಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

Body:ತುರ್ತು ಪರಿಸ್ಥಿತಿ ಅಥವಾ ಅಪಘಾತ ಸಂದರ್ಭಗಳಲ್ಲಿ ರೋಗಿಯನ್ನು ಹೇಗೆ ಆರೈಕೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಬಾರಿ ಬೈಕ್ ಸವಾರರು ಗಳಿಗೆ ತರಬೇತಿ ಕಾರ್ಯಾಗಾರ ನೀಡಲಾಯಿತು.
ಸುವರ್ಣ ನಿಮಿಷ ಎಂದು ಕರೆಯಲ್ಪಡುವ ಸಮಯದಲ್ಲಿ ವ್ಯಕ್ತಿಯನ್ನು ಹೇಗೆ ವೈದ್ಯಕೀಯ ಸಾಧನ ವಿಲ್ಲದೆ ಆರೈಕೆ ಮಾಡಬಹುದು ಹಾಗೂ ಸಹಾಯವನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ನುರಿತ ತಜ್ಞರು ಮಾಹಿತಿ ನೀಡಿದರು.
ಅಪಘಾತ ಮಾತ್ರವಲ್ಲದೆ ರಕ್ತಸ್ರಾವ ಪಾರ್ಶ್ವವಾಯು ಕಾಲು ಮುರಿತ ಉಸಿರುಗಟ್ಟುವಿಕೆ ಹಾವು ಕಡಿತ ಮತ್ತು ವಿದ್ಯುತ್ ಆಘಾತದಿಂದ ಸಾವು ಸಂಭವಿಸಬಹುದು ಆದರೆ ಅಂತಹ ಸಂದರ್ಭದಲ್ಲಿ ಜೀವವನ್ನು ಉಳಿಸುವುದು ಹೇಗೆ ಮತ್ತು ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಕಾರ್ಯಾಗಾರದ ಮೂಲಕ ಅರಿವು ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ, ಹಿರಿಯ ನಾಗರಿಕರ ಕ್ಲಬ್, ಎನ್ ಸಿಸಿ ಕೆಡೆಟ್, ಪೊಲೀಸ್ ಸಿಬ್ಬಂದಿ ಹಾಗೂ ಎನ್ ಜಿಒ ಸಂಸ್ಥೆಗಳಿಗೆ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಡಾ. ವೆಂಕಟೇಶ್ ತಿಳಿಸಿದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.