ETV Bharat / state

ಗ್ರಂಥಿಗೆ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ: ಮಾಲೀಕ ಸಜೀವ ದಹನ - ಪೂಜಾ ಸ್ಟೋರ್​ನಲ್ಲಿ ಬೆಂಕಿ

ಅಂಗಡಿ ವೈರಿಂಗ್​ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಿದ್ದಂತೆಯೇ ಅಗ್ನಿ ವ್ಯಾಪಿಸಿದ ಪರಿಣಾಮ ಅಂಗಡಿ ಮಾಲೀಕ ಹೊರಬರಲಾಗದೆ ಸಜೀವ ದಹನವಾಗಿದ್ದಾರೆ. ಬೆಂಗಳೂರಲ್ಲಿ ಈ ದುರ್ಘಟನೆ ಸಂಭವಿಸಿದೆ.

Fire appearing in store for Gantry
ಗಂಥ್ರಿಗೆ ಅಂಗಡಿಯಲ್ಲಿ ಕಾಣಿಸಿಕೊಂಡ ಅಗ್ನಿ: ಮಾಲೀಕ ಸಜೀವ ದಹನ
author img

By

Published : Jul 24, 2020, 5:14 PM IST

ಬೆಂಗಳೂರು: ಗ್ರಂಥಿಗೆ ವ್ಯಾಪಾರ ನಡೆಸುತ್ತಿದ್ದ ಅಂಗಡಿಯಲ್ಲಿ‌ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿ ಮಾಲೀಕ ಸಜೀವವಾಗಿ ದಹನವಾಗಿರುವ ಘಟನೆ ನಗರದಲ್ಲಿ ನಡೆದಿದೆ.

35 ವರ್ಷದ ಮನು ಸಾವನ್ನಪ್ಪಿರುವ ಅಂಗಡಿ ಮಾಲೀಕ. ಮಾರ್ಕೆಟ್ ಬಳಿಯ ಅವೆನ್ಯೂ ರಸ್ತೆ ಬದಿ ಕಿರಿದಾದ ಜಾಗದಲ್ಲಿ ಹಲವು ವರ್ಷಗಳಿಂದ ಗ್ರಂಥಿಗೆ ಅಂಗಡಿ ಇಟ್ಟುಕೊಂಡಿದ್ದರು. ಎಂದಿನಂತೆ ಇಂದು ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದ.‌ ಇಂದು ಮಧ್ಯಾಹ್ನ‌ ಸುಮಾರು 1.30ರ ವೇಳೆಗೆ ಅಂಗಡಿ ವೈರಿಂಗ್​ನಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.

ನೋಡು ನೋಡುತ್ತಿದ್ದಂತೆಯೇ ಅಗ್ನಿ ವ್ಯಾಪಿಸಿದ ಪರಿಣಾಮ ಅಂಗಡಿ ಮಾಲೀಕ ಮನು ಹೊರಬರಲಾಗದೆ ಅಲ್ಲೇ ಸಿಲುಕಿಕೊಂಡಿದ್ದಾನೆ. ಅಗ್ನಿ ಅನಾಹುತ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ‌ ಮೇರೆಗೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಒಳ‌ಪ್ರವೇಶಿಸಿದಾಗ ಮನು ಸಜೀವ ದಹನವಾಗಿರುವುದು ಗೊತ್ತಾಗಿದೆ.

ಅಗ್ನಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.