ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ವಾರ್ಷಿಕೋತ್ಸವ ಆಚರಣೆ ಎಂದಾಗ ನೃತ್ಯ, ಹಾಡು ಇನ್ನಿತರ ಮನರಂಜನಾ ಕಾರ್ಯಕ್ರಮಗಳು ಸಾಮಾನ್ಯ. ಆದ್ರೆ ನಗರದ ಬಿಜಿಎಸ್ ಶಾಲೆ ತನ್ನ ಬೆಳ್ಳಿ ಮಹೋತ್ಸವವನ್ನು ಭಿನ್ನವಾಗಿ ಆಗಿ ಆಚರಿಸಿ ಗಮನ ಸೆಳೆದಿದೆ.
ನಗರದ ಪ್ರತಿಷ್ಠಿತ ಬಿಜಿಎಸ್ ಶಾಲೆಗೆ 25ನೇ ವರ್ಷದ ಬೆಳ್ಳಿ ಮಹೋತ್ಸವ ಆಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಅದರಲ್ಲೂ ಮುಖ್ಯವಾಗಿ ಮಹಿಳಾ ಸಾಧಕರನ್ನ ಕರೆಸಿ ಗೌರವಿಸುವ ಮೂಲಕ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಾಧನೆ ಮಾಡುವಂತೆ ಉತ್ತೇಜನ ನೀಡಿದರು.
ಕಾರ್ಯಕ್ರಮದಲ್ಲಿ ಅನೇಕ ಮಂದಿ ವಿಜ್ಞಾನಿಗಳು, ಸಮಾಜ ಸೇವಕರು, ಗಾಯಕರು, ಕ್ರೀಡಾಪಟುಗಳು ಸೇರಿದಂತೆ ಅನೇಕ ಪತ್ರಕರ್ತರು ಸಹ ಭಾಗವಹಿಸಿ ಬೆಳ್ಳಿ ಮಹೋತ್ಸವಕ್ಕೆ ಮೆರಗು ತಂದರು.
ಮಕ್ಕಳ ಮುಂದೆ ಇಂತಹ ಕಾರ್ಯಕ್ರಮಗಳು ಮೂಡಿ ಬಂದಾಗ, ಮುಂದೆ ಅವರಲ್ಲಿ ಯಾವುದೇ ಕ್ಷೇತ್ರದಲ್ಲಿ ಏನಾದರು ಸಾಧಿಸುವ ನಿಟ್ಟಿನಲ್ಲಿ ಬಹಳಷ್ಟು ಸ್ಪೂರ್ತಿದಾಯಕವಾಗುತ್ತದೆ. ಅದೇ ನಮ್ಮ ಉದ್ದೇಶ ಎಂದು ಶಾಲಾ ಶಿಕ್ಷಕರು ಹೇಳಿದರು.
ಶಾಲಾ ಮಕ್ಕಳ ಕಾರ್ಯಕ್ರಮ ಎನ್ನದೇ ತಮ್ಮದೇ ಆದ ಶೈಲಿಯಲ್ಲಿ ಸಾಧಕರನ್ನು ಗುರುತಿಸಿ, ಗೌರವ ನೀಡಿರುವುದು ನಿಜಕ್ಕೂ ಸ್ಪೂರ್ತಿದಾಯಕ ಹಾಗು ಪ್ರಶಂಸನೀಯ. ಇಂತಹ ಕಾರ್ಯಕ್ರಮಗಳು ಹಚ್ಚಾಗಿ ಮೂಡಿಬರಲಿ ಎಂದು ಸಾಧಕರು ಮೆಚ್ಚುಗೆ ವ್ಯಕ್ತಪಡಿಸಿದರು.