ETV Bharat / state

ಸಂಚಾರಿ ನಿಯಮ ಉಲ್ಲಂಘನೆ: ಕೊರೊನಾ ಕರಿನೆರಳಿನಲ್ಲೂ ದಾಖಲೆಯ ದಂಡ ಸಂಗ್ರಹ - Bangalore city traffic police

ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ₹89,18,84,635 ರೂ. ದಂಡ ಸಂಗ್ರಹವಾಗಿತ್ತು. ಈವರೆಗೂ 7,32,489 ಸಂಚಾರಿ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ₹83,22,22,910 (83 ಕೋಟಿ) ರೂ ದಂಡ ಸಂಗ್ರಹವಾಗಿದೆ.

traffic violations
ಸಂಚಾರಿ ನಿಯಮ ಉಲ್ಲಂಘನೆ
author img

By

Published : Dec 24, 2020, 5:05 PM IST

ಬೆಂಗಳೂರು: ದಂಡ ಹೆಚ್ಚಾದಂತೆ ಸಂಚಾರಿ ನಿಯಮ ಉಲ್ಲಂಘಿಸುವ ಸವಾರರ ಸಂಖ್ಯೆಯೂ ಏರಿಕೆಯಾಗಿದೆ. ಈ ವರ್ಷದ ಆರಂಭದಿಂದ ನವೆಂಬರ್​ ಅಂತ್ಯಕ್ಕೆ ನಗರ ಸಂಚಾರಿ ಪೊಲೀಸರು 7,32,489 ಸಂಚಾರಿ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದು, ₹83,22,22,910 ರೂ. ದಂಡ ಸಂಗ್ರಹಿಸಿದ್ದಾರೆ.

ಡಿಸೆಂಬರ್ ಅಂತ್ಯಕ್ಕೆ ₹7 ರಿಂದ 8 ಕೋಟಿ ದಂಡ ಹೆಚ್ಚಾಗುವ ಸಾಧ್ಯತೆಯಿದ್ದು, ದಂಡ ಸಂಗ್ರಹ ₹90 ಕೋಟಿ ಮುಟ್ಟಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಕಳೆದ ವರ್ಷ ₹ 89,18,84,635 ದಂಡ ಸಂಗ್ರಹವಾಗಿತ್ತು. ಈ ವರ್ಷ ಕೊರೊನಾ ಕರಿಛಾಯೆ ನಡುವೆಯೂ ದೊಡ್ಡ ಪ್ರಮಾಣದಲ್ಲಿ ದಂಡ ಸಂಗ್ರಹವಾಗುವ ಮೂಲಕ ಅಚ್ಚರಿ ಮೂಡಿಸಿದೆ.

ಸಂಚಾರಿ ದಟ್ಟಣೆಗೆ ಕಾರಣ: ನಗರದಲ್ಲಿ ಐಟಿ ಕಂಪನಿಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳ ತೀವ್ರ ಬೆಳವಣಿಗೆ, ಅವೈಜ್ಞಾನಿಕ ಕಾಮಗಾರಿ, ಕಟ್ಟಡಗಳ ನಿರ್ಮಾಣ, ಜನಸಂಖ್ಯಾ ಸ್ಫೋಟ ಮತ್ತು ವಾಹನಗಳ ಸಂಖ್ಯೆ ಹೆಚ್ಚಳ (1 ಕೋಟಿಗೂ ಅಧಿಕ) ಕಾರಣದಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳೂ ಹೆಚ್ಚಾಗುತ್ತಿವೆ.

ಕೊರೊನಾ ಭಯದಿಂದ ಸಾರ್ವಜನಿಕ ಸಾರಿಗೆ ಬದಲಿಗೆ ಸ್ವಂತ ವಾಹನಗಳ ಖರೀದಿಗೆ ಜನರು ಒಲವು ತೋರುತ್ತಿದ್ದಾರೆ. ಇದರಿಂದ ಸುಮಾರು ಶೇ.9ರಷ್ಟು ನೋಂದಾಯಿಸಿದ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ದ್ವಿಚಕ್ರ ವಾಹನಗಳು ಶೇ.70ರಷ್ಟಿದ್ದು, ಕಾರುಗಳ ಬಳಕೆ ಶೇ.15ರಷ್ಟು, ಆಟೋಗಳ ಸಂಖ್ಯೆ ಶೇ.4ರಷ್ಟು ಹಾಗೂ ಬಸ್, ವ್ಯಾನ್ ಮತ್ತು ಟೆಂಪೋಗಳ ಸಂಖ್ಯೆ ಶೇ.7 ರಿಂದ 11ರಷ್ಟಿದೆ.

ಹೆಲ್ಮೆಟ್ ಧರಿಸದ ಪ್ರಕರಣಗಳೇ ಹೆಚ್ಚಾಗಿದ್ದು, 27,59,480 ಮಂದಿ ವಿರುದ್ಧ ಎಫ್​​ಐಆರ್​​ ದಾಖಲಾಗಿದೆ. ಹಿಂಬದಿ ಸವಾರರು ಹೆಲ್ಮೆಟ್​ ಧರಿಸದವರ ವಿರುದ್ಧ 16,62,029 ಪ್ರಕರಣ, ಕೆಂಪು ದೀಪ ಸಂಚಾರ ಉಲ್ಲಂಘನೆ 8,12,108 ಹಾಗೂ ನೋ ಪಾರ್ಕಿಂಗ್ ಮಾಡಿದವರ ವಿರುದ್ಧ 6,17,572 ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.