ಬೆಂಗಳೂರು: ಕೋವಿಡ್ 19 ಲಾಕ್ಡೌನ್ನಿಂದ ರಾಜ್ಯ ಸರ್ಕಾರದ ಆದಾಯ ಕ್ಷೀಣಿಸಿರುವ ಹಿನ್ನೆಲೆ, ಖರ್ಚು ವೆಚ್ಚಗಳನ್ನು ಕೇವಲ ವೇತನ, ಪಿಂಚಣಿ, ಆಹಾರ ಭದ್ರತೆ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ಸೀಮಿತಗೊಳಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿದೆ.
ಆದ್ಯತೆ ಮೇರೆಗೆ ಕೊರೊನಾ ಹೋರಾಟಕ್ಕಾಗಿನ ಖರ್ಚು, ವೆಚ್ಚಗಳಿಗೆ ಹಣ ನೀಡುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಏಪ್ರಿಲ್ ತಿಂಗಳಿಗೆ ಅನ್ವಯವಾಗುವಂತೆ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಹಣಕಾಸು ಅಧಿಕಾರವನ್ನು ನೀಡಲಾಗಿದೆ. ಅದರಂತೆ ವೇತನ, ಪಿಂಚಣಿ, ಕಚೇರಿ ವೆಚ್ಚ, ದೂರವಾಣಿ ಶುಲ್ಕ, ಸಂಚಾರ ವೆಚ್ಚ, ಕಟ್ಟಡ ವೆಚ್ಚ, ಸಾರಿಗೆ ವೆಚ್ಚ, ಗುಪ್ತಚರ ಸೇವೆ ವೆಚ್ಚ, ಆಸ್ಪತ್ರೆ, ಪಶು ಆಸ್ಪತ್ರೆಗಳಿಗೆ ಔಷಧ ಖರೀದಿ, ನಿವೃತ್ತಿ ವೇತನ, ಸಾಮಾಜಿಕ ಭದ್ರತಾ ಪಿಂಚಣಿ, ಅನ್ನಭಾಗ್ಯದಡಿ ನೀಡುವ ಸಹಾಯಧನ, ಆರೋಗ್ಯ ಕವಚ, ಆರೋಗ್ಯ ಸಂಸ್ಥೆಗಳ ನಿರ್ವಹಣಾ ವೆಚ್ಚಗಳಿಗೆ ಬಜೆಟ್ನಲ್ಲಿ ಮೀಸಲಿಟ್ಟಿರುವ 1/12ರಷ್ಟು ಹಣವನ್ನು ಬಿಡುಗಡೆ ಮಾಡಬಹುದಾಗಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ಈ ಮೇಲಿನ ವೆಚ್ಚಗಳನ್ನು ಬಿಟ್ಟು ಇತರ ಖರ್ಚಿಗಾಗಿ ಹಣದ ಅಗತ್ಯವಿದ್ದರೆ ಅದಕ್ಕಾಗಿ ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕಾಗಿದೆ. ಕೇವಲ ಮಾರ್ಚ್ ತಿಂಗಳ ವೇತನವನ್ನು ಮಾತ್ರ ಬಿಡುಗಡೆ ಮಾಡಬಹುದು ಎಂದು ನಿರ್ದೇಶನ ನೀಡಿದೆ.ಮಹೊಸ ವಾಹನ, ಪೀಠೋಪಕರಣಗಳ ಖರೀದಿ, ಕಟ್ಟಡಗಳ ದುರಸ್ತಿ ಕಾರ್ಯ, ನಿರ್ಮಾಣವನ್ನು ಮಾಡುವಂತಿಲ್ಲ ಎಂದು ಆರ್ಥಿಕ ಇಲಾಖೆ ಇದೇ ವೇಳೆ ತಿಳಿಸಿದೆ.
ಅಗತ್ಯ ವೆಚ್ಚಗಳಿಗೆ ಮಾತ್ರ ಹಣ, ಕೊರೊನಾ ನಿರ್ವಹಣೆಗೆ ಮೊದಲ ಆದ್ಯತೆ: ಆರ್ಥಿಕ ಇಲಾಖೆ ಸೂಚನೆ
ಸುದೀರ್ಘ ಲಾಕ್ ಡೌನ್ ಹಿನ್ನೆಲೆ ರಾಜ್ಯ ಸರ್ಕಾರದ ಆದಾಯ ಕ್ಷೀಣಿಸಿದ್ದು, ಅತ್ಯಗತ್ಯ ಖರ್ಚು ವೆಚ್ಚಗಳಿಗೆ ಮಾತ್ರ ಹಣ ಬಿಡುಗಡೆ ಮಾಡುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ.