ಬೆಂಗಳೂರು: ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದು, ನಿನ್ನೆ ಬೆಂಗಳೂರಿಗೆ 26 ಶಾಸಕರು ತೆರಳಿದ್ದ ಬಸ್ ಹಿಂದಿರುಗಿ ಬರುವಾಗ ಬಸ್ ಖಾಲಿ ಖಾಲಿಯಗಿತ್ತು. ಕೇವಲ 10 ಜನ ಶಾಸಕರು ಮಾತ್ರ ಬಸ್ನಲ್ಲಿ ರೆಸಾರ್ಟ್ಗೆ ಬಂದಿದ್ದು, 15 ಶಾಸಕರು ಬಂದಿಲ್ಲ ಎಂದು ತಿಳಿದು ಬಂದಿದೆ.
ಉಳಿದ ಶಾಸಕರು ಎಲ್ಲಿ?
ಕಳೆದ ಐದು ದಿನಗಳಿಂದ 25 ಶಾಸಕರು ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದರು. ಶಾಸಕ ಬಂಡೆಪ್ಪ ಕಾಶಂಪೂರ್ ನೇತೃತ್ವದಲ್ಲಿರುವ ಶಾಸಕರು ಒಟ್ಟಾಗಿದ್ರು. ರೆಸಾರ್ಟ್ನಲ್ಲಿ ಎಲ್ಲಾ ಜೆಡಿಎಸ್ ಶಾಸಕರಿಗೆ 26 ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು. ರೆಸಾರ್ಟ್ನ ಸುತ್ತಮುತ್ತಲೂ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ. ಆದರೆ ಮಿಕ್ಕ ಶಾಸಕರು ವಿಲ್ಲಾಗಳಲ್ಲಿ ಇಲ್ಲದೆ ಬೇರೆಡೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಇಂದು ಸಿಎಂ ಕುಮಾರಸ್ವಾಮಿ ರೆಸಾರ್ಟ್ಗೆ ಬರುತ್ತಿದ್ದಾರೆ ಎನ್ನಲಾಗಿದ್ದು, ಎಲ್ಲಾ ಶಾಸಕರು ರೆಸಾರ್ಟ್ಗೆ ಬರುವ ಸಾಧ್ಯತೆ ಇದೆ. ಕಳೆದ ಆರು ದಿನಗಳಿಂದ ರೆಸಾರ್ಟ್ನಲ್ಲಿರುವ ಜೆಡಿಎಸ್ ಶಾಸಕರು ಇನ್ನು ಎರಡು ದಿನ ಇಲ್ಲೇ ಇರಬೇಕಿದೆ.