ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ಸಂಜೆ ಸಿಎಂ ಬಳಿ ಚರ್ಚಿಸಿ ಯಾವ ತನಿಖೆಯಾಗಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಎಂ ಜೊತೆ ಕೂಲಂಕುಷ ಚರ್ಚೆಯಾಗಿದೆ. ಜಾರಕಿಹೊಳಿ ಕೂಡ ತನಿಖೆ ಆಗಬೇಕೆಂದು ಹೇಳಿದ್ದಾರೆ. ಸಾಯಂಕಾಲ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತನಿಖೆಯಾಗಿತ್ತು. ದೂರು ನೀಡಿ ವಾಪಸ್ ಪಡೆಯಲಾಗಿತ್ತು. ಈವರೆಗೆ ಎಷ್ಟು ಮಟ್ಟದ ತನಿಖೆಯಾಗಿದೆ, ಯಾವೆಲ್ಲ ಮಾಹಿತಿ ಕಲೆ ಹಾಕಲಾಗಿದೆ? ಹಾಗೆಯೇ, ಸಿಬಿಐ, ಸಿಐಡಿ ಅಥವಾ ಎಸ್ಐಟಿ ಅಂತಿಮ ತೀರ್ಮಾನದ ಕುರಿತು ಸಿಎಂ ಜೊತೆ ಚರ್ಚಿಸುತ್ತೇವೆ ಎಂದಿದ್ದಾರೆ.
ಓದಿ: ಸಿಡಿ ಪ್ರಕರಣ: ದೂರು ವಾಪಸ್ ಪಡೆದ ಬಳಿಕ ದಿನೇಶ್ ಕಲ್ಲಹಳ್ಳಿ ಮೊದಲ ಪ್ರತಿಕ್ರಿಯೆ
ಸಿಡಿ ಹಿಂದೆ ಯಾರ ಕೈವಾಡ ಇದೆ ಎಂಬುದು ಕೂಡ ಬಯಲಾಗುತ್ತದೆ. ಎಸ್ ಐ ಟಿ, ಸಿಬಿಐ, ಸಿಐಡಿ ಹೀಗೆ ಕೆಲವರು ಒಂದೊಂದು ಡಿಮ್ಯಾಂಡ್ ಮಾಡಿದ್ದಾರೆ. ಎಲ್ಲಾ ವಿಚಾರ ಮುಖ್ಯಮಂತ್ರಿ ಜೊತೆ ಮಾತಾಡಿ, ತೀರ್ಮಾನ ಮಾಡ್ತೇವೆ ಎಂದು ತಿಳಿಸಿದರು.