ETV Bharat / state

ಬಿಡಿಎ ಅಧಿಕಾರಿಗಳ ವಿರುದ್ಧ ಮತ್ತೆ 8 FIR ದಾಖಲು

FIR against BDA officials : ಕಳೆದ ವರ್ಷದ ಅಂತ್ಯದಲ್ಲಿ ಬಿಡಿಎ ಮೇಲೆ ಎಸಿಬಿ ದಾಳಿ ಮಾಡಿ 200 ಕೋಟಿಗೂ ಅಧಿಕ ಮೊತ್ತದ ಅಕ್ರಮ‌ವನ್ನು ಪತ್ತೆ ಹಚ್ಚಿತ್ತು. ಅಲ್ಲದೆ ಕಳೆದ ವಾರವೂ ಬಿಡಿಎ ಅಧಿಕಾರಿಗಳ ಮೇಲೆ ಶೇಷಾದ್ರಿಪುರಂ ಠಾಣೆಯಲ್ಲಿ ಮೂರು ಎಫ್​ಐಆರ್​ಗಳು ದಾಖಲಾಗಿದ್ದವು..

ಬಿಡಿಎ
ಬಿಡಿಎ
author img

By

Published : Jan 25, 2022, 5:12 PM IST

Updated : Jan 25, 2022, 5:18 PM IST

ಬೆಂಗಳೂರು: ಬಿಡಿಎ ಅಂದ್ರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬುದು ಹೋಗಿ ಬೆಂಗಳೂರು ಅವ್ಯವಹಾರ ಪ್ರಾಧಿಕಾರ ಎಂಬಂತಾಗಿದೆ. ಸದಾ ಒಂದಿಲ್ಲೊಂದು ಅವ್ಯವಹಾರಗಳಿಂದಲೇ ಕುಖ್ಯಾತಿಯಾಗಿರುವ ಬಿಡಿಎನಲ್ಲಿ ಮತ್ತೊಂದು ಬೃಹತ್ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಬಿಡಿಎ ಅಧಿಕಾರಿಗಳ ವಿರುದ್ಧ ಸಾಲು ಸಾಲು ಎಫ್ಐಆರ್​ಗಳು ದಾಖಲಾಗುತ್ತಿವೆ.

ಬಿಡಿಎನ ಇಬ್ಬರು ಡೆಪ್ಯುಟಿ ಸೆಕ್ರೆಟರಿಗಳಾದ ಮಂಗಳ, ಅನಿಲ್, ಕೇಸ್ ವರ್ಕರ್​​ಗಳಾದ ಸಂಜಯ್ ಕುಮಾರ್, ಖಮರುನ್ನಿಸಾ, ವೆಂಕಟರಮಣಪ್ಪ, ಸೂಪರವೈಸರ ಮರಿಯಪ್ಪ ಹಾಗೂ ಫಲಾನುಭವಿಗಳಾದ ಅಪ್ಪಯಣ್ಣ, ರುಕ್ಮಿಣಿ ಎಂಬುವರು ಸೇರಿ 15 ಜನರ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ 8 ಎಫ್​ಐಆರ್​ಗಳು ದಾಖಲಾಗಿವೆ.

ಕಳೆದ ವರ್ಷದ ಅಂತ್ಯದಲ್ಲಿ ಬಿಡಿಎ ಮೇಲೆ ಎಸಿಬಿ ದಾಳಿ ಮಾಡಿ 200 ಕೋಟಿಗೂ ಅಧಿಕ ಮೊತ್ತದ ಅಕ್ರಮ‌ವನ್ನು ಪತ್ತೆ ಹಚ್ಚಿತ್ತು. ಅಲ್ಲದೆ ಕಳೆದ ವಾರವೂ ಬಿಡಿಎ ಅಧಿಕಾರಿಗಳ ಮೇಲೆ ಶೇಷಾದ್ರಿಪುರಂ ಠಾಣೆಯಲ್ಲಿ ಮೂರು ಎಫ್​ಐಆರ್​ಗಳು ದಾಖಲಾಗಿದ್ದವು.

ನಕಲಿ ದಾಖಲೆ, ಬಿಡಿಎ ಜಾಗಕ್ಕೆ ಬೋಗಸ್ ದಾಖಲೆ, ಯಾರಿಗೂ ಮಂಜೂರಾದ ಸೈಟ್ ಗಳನ್ನು ಇನ್ಯಾರಿಗೋ ಹಂಚಿಕೆ ಹಾಗೂ ಕಾರ್ನರ್ ಸೈಟ್ ಗಳ ಗೋಲ್ಮಾಲ್ ಇಂತಹದೇ ವಿಚಾರಗಳ ಮೇಲೆ ಎಫ್​​ಐಆರ್​ ದಾಖಲಾಗಿವೆ ಎನ್ನಲಾಗ್ತಿದೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 25, 2022, 5:18 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.