ಬೆಂಗಳೂರು: ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಕೊನೆಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಹಾಗೂ ಜೆಇಇ ಪರೀಕ್ಷೆ ಒಳಗೊಂಡಂತೆ ಹಲವು ಎಂಟ್ರೆನ್ಸ್ ಪರೀಕ್ಷೆಗಳು ಒಟ್ಟಿಗೆ ಬಂದಿರುವ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಯ ಕೊನೆಯ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಏಪ್ರಿಲ್ 22ರಿಂದ ಮೇ 18ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಮೊದಲು ಏಪ್ರಿಲ್ 22 ರಿಂದ ಮೇ 05 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿ ಮಾಡಲಾಗಿತ್ತು. ಆದರೆ, ಜೆಇಇ ಸೇರಿದಂತೆ ಹಲವು ಪರೀಕ್ಷೆಗಳು ಒಟ್ಟಿಗೆ ಬಂದ ಕಾರಣ ಈ ಬದಲಾವಣೆ ಮಾಡಿ ಅಂತಿಮ ವೇಳಾಪಟ್ಟಿ ಅಂಗೀಕರಿಸಲಾಗಿದೆ. ಪ್ರತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಶಕ್ತಿಧಾಮಕ್ಕೆ ಸರ್ಕಾರ ₹5 ಕೋಟಿ ನೀಡಲಿದೆ: ಸಿಎಂ ಬೊಮ್ಮಾಯಿ