ETV Bharat / state

ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಆರೋಪ: ಮಾಜಿ ಸಚಿವರ ಪುತ್ರನ ವಿರುದ್ಧ ಎಫ್ಐಆರ್ - ಈಟಿವಿ ಭಾರತ ಕನ್ನಡ

ಬ್ಯಾನರ್​ ಕಟ್ಟುವ ವಿಚಾರಕ್ಕೆ ಗಲಾಟೆ ಆರೋಪ - ಮಾಜಿ ಸಚಿವರ ಪುತ್ರನ ವಿರುದ್ಧ ಎಫ್​​ಐಆರ್​​ ದಾಖಲು

fir-filed-against-katta-subrahmanya-naidus-son-over-banner-issue
ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ: ಮಾಜಿ ಸಚಿವರ ಪುತ್ರನ ವಿರುದ್ಧ ಎಫ್ಐಆರ್
author img

By

Published : Mar 14, 2023, 8:51 PM IST

ಬೆಂಗಳೂರು : ಶ್ರೀನಿವಾಸ ಕಲ್ಯಾಣ ಹಿನ್ನೆಲೆ ಹೆಬ್ಬಾಳ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಭಾವಚಿತ್ರವಿದ್ದ ಬ್ಯಾನರ್ ಕಟ್ಟುತ್ತಿದ್ದ ಯುವಕರ‌ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಡಿ ಮಾಜಿ ಸಚಿವರ ಪುತ್ರ ಸೇರಿ ನಾಲ್ವರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಂತೋಷ್ ಎಂಬುವವರು ನೀಡಿದ ದೂರಿನ ಮೇರೆಗೆ ಕಟ್ಟಾ ಜಗದೀಶ್‌ ಕುಮಾರ್, ಪುನೀತ್ ಸೇರಿ ನಾಲ್ವರ ವಿರುದ್ಧ ಹಲ್ಲೆ, ಜೀವ ಬೆದರಿಕೆ ಹಾಗೂ ಜಾತಿನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಶ್ರೀನಿವಾಸ್ ಕಲ್ಯಾಣೋತ್ಸವ ಹಿನ್ನೆಲೆಯಲ್ಲಿ ಮಾರ್ಚ್ 11ರ ರಾತ್ರಿ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದಲ್ಲಿ ಸಂತೋಷ್, ರಾಜಗೋಪಾಲ್ ಸೇರಿದಂತೆ ಇತರರು ಶಾಸಕರ ಭಾವಚಿತ್ರ ಇರುವ ಬ್ಯಾನರ್ ಕಟ್ಟಲು ಮುಂದಾಗಿದ್ದರು. ಈ ವೇಳೆ ಕಾರಿನಲ್ಲಿ ಸ್ಥಳಕ್ಕೆ ಬಂದ ಜಗದೀಶ್ ಹಾಗೂ ಆತನ ಸಹಚರರು ಯುವಕರನ್ನು ಪ್ರಶ್ನಿಸಿದ್ದಾರೆ. ಯಾವ ಏರಿಯಾದವರು .? ಇಲ್ಲಿಗೆ ಯಾಕೆ ಬಂದಿದ್ದೀರಾ ? ಕೆಳಜಾತಿಯವರು ಇಲ್ಲಿಗೆ ಬರಬಾರದು ಎಂದು‌ ದರ್ಪ‌‌ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.‌‌ ಇದನ್ನು ಪ್ರಶ್ನಿಸಿದಕ್ಕೆ‌ ಕುತ್ತಿಗೆ ಹಿಸುಕಿ ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂದು‌ ಸಂತೋಷ್ ನೀಡಿದ‌ ದೂರಿನ ಮೇರೆಗೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ‌‌.

ಐಫೋನ್​ ಸಮೇತ ಪರಾರಿಯಾಗಿದ್ದ ಡೆಲಿವರಿ ಬಾಯ್ಸ್​ ಬಂಧನ : ಐಫೋನ್‌ಗಳಿದ್ದ ಪಾರ್ಸೆಲ್ ಸಮೇತ ಪರಾರಿಯಾಗಿದ್ದ ಇಬ್ಬರು ಡೆಲಿವರಿ ಬಾಯ್ಸ್​ ಗಳನ್ನು ಕೇಂದ್ರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಸವರಾಜ ಹಾಗೂ ಮಾಳಪ್ಪ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 6.5 ಲಕ್ಷ ಮೌಲ್ಯದ 6 ಐಫೋನ್, 2 ಆ್ಯಪಲ್ ವಾಚ್, ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್, 4 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಹಿನ್ನಲೆ : ಕಳೆದ ಮಾರ್ಚ್ 5ರಂದು ಸುಣಕಲ್ ಪೇಟೆಯ ಅಂಗಡಿಯೊಂದರಲ್ಲಿ ತಸ್ಲೀಂ ಎಂಬವರು ಆರು ಐಫೋನ್‌ಗಳು ಹಾಗೂ ಒಂದು ಆ್ಯಪಲ್ ವಾಚ್ ಖರೀದಿಸಿದ್ದರು. ಬಳಿಕ ಅವರು ವಿಜಯನಗರದ ತಮ್ಮ ಅಂಗಡಿಯ ವಿಳಾಸಕ್ಕೆ ತಲುಪಿಸಲು ಡಂಜೋ ಡೆಲಿವರಿಯನ್ನು ಆಯ್ಕೆ ಮಾಡಿದ್ದರು. ಆದರೆ, ಪಾರ್ಸೆಲ್​​ ಪಡೆದ ಆರೋಪಿಗಳು ಪಾರ್ಸೆಲ್​ ನೀಡದೆ ಪರಾರಿಯಾಗಿದ್ದರು.

ಬಂಧಿತ ಆರೋಪಿಗಳು ನಕಲಿ ದಾಖಲಾತಿ, ಆಧಾರ್ ಕಾರ್ಡುಗಳನ್ನು ನೀಡಿ ಬೇರೆ ಹೆಸರುಗಳಲ್ಲಿ ಡಂಜೋದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಈ ಆರೋಪಿಗಳು ಗ್ರಾಹಕರು ರವಾನಿಸುವ ದುಬಾರಿ ವಸ್ತುಗಳನ್ನು ಸರಿಯಾಗಿ ಡೆಲಿವರಿ ನೀಡದೇ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಸ್ಲೀಂ ಆರೀಫ್​ ಎಂಬವರು ನೀಡಿರುವ ದೂರಿನನ್ವಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌.

ಇದನ್ನೂ ಓದಿ : ಡ್ರಮ್ ನಲ್ಲೇ ಮತ್ತೊಂದು ಶವ ಪತ್ತೆ ಪ್ರಕರಣ.. ಆರೋಪಿಗಳ ಸುಳಿವು ಸಿಕ್ಕಿದೆ ಎಂದ ರೈಲ್ವೆ ಎಸ್ಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.