ಬೆಂಗಳೂರು: ಕರ್ತವ್ಯನಿರತ ಕಂದಾಯ ಇಲಾಖೆ ನೌಕರನ ಮೇಲೆ ವಕೀಲರೊಬ್ಬರು ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ.ಕೃಷ್ಣಮೂರ್ತಿ ಹಲ್ಲೆಗೊಳಗಾದವರು. ಉಮೇಶ್ ಎಂ.ಕುಂದನ್ ಹಲ್ಲೆ ಮಾಡಿದ ವಕೀಲರು. ಕೃಷ್ಣಮೂರ್ತಿ ಕಂದಾಯ ಇಲಾಖೆ ದ್ವಿತಿಯ ದರ್ಜೆ ಸಹಾಯಕರಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅ.28ರಂದು ಕಾರ್ಯ ನಿರ್ವಹಿಸುತ್ತಿದ್ದಾಗ ಸಂಜೆ 4.30ರ ಸಮಯದಲ್ಲಿ ಉಮೇಶ್ ಎಂ.ಕುಂದನ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಏಕಾಏಕಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.
ಘಟನೆಯ ಸಂಬಂಧ ಕಂದಾಯ ಇಲಾಖೆಯ ನೌಕರರ ಸಂಘ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.
ಇದನ್ನೂ ಓದಿ: ರಾಯಚೂರು: ಬಿಜೆಪಿ ಕಾರ್ಯಕರ್ತರಿಂದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಮೇಲೆ ಹಲ್ಲೆ ಆರೋಪ