ETV Bharat / state

ಶಾಸಕ ಜಮೀರ್ ದೂರು ಹಿನ್ನೆಲೆ: ಪ್ರಶಾಂತ್ ಸಂಬರಗಿ ವಿರುದ್ಧ ಎಫ್​ಐಆರ್​ - ಪ್ರಶಾಂತ್ ಸಂಬರಗಿ ಸುದ್ದಿ,

ಡ್ರಗ್ಸ್​​ ಕೇಸ್​ಗೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್​ ದೂರು ನೀಡಿರುವ ಹಿನ್ನೆಲೆ ಪ್ರಶಾಂತ್ ಸಂಬರಗಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

FIR against Prashanth Sambargi, FIR against Prashanth Sambargi in Bangalore, zameer ahmed, zameer ahmed news, zameer ahmed latest news, Prashanth Sambargi, Prashanth Sambargi news, Prashanth Sambargi latest news, ಪ್ರಶಾಂತ್ ಸಂಬರಗಿ ವಿರುದ್ದ ಎಫ್​ಐಆರ್, ಬೆಂಗಳೂರಿನಲ್ಲಿ ಪ್ರಶಾಂತ್ ಸಂಬರಗಿ ವಿರುದ್ದ ಎಫ್​ಐಆರ್, ಜಮೀರ್ ಅಹಮ್ಮದ್, ಜಮೀರ್ ಅಹಮ್ಮದ್ ಸುದ್ದಿ, ಜಮೀರ್ ಅಹಮ್ಮದ್ 2020 ಸುದ್ದಿ, ಪ್ರಶಾಂತ್ ಸಂಬರಗಿ, ಪ್ರಶಾಂತ್ ಸಂಬರಗಿ ಸುದ್ದಿ, ಪ್ರಶಾಂತ್ ಸಂಬರಗಿ 2020 ಸುದ್ದಿ,
ಪ್ರಶಾಂತ್ ಸಂಬರಗಿ ವಿರುದ್ದ ಎಫ್​ಐಆರ್
author img

By

Published : Sep 11, 2020, 1:26 PM IST

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಬಗ್ಗೆ ಅವಹೇಳನಾಕಾರಿಯಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾತಾನಾಡಿದ ಕಾರಣ ಚಾಮಾರಾಜಪೇಟೆ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಚಾಮಾರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಈ ಬಗ್ಗೆ ನೀಡಿರುವ ದೂರಿನ ಆಧಾರದ ಮೇರೆಗೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಐಪಿಸಿ ಸೆಕ್ಷನ್120 (B) ಒಳಸಂಚು, 504 ನಕಲಿ ದಾಖಲೆ, 506 ಬೆದರಿಕೆ, 463, 465 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ‌.

ಆರೋಪವೇನು...?

ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ‌ ಪ್ರಕರಣ ಬೆಳಕಿಗೆ ಬರ್ತಿದ್ದ ಹಾಗೆ ಪ್ರಶಾಂತ್ ಸಂಬರಗಿ ಶಾಸಕ ಜಮೀರ್ ಬಗ್ಗೆ ಬಹಳ ಅವಹೇಳನಕಾರಿ ಮಾತಾಡಿದ್ದರಂತೆ. ಹಾಗೆ ಪ್ರಕರಣದಲ್ಲಿ ಅನಗತ್ಯವಾಗಿ ಹೆಸರನ್ನ ತಂದಿದ್ದಾರೆ. ಜಮೀರ್ ಅಹ್ಮದ್ ಶ್ರೀಲಂಕಾದ ಕೆಸಿನೋಗೆ ತೆರಳಿದ್ದಾರೆ. ಹಾಗೆ ಬಂಧಿತ ಆರೋಪಿಗಳ ಜೊತೆ ಜಮೀರ್ ಸಂಪರ್ಕ ಹೊಂದಿದ್ದಾರೆ ಎಂದು ಹೀಗೆ ಹಲವಾರು ವಿಚಾರಗಳ‌ ಬಗ್ಗೆ ಆರೋಪ‌ ಮಾಡಿದ್ರು.

ಇದೆಲ್ಲಾ ಸುಳ್ಳು. ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಚಾಮರಾಜಪೇಟೆ ಠಾಣೆಯಲ್ಲಿ ಜಮೀರ್​ ಅಹ್ಮದ್​ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಮೊದಲು ಎನ್​ಸಿಆರ್ ದಾಖಲಿಸಿದ್ದರು. ಅದನ್ನು ಸದ್ಯ ಎಫ್ಐಆರ್​ಗೆ ಬದಲಾಯಿಸಿ ಮಾಡಿ ತನಿಖೆ ಮುಂದುವರೆಸಿದ್ದೇವೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.