ETV Bharat / state

ಒಂಚೂರು ಗಮನಿಸಿ.. ವಾಹನ ಚಲಾಯಿಸುವಾಗ ಇನ್ಮೇಲೆ ಇಯರ್ ಫೋನ್​​ ಬಳಸಿದರೆ ದಂಡ..

ವಾಹನಗಳಲ್ಲಿ ಚಲಿಸುವಾಗ ಟ್ರಾಫಿಕ್‍ನಲ್ಲಿ ರೆಡ್ ಸಿಗ್ನಲ್ ಬಿದ್ದಾಗ ಕೂಡ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಮೊಬೈಲ್ ಬಳಕೆಯಿಂದ ಅಕ್ಕಪಕ್ಕದ ವಾಹನ ಸವಾರರಿಗೆ ತೊಂದರೆಯಾಗಲಿದೆ ಎಂಬುದು ಕಾನೂನಿನ ವಾದವಾಗಿದೆ. ಅದೇ ರೀತಿ ಕಾರು ಚಾಲಕರು ಆಧುನಿಕ ಸಾಧನಗಳನ್ನು ಬಳಸಿ ಸಿಗ್ನಲ್‌ನಲ್ಲಿ ಲೌಡ್ ಸ್ಪೀಕರ್ ಹಾಕಿ ಮಾತನಾಡುವುದು ಕೂಡ ಕಾನೂನು ಬಾಹಿರ..

author img

By

Published : Oct 1, 2021, 8:25 PM IST

ವಾಹನ ಚಲಾಯಿಸುವಾಗ ಇನ್ಮೇಲೇ ಇಯರ್ ಫೋನ್​​ ಬಳಸಿದರೆ ಬೀಳುತ್ತೆ ದಂಡ

ಬೆಂಗಳೂರು : ವಾಹನ ಚಾಲನೆ ಮಾಡುವ ವೇಳೆ ಫೋನ್ ಜತೆಗೆ ಬ್ಲ್ಯೂಟೂತ್, ಹೆಡ್ ಫೋನ್ ಬಳಸುವುದು ಕಾನೂನು ಬಾಹಿರವಾಗಿದೆ. ಸಿಕ್ಕಿಬಿದ್ದರೆ ಅಂತಹವರಿಗೆ ಸಂಚಾರ ಪೊಲೀಸರು 1000 ರೂ. ದಂಡ ವಿಧಿಸಲಿದ್ದಾರೆ. ಹೆಡ್ ಫೋನ್ ಅಥವಾ ಇಯರ್ ಫೋನ್ ಧರಿಸಿ ವಾಹನ ಚಾಲನೆ ಮಾಡಿದರೆ ಅಂತಹವರನ್ನು ಸಂಚಾರಿ ನಿಯಮ ಉಲ್ಲಂಘನೆ ಅಡಿ ಸೇರಿಸಿ, ದಂಡ ವಿಧಿಸಿ ರಶೀದಿ ನೀಡಲಾಗುವುದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಫೋನ್ ಜೇಬಿನಲ್ಲಿಟ್ಟುಕೊಂಡು ಬ್ಲ್ಯೂಟೂತ್ ಅಥವಾ ಇಯರ್ ಫೋನ್ ಡಿವೈಸ್ ಮೂಲಕ ಮಾತನಾಡುವುದು ಕೂಡ ನಿಯಮ ಉಲ್ಲಂಘನೆಯಾಗಲಿದೆ. ಕಾನೂನಿನ ಪ್ರಕಾರ ವಾಹನಗಳನ್ನು ಚಲಾಯಿಸುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. ಹೀಗಾಗಿ, ವಾಹನ ಸವಾರರು ಎಚ್ಚೆತ್ತುಕೊಳ್ಳುವುದು ಒಳಿತು ಎಂದು ತಿಳಿಸಿದ್ದಾರೆ.

ಸಿಗ್ನಲ್‌ನಲ್ಲಿ ನಿಂತು ಮಾತನಾಡುವಂತಿಲ್ಲ : ವಾಹನಗಳಲ್ಲಿ ಚಲಿಸುವಾಗ ಟ್ರಾಫಿಕ್‍ನಲ್ಲಿ ರೆಡ್ ಸಿಗ್ನಲ್ ಬಿದ್ದಾಗ ಕೂಡ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಮೊಬೈಲ್ ಬಳಕೆಯಿಂದ ಅಕ್ಕಪಕ್ಕದ ವಾಹನ ಸವಾರರಿಗೆ ತೊಂದರೆಯಾಗಲಿದೆ ಎಂಬುದು ಕಾನೂನಿನ ವಾದವಾಗಿದೆ. ಅದೇ ರೀತಿ ಕಾರು ಚಾಲಕರು ಆಧುನಿಕ ಸಾಧನಗಳನ್ನು ಬಳಸಿ ಸಿಗ್ನಲ್‌ನಲ್ಲಿ ಲೌಡ್ ಸ್ಪೀಕರ್ ಹಾಕಿ ಮಾತನಾಡುವುದು ಕೂಡ ಕಾನೂನು ಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲನೆ ವೇಳೆ ಹೆಡ್ ಫೋನ್ ಅಥವಾ ಬ್ಲ್ಯೂಟೂತ್ ಡಿವೈಸ್ ಮೂಲಕ ಮ್ಯೂಸಿಕ್ ಕೇಳುವುದು, ಕೈಯಲ್ಲಿ ಮೊಬೈಲ್ ಹಿಡಿದು ಗೂಗಲ್ ಮ್ಯಾಪ್ ನೋಡುವುದು ಸಂಚಾರ ನಿಯಮ ಉಲ್ಲಂಘನೆಯಾಗಲಿದೆ. ಹಾಗಾಗಿ, ಬೈಕ್ ಅಥವಾ ಕಾರುಗಳಲ್ಲಿ ಫೋನ್ ಹೋಲ್ಡರ್ ಅಳವಡಿಸಿ ಮ್ಯಾಪ್ ವೀಕ್ಷಿಸಲು ಅವಕಾಶವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.