ETV Bharat / state

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಯುಕೊ ಬ್ಯಾಂಕ್​ ಕಟ್ಟಡದಲ್ಲಿ ಅಗ್ನಿ ಅವಘಡ

author img

By

Published : Sep 18, 2019, 8:26 PM IST

ಬೆಂಗಳೂರಿನ ಪ್ರತಿಷ್ಠಿತ ಪ್ರದೇಶವಾಗಿರುವ ಎಂ.ಜಿ.ರಸ್ತೆಯ ಫರಾ ಟವರ್​ನಲ್ಲಿ ಇಂದು ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಎಂ.ಜಿ.ರಸ್ತೆಯ ಫರಾ ಟವರ್​ನಲ್ಲಿ ಅಗ್ನಿ ಅವಘಡ..ಅದೃಷ್ಟವಶಾತ್​ ಕಟ್ಟಡದಲ್ಲಿದ್ದವರು ಸೇಫ್​

ಬೆಂಗಳೂರು: ನಗರದ ಪ್ರತಿಷ್ಠಿತ ಪ್ರದೇಶವಾಗಿರುವ ಎಂ.ಜಿ. ರಸ್ತೆಯ ಫರಾ ಟವರ್​ನಲ್ಲಿ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ.

ಎಂ.ಜಿ.ರಸ್ತೆಯ ಫರಾ ಟವರ್​ನಲ್ಲಿ ಅಗ್ನಿ ಅವಘಡ..ಅದೃಷ್ಟವಶಾತ್​ ಕಟ್ಟಡದಲ್ಲಿದ್ದವರು ಸೇಫ್​

ಎಂ.ಜಿ. ರಸ್ತೆಯ ಫರಾ ಟವರ್ ಯುಕೋ ಬ್ಯಾಂಕ್ ಇರುವ ಆರನೇ ಮಹಡಿಯಲ್ಲಿ ಈ ಅವಘಡ ಸಂಭವಿಸಿದ್ದು, ಮಹಡಿಯಲ್ಲಿರುವ ವೈರಿಂಗ್​ನಲ್ಲಿ ಶಾಕ್ ಸರ್ಕ್ಯೂಟ್ ಉಂಟಾಗಿ ಬೆಂಕಿಯ ಹೊಗೆ 3 ಮತ್ತು 4ನೇ ಮಹಡಿಗೂ ತಲುಪಿತ್ತು. ಆರನೇ ಮಹಡಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಕೆಲಸ‌ ಮಾಡುತ್ತಿದ್ದರು. ಆತಂಕದಿಂದ‌ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಸುನೀಲ್ ಅಗರವಾಲ್ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,‌ ಸುಮಾರು 3 ಘಂಟೆಗೆ ಘಟನೆ ನಡೆದಿದೆ ಅಂತ ಮಾಹಿತಿ ತಿಳಿಯಿತು. ಎಲೆಕ್ಟ್ರಿಕ್ ರೂಂನಲ್ಲಿ ತುಂಬಾ ಕೇಬಲ್ ವೈರ್​ಗಳಿದ್ದವು. ಹೊಗೆ ತುಂಬಾ ಇದ್ದಿದ್ದರಿಂದ ಜನ ಗಾಬರಿಗೊಂಡಿದ್ದರು. ಘಟನೆಯಲ್ಲಿ ಯಾರಿಗೂ ಏನು ತೊಂದರೆಯಿಲ್ಲ ಎಂದು ತಿಳಿಸಿದರು.

ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಹತ್ತಿಕೊಂಡಿರೋ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ. ಕಟ್ಟಡದ ಓಸಿ ಇದೆಯೋ, ಇಲ್ವಾ ಎಂಬುದರ ಬಗ್ಗೆ ಪರಿಶೀಲಿಸುತ್ತೇವೆ. ಬ್ಯಾಂಕ್ ಒಳಗಿನ ಯಾವುದೇ ಪರಿಕರಗಳಿಗೆ ಹಾನಿಯಾಗಿಲ್ಲ. ಸಿಬ್ಬಂದಿ ಭಯಭೀತರಾಗಿ ಕಟ್ಟಡದ ಮೇಲೆ ತೆರಳಿದ್ದರು ಅವರನ್ನ ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

Intro:Body:ಕಾರ್ಲಟನ್ ಭವನ ಅಗ್ನಿ ದುರಂತ ನೆನಪಿಸಿದ ಎಂ.ಜಿ.ರಸ್ತೆ ಕಟ್ಟಡದ ಅಗ್ನಿ ಅವಘಡ

ಬೆಂಗಳೂರು: ಬಹುತೇಕ ಒಂದು ದಶಕದಿಂದ ಹಿಂದೆ ನಡೆದಿದ್ದ ಕಾಲರ್ಟನ್ ಭವನ ಅಗ್ನಿ ದುರಂತ ರೀತಿ ಒಂದು ಕ್ಷಣ ನೆನಪಿಸುವಂತಹ ಘಟನೆ ಇಂದು ರಾಜಧಾನಿಯಲ್ಲಿ ನಡೆದಿದೆ.
ಪ್ರತಿಷ್ಠಿತ ಪ್ರದೇಶ ಹಾಗೂ ಜನಸಂದಣಿ ಪ್ರದೇಶವಾಗಿರುವ ಎಂ.ಜಿ.ರಸ್ತೆಯ ಫರಾ ಟವರ್ ನ ನೆಲಮಹಡಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಬೆಂಕಿ‌ ಹೊತ್ತಿಕೊಳ್ಳುವ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿದ್ದರಿಂದ ಪಕ್ಕದ ಕಟ್ಟಡದಲ್ಲಿದ್ದ ಸುಮಾರು 25 ಅಗ್ನಿ ನಂದಕದಿಂದ ಬೆಂಕಿಯನ್ನು ಸ್ಥಳೀಯರೇ ನಂದಿಸಿ ಮುಂದಾಗಬಹುದಾಗಿದ್ದ ಅನಾಹುತ ತಡೆದರು. ತದ ನಂತರ ಮೂರು ಅಗ್ನಿಶಾಮಕ ವಾಹನಗಳಲ್ಲಿ‌ ಆಗಮಿಸಿದ ಸಿಬ್ಬಂದಿ ಕಟ್ಟಡದೊಳಗೆ ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಆಗಿದ್ದೇನು ?

ಆರು ಅಂತಸ್ತಿನ‌ ಕಟ್ಟಡದ ಇದಾಗಿದ್ದು ಇಂದು ಮಧ್ಯಾಹ್ನ ಸುಮಾರು 2.30ಕ್ಕೆ ಕಟ್ಟಡದ ಮೊದಲ ಮಹಡಿಯಲ್ಲಿ ಯುಕೊ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕ್ ಒಳಗಡೆ ಎಲೆಕ್ಟ್ರಾನಿಕ್ ಪ್ಯಾನೆಲ್ ಇದ್ದು..‌ಇದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.. ಬ್ಯಾಂಕ್ ಸಿಬ್ಬಂದಿ ಕೂಡಲೇ ಇದನ್ನು ಗಮನಿಸಿ ಆತಂಕದಿಂದಲೇ ಹೊರಬಂದು ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿನಂದಕಗಳಿಂಗ ಬೆಂಕಿ ನಂದಿಸಿದರೂ ಹೊಗೆ ಮಾತ್ರ ಮೂರು ಹಾಗೂ‌ ನಾಲ್ಕನೇ‌ ಮಹಡಿಯೊಳಗೂ ಹೊಗೆ ವ್ಯಾಪಿಸಿದೆ. ಕಟ್ಟಡದಿಂದ ಕಾರ್ಯನಿರ್ವಹಿಸುತ್ತಿದ್ದ ಸುಮಾರು 200ಕ್ಕೂ‌ ಹೆಚ್ಚು ಮಂದಿ ಭಯಬಿದ್ದು, ಕೊನೆ ಮಹಡಿಗೆ ಬಂದು ಕಾಪಾಡಿ..ಕಾಪಾಡಿ ಎಂದು ಕೂಗಿಕೊಂಡರು.‌ ಜೀವ ಉಳಿಸಿಕೊಳ್ಳಲು ಕೆಲವರು ಮೇಲೆಯಿಂದ ಕೆಳಗೆ ಇಳಿಯಲು ಪ್ರಯತ್ನಿದ ಘಟನೆಯೂ ನಡೆಯಿತು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಸುನೀಲ್ ಅಗರವಾಲ್ ಪರಿಶೀಲನೆ ನಡೆಸಿದರು. ತದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿದ ಅವರು‌ ಸುಮಾರು ೩ ಘಂಟೆಗೆ ಘಟನೆ ನಡೆದಿದೆ ಅಂತ ಮಾಹಿತಿ ತಿಳಿಯಿತು ಎಲೆಕ್ಟ್ರಿಕ್ ರೂಂನಲ್ಲಿ ತುಂಬಾ ಕೇಬಲ್ ವೈಯರ್ ಗಳಿದ್ದವು. ಹೊಗೆ ತುಂಬಾ ಇದ್ದಿದ್ದರಿಂದ ಜನ ಗಾಬರಿಗೊಂಡಿದ್ದರು. ಘಟನೆಯಲ್ಲಿ ಯಾರಿಗೂ ಏನು ತೊಂದರೆಯಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರೋ ಸಾಧ್ಯತೆಯಿದೆ.ಈ ಬಗ್ಗೆ ತನಿಖೆ ನಡೆಸುತ್ತೇವೆ. ಕಟ್ಟಡದ ಓಸಿ ಇದೆಯೇ ಇಲ್ವಾ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಬ್ಯಾಂಕ್ ಒಳಗಿನ ಯಾವುದೇ ಪರಿಕರಗಳು ಹಾನಿಯಾಗಿಲ್ಲ. ಸಿಬ್ಬಂದಿ ಭಯಭೀತರಾಗಿ ಕಟ್ಟಡದ ಮೇಲೆ ತೆರಳಿದ್ದರೂ ಎಲ್ಲರನ್ನೂ ರಕ್ಷಿಸಲಾಗಿದೆ.

Conclusion:ಬೈಟ್ ಕೊಟ್ಟಿವರ ಹೆಸರು:
ಸುನಿಲ್ ಅಗರವಾಲ್, ಅಗ್ನಿಶಾಮಕ ಇಲಾಖೆಯ ಎಡಿಜಿಪಿ ( ಕ್ಯಾಪ್ ಧರಿಸಿದ್ದು)
ಆಲಿ ಮೌಲಾನ ( ಬಾಟಂ ಸೆಂಟರ್ ಸೆಕ್ಯುರಿಟಿ ಇನ್ ಚಾರ್ಜ್

ನ್ಯುಮಾನ್,
ETV Bharat Logo

Copyright © 2024 Ushodaya Enterprises Pvt. Ltd., All Rights Reserved.