ETV Bharat / state

ಪಕ್ಷಗಳ ಉಚಿತ ಕೊಡುಗೆ ಘೋಷಣೆಗೆ ನನ್ನ ವಿರೋಧವಿದೆ: ಸಚಿವೆ ನಿರ್ಮಲಾ ಸೀತಾರಾಮನ್ - finance minister opposes free bee politics

ಥಿಂಕರ್ಸ್ ಫೋರಂ ಕರ್ನಾಟಕದ ವತಿಯಿಂದ ಜಯನಗರದ ಆರ್. ವಿ. ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿ ಮಾತನಾಡಿದರು.

Etv Bharat
Etv Bharat
author img

By

Published : Apr 23, 2023, 5:42 PM IST

ಪಕ್ಷಗಳ ಉಚಿತ ಕೊಡುಗೆಗಳ ಘೋಷಣೆ ಕುರಿತು ನನ್ನ ವಿರೋಧವಿದೆ: ನಿರ್ಮಲಾ ಸೀತಾರಾಮನ್

ಬೆಂಗಳೂರು: ಚುನಾವಣೆಗಳನ್ನು ಗೆಲ್ಲಲು ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುತ್ತಿವೆ. ಇದನ್ನು ನಾನು ವಿರೋಧಿಸುತ್ತೇನೆ. ರಾಜ್ಯದ ಬಜೆಟ್​ಗೆ ಪೂರಕವಾದ ಅಭಿವೃದ್ಧಿ ಕೆಲಸಗಳಿಗೆ ಮೊದಲು ಆದ್ಯತೆ ಕೊಟ್ಟು ನಂತರ ಉಚಿತ ಕೊಡುಗೆಗಳ ಬಗ್ಗೆ ಯೋಚಿಸುವುದು ಜವಾಬ್ದಾರಿಯುತ ರಾಜಕೀಯ ಪಕ್ಷಗಳ ನಿಲುವಾಗಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.

ಥಿಂಕರ್ಸ್ ಫೋರಂ ಕರ್ನಾಟಕದ ವತಿಯಿಂದ ಜಯನಗರದ ಆರ್.ವಿ. ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಉಚಿತ ಕೊಡುಗೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಭರವಸೆಗಳನ್ನು ನೀಡಲಾಗುತ್ತದೆ. ಅಧಿಕಾರಕ್ಕೆ ಬಂದ ನಂತರ ಬಜೆಟ್ ಪರಿಶೀಲಿಸಿದ ನಂತರ ಅದು ಸಾಧ್ಯವಿಲ್ಲ ಎಂದು ತಿಳಿಯುತ್ತದೆ. ರೈತರಿಗೆ, ಬಡವರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಇಂತಹ ಭರವಸೆಗಳನ್ನು ಈಡೇರಿಸಿ, ಉತ್ಪಾದನಾ ಕಂಪನಿಗಳಿಗೆ ಹಣ ಪಾವತಿ ಮಾಡಲಾಗುತ್ತಿಲ್ಲ ಎಂದು ಹೇಳಿದರು.

ರಾಜ್ಯದ ಆರ್ಥಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಭರವಸೆಗಳನ್ನು ನೀಡಬೇಕು ಮತ್ತು ಅದರ ಬಗ್ಗೆ ಸಂಪೂರ್ಣ ಪಾರದರ್ಶಕತೆ ಇರಬೇಕು. ಉಚಿತ ಕೊಡುಗೆಗಳನ್ನು ಸಹ ಬಜೆಟ್‌ನಲ್ಲಿ ತೋರಿಸಬೇಕಿದೆ. ವರ್ಷದ ಕೊನೆಯಲ್ಲಿ ಅದನ್ನು ಮತ್ತೆ ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಣಕಾಸಿಗೆ ಸಂಬಂಧಿಸಿದ ಅಪಾಯಗಳ ಬಗೆಗಿನ ಪ್ರಶ್ನೆಗೆ ಉತ್ತರಿಸಿ, ಹೂಡಿಕೆ ಮತ್ತು ಉಳಿತಾಯದ ಬಗ್ಗೆ ಉತ್ತಮ ಸಲಹೆ ನೀಡುವ ಕೆಲವು ಉತ್ತಮ ತಜ್ಞರು ಇದ್ದರೂ, ಜನರನ್ನು ದಾರಿತಪ್ಪಿಸುವ ಅಥವಾ ಹೆಚ್ಚಿನ ಆದಾಯವನ್ನು ಭರವಸೆ ನೀಡುವ ಸಂಶಯಾಸ್ಪದ ಅಪ್ಲಿಕೇಶನ್‌ಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಇಂತಹ ಆ್ಯಪ್‌ಗಳನ್ನು ನಿರ್ಬಂಧಿಸಲು ಮತ್ತು ನಾಗರಿಕರ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ರಕ್ಷಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದರು.

ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ ಮಾತನಾಡಿದ ಸೀತಾರಾಮನ್, ಹಲವು ವರ್ಷಗಳ ಹಿಂದೆ ನಾನು ಈ ಸಂವಾದಗಳನ್ನು ನಗರದಲ್ಲಿ ಮಾಡಿದ್ದೆ. ನಾನು ಸಾಮಾನ್ಯ ಉಪನ್ಯಾಸಗಳಿಗಿಂತ ಸಂವಾದಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ. ಸಾಮಾನ್ಯವಾಗಿ ಸಂವಾದಗಳು ಕೆಲಸ ಮಾಡಲು ಪ್ರೇರೇಪಿಸಿ, ವೇಗವನ್ನು ಸಹ ತಂದುಕೊಡುತ್ತವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಕೋವಿಡ್ ಮತ್ತು ಯುದ್ಧದ ಕರಿಛಾಯೆಯ ಸಂದರ್ಭದಲ್ಲಿ ಕೂಡ ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುವ ದೇಶ ಎನಿಸಿಕೊಂಡಿದ್ದು ಹೆಮ್ಮೆಯ ವಿಚಾರ. ಭಾರತ ನರೇಂದ್ರ ಮೋದಿಯವರ ಮುಂದಾಳತ್ವದ ಅಡಿಯಲ್ಲಿ ಸೂಕ್ತ ನಿರ್ಧಾರಗಳನ್ನು ರಾಜ್ಯಗಳ ಜೊತೆಗೆ ಸಮಾಲೋಚಿಸಿ ತೆಗೆದುಕೊಳ್ಳುವ ಮೂಲಕ ಜಗತ್ತು ನಿಬ್ಬೆರಗಾಗುವಂತೆ ಕಷ್ಟದ ಸಮಯವನ್ನು ಎದುರಿಸಿತು. ಜಿ. ಎಸ್. ಟಿ ಸಂಗ್ರಹ ಕಡಿಮೆಯಾಗಿದ್ದರೂ ಕೂಡ ಸೂಕ್ತ ಸಮಯಕ್ಕೆ ರಾಜ್ಯಗಳಿಗೆ ಪರಿಹಾರ ನೀಡಲಾಯಿತು. ಯುರೋಪ್ ನ ಹಲವು ದೇಶಗಳು ತಪ್ಪಾದ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಈಗಲೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ಯುರೋಪ್​ನಲ್ಲಿ ನಡೆದ ಯುದ್ಧದ ಪರಿಣಾಮವನ್ನು ನಾವು ಅನುಭವಿಸಿದ್ದೇವೆ. ಜಾಗತಿಕ ವ್ಯಾಪಾರದಲ್ಲಿ ದೊಡ್ಡ ಪಾತ್ರವನ್ನು ಹೊಂದಿರುವ ರಷ್ಯಾ ಉಕ್ರೇನ್ ದೇಶಗಳು ಹೋರಾಟದಲ್ಲಿ ತೊಡಗಿಸಿಕೊಂಡವು. ಉಕ್ರೇನ್ ತನ್ನ ಕೃಷಿ ಮತ್ತು ಆಹಾರ ಧಾನ್ಯಗಳ ರಫ್ತಿಗೆ ಹೆಸರುವಾಸಿಯಾಗಿತ್ತು. ಅಲ್ಲದೆ ಮಿಲಿಟರಿ ಉಪಕರಣಗಳು ಮತ್ತು ಔಷಧೀಯ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದರು. ಇಡೀ ಜಗತ್ತಿಗೆ ಇಂಧನ, ಗೊಬ್ಬರ, ಆಹಾರ ಧಾನ್ಯಗಳನ್ನು, ನೈಸರ್ಗಿಕ ಅನಿಲವನ್ನು ರಫ್ತು ಮಾಡುತ್ತಿದ್ದ ರಷ್ಯಾ ಯುದ್ಧದಲ್ಲಿ ತೊಡಗಿದ್ದರಿಂದ ಇಡೀ ಜಗತ್ತು ತೀವ್ರ ಒತ್ತಡಕ್ಕೆ ಒಳಗಾಯಿತು. ಇದರಿಂದ ಅನೇಕ ದೇಶಗಳಲ್ಲಿ ಆಹಾರ ಧಾನ್ಯಗಳ ಬೆಲೆ ಹೆಚ್ಚಾಗಿ ಜನರು ಆಹಾರ ಅಭದ್ರತೆಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ಕಳೆದ 40-50 ವರ್ಷಗಳಿಗೆ ಹೋಲಿಸಿದರೆ ಅಲ್ಲಿನ ದೇಶಗಳು ಹಣದುಬ್ಬರವನ್ನು ಕಾಣುತ್ತಿವೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಬಡ್ಡಿದರಗಳನ್ನು ಕೇಂದ್ರ ಬ್ಯಾಂಕುಗಳು ಹೆಚ್ಚಿಸುತ್ತಿವೆ. ಆದರೂ ಆರ್ಥಿಕ ಹಿಂಜರಿತದ ಹಂತಕ್ಕೆ ಪ್ರವೇಶಿಸುತ್ತಿವೆ ಎಂದು ಮಾಹಿತಿ ನೀಡಿದರು.

ಯುದ್ಧ ಮತ್ತು ಕೋವಿಡ್‌ನ ಕಷ್ಟದ ಸಮಯದಲ್ಲಿ ಭಾರತದ ಆರ್ಥಿಕತೆಗೆ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಟ್ಯಾಗ್ ನೀಡಲಾಯಿತು. ಈ ಕಠಿಣ ಪರಿಸ್ಥಿತಿಯಲ್ಲೂ ರಸಗೊಬ್ಬರಗಳನ್ನು ಸಾಮಾನ್ಯಕ್ಕಿಂತ 8 ರಿಂದ 10 ಪಟ್ಟು ಹೆಚ್ಚಿನ ಬೆಲೆಗೆ ಆಮದು ಮಾಡಿಕೊಳ್ಳಲಾಯಿತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಹೊರೆಯಾಗದಂತೆ ನೋಡಿಕೊಂಡವು. ಇಂಧನವನ್ನು ಕೈಗೆಟುಕುವ ದೇಶಗಳಿಂದ ಆಮದು ಮಾಡಿಕೊಳ್ಳುವ ಬಗ್ಗೆ ದಿಟ್ಟ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಭಾರತೀಯರು ಮೋದಿಯವರ ನಾಯಕತ್ವವನ್ನು ಪಡೆದಿರರುವುದಕ್ಕೆ ಹೆಮ್ಮೆಪಡಬೇಕಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದಿಂದ ಆರ್ಥಿಕತೆಗೆ ಅತಿ ಹೆಚ್ಚು ಕೊಡುಗೆ: ಕರ್ನಾಟಕ ರಾಜ್ಯವು ರಾಷ್ಟ್ರಕ್ಕೆ ಸಾಕಷ್ಟು ಚಿಂತಕರು, ಉದ್ಯಮಿಗಳನ್ನು ಕೊಡುಗೆ ನೀಡಿದೆ. ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರು ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದೆ. ಬೆಂಗಳೂರು ಸ್ಟಾರ್ಟಪ್‌ಗಳು ಮತ್ತು ಯುನಿಕಾರ್ನ್‌ಗಳ ಕೇಂದ್ರವಾಗಿದೆ ಎಂದು ಸಚಿವರು ಬಣ್ಣಿಸಿದರು.

ಅಮುಲ್ ಮತ್ತು ನಂದಿನಿ ಮಧ್ಯೆ ಸ್ಪರ್ಧೆ ಇರಲಿ: ರಾಜ್ಯದ ಉತ್ಪನ್ನವಾದ ನಂದಿನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡಿದೆ. ಕೆಲ ಪಟ್ಟ ಭದ್ರ ಹಿತಾಸಕ್ತಿಗಳು, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಅಮುಲ್ ಮತ್ತು ನಂದಿನಿಯ ವಿಚಾರವಾಗಿ ಅನಾವಶ್ಯಕ ಗೊಂದಲಗಳನ್ನು ಹುಟ್ಟು ಹಾಕುತ್ತಿದ್ದಾರೆ. ಗ್ರಾಹಕನಿಗೆ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಉತ್ಪನ್ನ ದೊರೆಯುವುದು ಕೇವಲ ಆರೋಗ್ಯಕರ ಸ್ಪರ್ಧೆ ಇದ್ದಾಗ ಮಾತ್ರ. ರೈತರಿಗೂ ಕೂಡ ಹಲವು ಹಾಲು ಉತ್ಪಾದನಾ ಕಂಪನಿಗಳು ರಾಜ್ಯದಲ್ಲಿ ನೆಲೆಯೂರುವುದಿಂದ ಸಾಕಷ್ಟು ಅನುಕೂಲಗಳು ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಪರ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚಾರಿಂದ ಮತಬೇಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.