ETV Bharat / state

ಲಂಚ ಪಡೆದ ಆರೋಪ: ಮೂವರು ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್ಐಆರ್​​ - ಸಿಸಿಬಿ ಪೊಲೀಸರು

ಸಿಗರೇಟ್ ವಿತರಕರು ಹಾಗೂ ಮಾಸ್ಕ್ ತಯಾರಿಕಾ ಕಂಪನಿ ಮಾಲೀಕನಿಂದ ಲಂಚ ಪಡೆದ ಆರೋಪದ ಮೇಲೆ ಮೂವರು ಅಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ ಎಫ್​ಐಆರ್ ದಾಖಲಾಗಿದೆ.

sddd
ಮೂವರು ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್ಐಆರ್
author img

By

Published : May 21, 2020, 1:22 PM IST

ಬೆಂಗಳೂರು: ಸಿಗರೇಟ್ ವಿತರಕರು ಹಾಗೂ ಮಾಸ್ಕ್ ತಯಾರಿಕಾ ಕಂಪನಿ ಮಾಲೀಕನಿಂದ ಸಿಸಿಬಿಯ ಎಸಿಪಿ ಹಾಗೂ ಇನ್ಸ್​ಪೆಕ್ಟರ್​ಗಳು ಲಂಚ ಪಡೆದ ಆರೋಪದ ಹಿನ್ನೆಲೆ ಎಸಿಬಿಯಲ್ಲಿ ಎಫ್​ಐಆರ್ ದಾಖಲಾಗಿದೆ.

‌ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸಿಬಿ ಅಧಿಕಾರಿಗಳು, ಮೂವರ ವಿರುದ್ಧ ಎಫ್​​ಐಆರ್ ದಾಖಲಿಸಿದ್ದಾರೆ. ಎಸಿಪಿ ಪ್ರಭುಶಂಕರ್​ರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಎಸಿಬಿ‌ ಪಿಸಿ ಆ್ಯಕ್ಟ್ (ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್) ಅಡಿಯಲ್ಲಿ ತನಿಖೆ ನಡೆಸಲಿದ್ದಾರೆ. ಸದ್ಯ ಎಸಿಬಿಗೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಕೂಡ ತನಿಖೆಯ ವರದಿ ನೀಡಲಿದ್ದಾರೆ.

ಸಿಸಿಬಿಯ ಎಸಿಪಿ ಪ್ರಭುಶಂಕರ್, ಇನ್ಸ್​ಪೆಕ್ಟರ್​ಗಳಾದ ಅಜಯ್ ಹಾಗೂ ನಿರಂಜನ್ ಸಿಗರೇಟ್ ವಿತರಕರಿಂದ ಸುಲಿಗೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಸಿಸಿಬಿ ಡಿಸಿಪಿ ರವಿಕುಮಾರ್ ತನಿಖೆ ನಡೆಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.