ETV Bharat / state

ವರ್ಗಾವಣೆ ಆದೇಶಕ್ಕೆ ಡೋಂಟ್ ಕೇರ್ ಎಂದ 44 ಇನ್​​ಸ್ಪೆಕ್ಟರ್​ಗಳಿಗೆ ಸಸ್ಪೆಂಡ್ ಭೀತಿ

ಸರ್ಕಾರದ ವರ್ಗಾವಣೆ ಆದೇಶಕ್ಕೆ ಡೋಂಟ್​ ಕೇರ್​ ಎಂದ 44 ಇನ್​​ಸ್ಪೆಕ್ಟರ್​​ಗಳಿಗೆ ಇದೀಗ ಸಸ್ಪೆಂಡ್ ಭೀತಿ ಎದುರಾಗಿದೆ.

ಪೊಲೀಸ್ ಇಲಾಖೆ
ಪೊಲೀಸ್ ಇಲಾಖೆ
author img

By ETV Bharat Karnataka Team

Published : Dec 13, 2023, 4:43 PM IST

Updated : Dec 13, 2023, 8:50 PM IST

ಬೆಂಗಳೂರು : ವರ್ಗಾವಣೆಯಾಗಿ ಹಲವು ತಿಂಗಳಾದರೂ ವರ್ಗವಾದ ಸ್ಥಳಕ್ಕೆ ವರದಿ ಮಾಡಿಕೊಳ್ಳದೇ ಗೈರು ಹಾಜರಾದ ರಾಜ್ಯದ 44 ಪೊಲೀಸ್ ಇನ್​ಸ್ಪೆಕ್ಟರ್​ಗಳು ಕರ್ತವ್ಯ ಲೋಪವೆಸಗಿದ್ದು, ಇದೀಗ ಅಂತಹವರನ್ನ ಅಮಾನತು ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

ನಿಗದಿತ ಅವಧಿ ಬಳಿಕ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಅಥವಾ ಬೇರೆ ಘಟಕಕ್ಕೆ ವರ್ಗಾಯಿಸುವುದು ನಡೆದುಕೊಂಡು ಬಂದಿರುವ ಸಾಮಾನ್ಯ ಪ್ರಕ್ರಿಯೆ.‌ ಸೂಚಿಸಿದ ಘಟಕದಲ್ಲಿ ವರ್ಗಾವಣೆಗೊಂಡ ಪೊಲೀಸರು ವರದಿ ಮಾಡಿ ಪಾಲನಾ ವರದಿಯನ್ನ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಬೇಕು. ಆದರೆ, ಕೆಲ ಪೊಲೀಸ್ ಇನ್​​ಸ್ಪೆಕ್ಟರ್​ಗಳು ವರ್ಗಾವಣೆಯಾಗಿ ಹಲವು ತಿಂಗಳಾದರೂ ವರ್ಗವಾದ ಸ್ಥಳಕ್ಕೆ ವರದಿ ಮಾಡಿಕೊಳ್ಳದೇ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆ ಅಂತಹವರಿಗೆ ನೊಟೀಸ್ ನೀಡಿ ಏಳು ದಿನದೊಳಗೆ ಉತ್ತರಿಸದಿದ್ದರೆ ಅಮಾನತು ಮಾಡಿ, ಇಲಾಖಾ ವಿಚಾರಣೆಗೊಳಪಡಿಸುವ ಎಚ್ಚರಿಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.

ಡ್ಯೂಟಿ ವರದಿ ಮಾಡಿಕೊಳ್ಳದಿದ್ದರೆ ಸಸ್ಪೆಂಡ್ ಖಚಿತ : ವರ್ಗಾವಣೆಯಾಗಿ ಹಲವು ತಿಂಗಳು ಕಳೆದರೂ ಇಲಾಖೆ ಸೂಚಿಸಿದ ಘಟಕಕ್ಕೆ ವರದಿ ಮಾಡಿಕೊಳ್ಳದ 44 ಪೊಲೀಸ್ ಇನ್​ಸ್ಪೆಕ್ಟರ್​ಗಳಿಗೆ ಸಸ್ಪೆಂಡ್ ಎಂಬ ತೂಗುಗತ್ತಿ ನೇತಾಡುತ್ತಿದೆ. ಕರ್ತವ್ಯ ಲೋಪವೆಸಗಿದ ಎಲ್ಲ ಇನ್​ಸ್ಪೆಕ್ಟರ್​ಗಳಿಗೆ ಏಳು ದಿನದೊಳಗಾಗಿ ಉತ್ತರಿಸುವಂತೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ.

ಡಿಸೆಂಬರ್ 7ರಂದು ನೊಟೀಸ್ ಹೊರಡಿಸಿದ್ದು, ಇಂದು ಸಂಜೆಯೊಳಗೆ ಉತ್ತರಿಸದಿದ್ದರೆ ಅಂತಹವರನ್ನ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡಾವಳಿ) 1965/89ರ ನಿಯಮ 5 ಪ್ರಕಾರ, ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಗೊಳಪಡಿಸುವುದಾಗಿ ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವರ್ಗಾವಣೆಯಾದರೂ ವರದಿ ಮಾಡಿಕೊಂಡಿಲ್ಲ ಯಾಕೆ ?: ನಿಗದಿತ ಸ್ಥಳಕ್ಕೆ ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆಯಾದರೂ ವರದಿ ಮಾಡಿಕೊಳ್ಳದ ಹಿಂದೆ ಹಲವು ಕಾರಣಗಳನ್ನ ಕಾಣಬಹುದಾಗಿದೆ‌. ನಿರ್ದಿಷ್ಟ ಘಟಕ ಅಥವಾ ಠಾಣೆಯಲ್ಲಿ ಕರ್ತವ್ಯ ಮಾಡುವ ಆಶಯ ಹೊಂದಿರುತ್ತಾರೆ. ಅಥವಾ ತಮ್ಮಿಷ್ಟದ ಜಾಗಕ್ಕೆ ಪೋಸ್ಟಿಂಗ್​ ದೊರೆಯದಿರುವುದು ಇದಕ್ಕೆ ಕಾರಣವಾಗಿರಬಹುದು.

ಇನ್ಸ್​ಪೆಕ್ಟರ್ ಅಮಾನತಲ್ಲ ವಜಾ ಮಾಡುತ್ತೇವೆ : 44 ಇನ್ಸ್​ಪೆಕ್ಟರ್ ಅಮಾನತು ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್​ ಅವರು ಪ್ರತಿಕ್ರಿಯಿಸುತ್ತಾ, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಯಾರೇ ಶಿಫಾರಸು ಮಾಡಿದರೂ ಸಾರ್ವಜನಿಕರ ಹಿತಾಸಕ್ತಿಯಿಂದ ವರ್ಗಾವಣೆ ಮಾಡುತ್ತೇವೆ. ಅವರು ವರ್ಗಾವಣೆಗೊಂಡ ಸ್ಥಳಕ್ಕೆ ಹೋಗಿ ವರದಿ ಮಾಡದೇ ಇದ್ದರೆ ಅಶಿಸ್ತು ಪ್ರದರ್ಶಿಸಿದರೆ ಏನು ಮಾಡಬೇಕು?. ಅಮಾನತು ಮಾಡದೇ ಏನು ಮಾಡಬೇಕು? ಎಂದು ಪ್ರಶ್ನಿಸಿದರು. ಈಗಾಗಲೇ ನೋಟಿಸ್ ಕೊಟ್ಟಿದ್ದೇವೆ. ಅಮಾನತು ಮಾಡುತ್ತೇವೆ. ತಪ್ಪು ಎಸಗಿದ್ದರೆ ವಜಾ ಕೂಡ ಮಾಡುತ್ತೇವೆ. ಕಷ್ಟಗಳಿದ್ದರೆ ಹಿರಿಯ ಅಧಿಕಾರಿಗಳಿಗೆ ಹೇಳಬೇಕು. ಒತ್ತಾಯಕ್ಕೆ ಯಾರನ್ನೂ ವರ್ಗಾವಣೆ ಮಾಡಲ್ಲ. ನಿಯಮದ ಪ್ರಕಾರ ವರ್ಗಾವಣೆ ಮಾಡಲಾಗುತ್ತೆ ಎಂದರು.

44 ಮಂದಿ ಇನ್ಸ್​ಪೆಕ್ಟರ್​​ಗಳು ಹಾಗೂ ಅವರ ವರ್ಗಾವಣೆ ಆದೇಶದ ಮಾಹಿತಿ:

1. ಹರೀಶ್ ಬಿ ಸಿ, ಸಿ.ಐ.ಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

2. ಆರುಣ್ ಎಸ್ ಮುರುಗುಂಡಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

3. ಈಶ್ವರಿ ಪಿ ಎಸ್ , ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

4. ಕುಮಾರ್ ಎಪಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

5. ರವಿಕುಮಾರ್ ಆರ್ ಜಿ, ರಾಜ್ಯ ಗುಪ್ತವಾರ್ತೆ ಘಟಕಕ್ಕೆ ವರ್ಗಾವಣೆ

6. ಸತೀಶ್ ಎಸ್ ಹೆಚ್, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

7. ಎಸ್ ಎಸ್ ತೇಲಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

8. ಸಿದ್ದೇಶ್ ಎಂ ಡಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

9. ವಿಜಯ ಮುರುಗುಂಡಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

10. ಯರಿಸ್ವಾಮಿ ಇ, ವಿವಿಐಪಿ ಭದ್ರತೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ

11. ಗುರುಪ್ರಸಾದ್ ಎ. ಐಎಸ್ ಡಿ ಘಟಕಕ್ಕೆ ವರ್ಗಾವಣೆ

12. ಉದಯರವಿ ಜಿ, ಶಂಕರಪುರಂ ಪೊಲೀಸ್ ಠಾಣೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ

13. ಮಂಜೇಗೌಡ ಎ.ಜಿ, ಟಿಟಿಐ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ

14. ಷಣ್ಮುಖಪ್ಪ ಜಿ ಆ‌ರ್, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

15. ರಾಘವೇಂದ್ರ ಬಾಬು, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

16. ಸತೀಶ್ ಎಂ ಆರ್. ಕಾವೂರು ಪೊ.ರಾ., ಮಂಗಳೂರು ನಗರ ಇಲ್ಲಿಗೆ ವರ್ಗಾವಣೆ

17. ಲಕ್ಷ್ಮಯ್ಯ ಎಂ ಬಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

18. ಕಾಳಪ್ಪ ಬಡಿಗೇರ್, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

19. ಬಸಲಿಂಗಯ್ಯ ಸುಬ್ರಾಪುರ್‌ಮರ್, ಪಿಐ, ಸಿಐಡಿ ಘಟಕಕ್ಕೆ ವರ್ಗಾವಣೆ

20. ಮಂಜುನಾಥ್ ಡಿ ಆರ್, ಎ.ಟಿ.ಸಿ ಬೆಂಗಳೂರು ಘಟಕಕ್ಕೆ ವರ್ಗಾವಣೆ

21. ಮುನಿರೆಡ್ಡಿ ಎ. ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ

22. ರೋಹಿತ್ ಸಿ ಇ. ಸಾಗರ ಗ್ರಾಮಾಂತರ ವೃತ್ತ, ಶಿವಮೊಗ್ಗ ಜಿಲ್ಲೆ ಇಲ್ಲಿಗೆ ವರ್ಗಾವಣೆ

23. ಸಂದೀಪ್ ಪಿ ಕೌರಿ, ಪಿ.ಐ, ಎಸ್.ಆರ್. ಪುರ ವೃತ್ತ, ಚಿಕ್ಕಮಗಳೂರು ಜಿಲ್ಲೆ ಇಲ್ಲಿಗೆ ವರ್ಗಾವಣೆ

24. ಸತೀಶ್ ಜಿ ಜೆ, ಪಿ.ಐ, ಬರ್ಕೆ ಪೊ.ಠಾ., ಮಂಗಳೂರು ನಗರ ಇಲ್ಲಿಗೆ ವರ್ಗಾವಣೆ

25. ಶರಣಬಸಪ್ಪ ಕೆ. ಪಿಐ, ಐಜಿಪಿ ಕಚೇರಿ, ಎನ್.ಇ.ಆರ್., ಕಲಬುರಗಿ ಘಟಕಕ್ಕೆ ವರ್ಗಾವಣೆ

26. ಶಿವಕುಮಾರ್ ಹೆಚ್ ಆರ್, ಶೃಂಗೇರಿ ಪೊ.ಠಾ.. ಚಿಕ್ಕಮಗಳೂರು ಜಿಲ್ಲೆ ಇಲ್ಲಿಗೆ ವರ್ಗಾವಣೆ

27. ಶಿವಕುಮಾರ್ ಟಿ ಸಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

28. ಶಿವರಾಜು ಎಸ್, ವಿವಿಐಪಿ ಭದ್ರತೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ

29. ಸುರೇಶ್ ಕೆ. ಸಂಚಾರ ಮತ್ತು ಯೋಜನೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ

30. ವರುಣ್‌ ಕುಮಾರ್ ಎಂ ಆರ್. ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

31. ವಸಂತ್ ಎಸ್ ಹೆಚ್, ಮಂಗಳೂರು ಪೂರ್ವ ಸಂಚಾರ ಪೊ.ಠಾ.. ಮಂಗಳೂರು ನಗರ ಇಲ್ಲಿಗೆ ವರ್ಗಾವಣೆ

32. ವೆಂಕಟೇಶ್ ಎಸ್ ಹೆಚ್, ಸಿ.ಐ.ಡಿ ಘಟಕಕ್ಕೆ ವರ್ಗಾವಣೆ

33. ಚಂದ್ರಶೇಖರ್ ಎನ್ ಹರಿಹರ, ಕೋಟಿ ಪೊ.ಠಾ.. ಶಿವಮೊಗ್ಗ ಜಿಲ್ಲೆ ಇಲ್ಲಿಗೆ ವರ್ಗಾವಣೆ

34. ಶ್ರೀಮತಿ ಸ್ವರ್ಣ ಜಿ ಎಸ್. ಬಸವನಹಳ್ಳಿ ವೃತ್ತ, ಚಿಕ್ಕಮಗಳೂರು ಜಿಲ್ಲೆ ಇಲ್ಲಿಗೆ ವರ್ಗಾವಣೆ

35. ಶ್ರೀನಿವಾಸ್, ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ) ಘಟಕಕ್ಕೆ ವರ್ಗಾವಣೆ

36. ಬಸವರಾಜ್ ಎಸ್ ತೇಲಿ, ಐಎಸ್ ಡಿ ಘಟಕಕ್ಕೆ ವರ್ಗಾವಣೆ

37. ಶ್ರೀಧರ್ ವಸಂತ್ ಸತಾರೆ, ಪಿ.ಟಿ.ಎಸ್., ಖಾನಾಪುರ ಘಟಕಕ್ಕೆ ವರ್ಗಾವಣೆ

38. ಜೀವನ್ ಕೆ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

39. ಮೋಹನ್ ಕುಮಾರ್ ಎಂ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

40. ಲಕ್ಷ್ಮೀನಾರಾಯಣ ಕೆ. ಐ.ಎಸ್.ಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

41. ರಾಮಪ್ಪ ವಿ ಸಾವಳಗಿ, , ಡಿ.ಎಸ್.ಬಿ., ಬೀದರ್ ಜಿಲ್ಲೆ ಇಲ್ಲಿಗೆ ವರ್ಗಾವಣೆ

42. ಶರಣಪ್ಪಗೌಡ ಬಿ ಗೌಡರ್, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

43. ಕರುಣೇಶ್ ಗೌಡ, ಲೋಕಾಯುಕ್ತ

44. ದೌಲತ್ ಎನ್ ಕೌರಿ, ಡಿಎಸ್ ಬಿ ಘಟಕ ಗದಗ

ಇದನ್ನೂ ಓದಿ: ರಾಜ್ಯದಲ್ಲಿ ಈ ವರ್ಷ ಹೆಚ್ಚು ಪೊಲೀಸರು ಸಸ್ಪೆಂಡ್: ಕಳೆದ 4 ವರ್ಷಗಳಲ್ಲೇ ಅಧಿಕ!

Last Updated : Dec 13, 2023, 8:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.