ETV Bharat / state

ಕೊರೊನಾ ಹಬ್ಬಿಸುತ್ತಿದ್ದಾರೆಂದು ಹಲ್ಲೆಗೆ ಮುಂದಾದ ಆರೋಪ : ಮೂವರ ವಿರುದ್ಧ ಎಫ್​ಐಅರ್​ - ಕೊರೊನಾ ಹರಡುವ ಆರೋಪ

ಕೆಲ‌ ತಿಂಗಳಿಂದ ಪ್ರಿಯದರ್ಶಿನಿಯ ತಾಯಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದರು..

FIR against 3 people who tried to assault on neighbor
ನೆರೆ ಮನೆಯವರ ಮೇಲೆ ಹಲ್ಲೆ
author img

By

Published : May 17, 2021, 1:41 PM IST

ಬೆಂಗಳೂರು : ಕೊರೊನಾ ಹಬ್ಬಿಸುತ್ತಿದ್ದಾರೆಂದು ನರ್ಸಿಂಗ್ ವಿದ್ಯಾರ್ಥಿನಿ ಹಾಗೂ ಕುಟುಂಬಸ್ಥರೊಂದಿಗೆ ಗಲಾಟೆ ಮಾಡಿ ಹಲ್ಲೆಗೆ ಮುಂದಾದ ಆರೋಪದ ಮೇಲೆ ಸ್ಥಳೀಯರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ‌.

ಹಲ್ಲೆಗೊಳಗಾದ ಲಕ್ಷ್ಮಿಪುರ‌ದ ನಿವಾಸಿ ಪ್ರಿಯದರ್ಶಿನಿ ಎಂಬುವರು ನೀಡಿದ‌ ದೂರಿನ‌ ಮೇರೆಗೆ ರಾಮ್, ಪ್ರಭು ಹಾಗೂ ಅರ್ಜುನ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ‌‌.

FIR against 3 people who tried to assault on neighbor
ದೂರಿನ ಪ್ರತಿ

ಓದಿ : ಸಿಮ್​ಕಾರ್ಡ್‌ ದಾಖಲೆ ಪರಿಶೀಲನೆ ನೆಪದಲ್ಲಿ ದಂಪತಿಗೆ 5 ಲಕ್ಷ ರೂ. ವಂಚನೆ

ಕೆಲ‌ ತಿಂಗಳಿಂದ ಪ್ರಿಯದರ್ಶಿನಿಯ ತಾಯಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದರು.

ಈ ನಡುವೆ ಮೇ 14 ರಂದು ಪ್ರಿಯದರ್ಶಿನಿ ಮನೆಗೆ ಬಂದ ನೆರೆಹೊರೆ‌ ಮನೆಯ ‌ನಿವಾಸಿಗಳಾದ ರಾಮ್, ಪ್ರಭು ಹಾಗೂ ಅರ್ಜುನ್ ಎಂಬವರು ನಿಮ್ಮಿಂದ ನಮಗೆಲ್ಲ‌ ಸೋಂಕು ಹಬ್ಬುತ್ತಿದೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ‌ ಮತ್ತು ನಮ್ಮ ಕುಟುಂಬಸ್ಥರ ಮೇಲೆ ಹಲ್ಲೆಗೆ ಮಂದಾಗಿದ್ದಾರೆ ಎಂದು‌ ಪ್ರಿಯದರ್ಶಿನಿ ದೂರಿನಲ್ಲಿ‌‌ ಉಲ್ಲೇಖಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.