ಬೆಂಗಳೂರು: ಫಿಫಾ ಫುಟ್ಬಾಲ್ ವಿಶ್ವಕಪ್ ಸೆಮಿಫೈನಲ್ಸ್ ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಹೋಟೆಲ್, ಮದ್ಯದಂಗಡಿಗಳನ್ನು ಇಂದು ಹಾಗೂ ನಾಳೆ (ಬುಧವಾರ) ಮಧ್ಯರಾತ್ರಿ 3.30ರವರೆಗೆ ತೆರೆಯಲು ನಗರ ಪೊಲೀಸ್ ಇಲಾಖೆಯು ಅನುಮತಿಸಿ ಆದೇಶ ಹೊರಡಿಸಿದೆ.
ಇಂದು ಮಧ್ಯರಾತ್ರಿ 12.30 ಕ್ಕೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ನಾಡಿದ್ದು ಸಹ ಇದೇ ಅವಧಿಯಲ್ಲಿ ಎರಡನೇ ಸೆಮಿಫೈನಲ್ ಪಂದ್ಯವಿದೆ. ಫೆಡರೇಷನ್ ಆಫ್ ಕ್ಲಬ್ ಮಾಡಿದ ಮನವಿ ಪುರಸ್ಕರಿಸಿರುವ ನಗರ ಪೊಲೀಸ್ ಆಯುಕ್ತರು, ಹೊಟೇಲ್, ರೆಸ್ಟೋರೆಂಟ್ ಹಾಗೂ ಮದ್ಯದಂಗಡಿಗಳನ್ನು ಮುಚ್ಚಲು ಇದ್ದ ಗಡುವನ್ನು 1 ಗಂಟೆಯಿಂದ 3.30ರವರೆಗೆ ವಿಸ್ತರಿಸಿದ್ದಾರೆ.
ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ. ಈ ಆದೇಶ ಕೆಂಪೇಗೌಡ ವಿಮಾನ ನಿಲ್ದಾಣ, ರೈಲ್ವೆ ಹಾಗೂ ಬಸ್ ನಿಲ್ದಾಣಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಅರ್ಜೆಂಟೀನಾ ಮತ್ತು ಕ್ರೊವೇಷ್ಯಾ ಮಧ್ಯೆ ಇಂದು ರಾತ್ರಿ ಸೆಮಿಫೈನಲ್ ಪಂದ್ಯ ನಡೆಯಲಿದೆ. ನಾಳೆ ಮಧ್ಯರಾತ್ರಿ ಫ್ರಾನ್ಸ್ ಮತ್ತು ಮೊರೊಕ್ಕೊ ತಂಡಗಳು ಸೆಣಸಲಿವೆ.
ಇದನ್ನೂಓದಿ: ಫಿಫಾ ಫುಟ್ಬಾಲ್ನಲ್ಲಿದೆ ಹೈಟೆಕ್ ಸೆನ್ಸರ್: ಬಾಲ್ ಟ್ರ್ಯಾಕಿಂಗ್ಗೆ ಅತ್ಯಾಧುನಿಕ ತಂತ್ರಜ್ಞಾನ