ಬೆಂಗಳೂರು: ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಎಂ.ಜಿ. ರಸ್ತೆಯ ಲೇಡಿಸ್ ಬಾರ್ವೊಂದರ ಮಾಲೀಕನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಆರ್ಎಚ್ಪಿ ರಸ್ತೆಯೊಂದರಲ್ಲಿ ಡುಯಟ್ ಲೇಡಿಸ್ ಬಾರ್ ನಡೆಸುತ್ತಿದ್ದ ಮಾಲೀಕ ಮನೀಶ್ ಶೆಟ್ಟಿಗೆ ಗುಂಡು ಬಿದ್ದಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 9 ಗಂಟೆ ವೇಳೆಗೆ ದುಷ್ಕರ್ಮಿಗಳು ಡಬಲ್ ಬ್ಯಾರಲ್ ಗನ್ನಿಂದ ಬಾರ್ ಮಾಲೀಕನ ಮೇಲೆ ಫೈರಿಂಗ್ ಮಾಡಿ ಕ್ಷಣಾರ್ಧದಲ್ಲಿ ತಲೆಮರೆಸಿಕೊಂಡಿದ್ದಾರೆ. ಗುಂಡು ತಗುಲಿದವ ಮಂಗಳೂರಿನಲ್ಲಿ ರೌಡಿಶೀಟರ್ ಆಗಿದ್ದ ಎನ್ನಲಾಗಿದೆ.
ದುಷ್ಕರ್ಮಿಗಳು ಬಾರ್ ಮಾಲೀಕನ ಮೇಲೆ ಫೈರಿಂಗ್ ಮಾಡಿದ್ದಕ್ಕೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಚೆಮ್ಮನೂರು ಜ್ಯೂವೆಲ್ಲರಿ ಶಾಪ್ ಕೇಸ್ ಪ್ರಮುಖ ಆರೋಪಿ ಮನೀಶ್ ಶೆಟ್ಟಿ, ಬನ್ನಂಜೆ ರಾಜನ ಆಪ್ತನಾಗಿದ್ದ. ಮಂಗಳೂರು ಸೇರಿದಂತೆ ಮುಂಬೈಯಲ್ಲೂ ಮನೀಶ್ ಮೇಲೆ ಹಲವು ಪ್ರಕರಣ ದಾಖಲಾಗಿವೆ.