ETV Bharat / state

ಪ್ರಮುಖ ಮೇಲ್ಸೇತುವೆಯಲ್ಲಿ ದೋಷ: ಬಿಬಿಎಂಪಿಯ ಆಡಿಟ್ ವರದಿಯಲ್ಲಿ ಬಹಿರಂಗ

author img

By

Published : Sep 25, 2022, 4:32 PM IST

ಬಿಬಿಎಂಪಿ ಬೆಂಗಳೂರಿನ ಒಟ್ಟು 42 ಫ್ಲೈಓವರ್​ ಪೈಕಿ 25 ಫ್ಲೈಓವರ್​ಗಳ ಸದೃಢತೆ ಪರೀಕ್ಷೆ ನಡೆಸಿದೆ. ಈ ಪೈಕಿ ಎರಡು ಪ್ರಮುಖ ಫ್ಲೈಓವರ್ ಗಳಲ್ಲಿ ದೋಷ ಕಂಡುಬಂದಿದ್ದು, ಇದನ್ನು ದುರಸ್ತಿಗೊಳಿಸಲು ಪಾಲಿಕೆ ಮುಂದಾಗಿದೆ.

fault-flyover-in-bengaluru
ಪ್ರಮುಖ ಮೇಲ್ಸೇತುವೆಯಲ್ಲಿ ದೋಷ: ಪಾಲಿಕೆಯ ಆಡಿಟ್ ವರದಿಯಲ್ಲಿ ಬಹಿರಂಗ

ಬೆಂಗಳೂರು : ಫ್ಲೈ ಓವರ್‌ಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಸದ್ಯಕ್ಕೆ ಸಿಲಿಕಾನ್ ಸಿಟಿಯ ಜನರಿಗೆ ಕಾಡುತ್ತಿದೆ. ಸುಮ್ಮನಹಳ್ಳಿ ಮೇಲ್ಸೇತುವೆಯ ರೀತಿ ಬೇರೆ ಫ್ಲೈ ಓವರ್ ಸಮಸ್ಯೆ ಇದೆಯೇ ಎನ್ನುವುದರ ಕುರಿತು ಬಿಬಿಎಂಪಿ ಖಾಸಗಿ ಕಂಪನಿ ಮೂಲಕ ಆಡಿಟ್ ಮಾಡಿಸಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಆಡಿಟ್ ನಲ್ಲಿ ನಗರದ ಎರಡು ಪ್ರಮುಖ ಮೇಲ್ಸೇತುವೆಗಳಲ್ಲಿ ದೋಷ ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ದುರಸ್ತಿಗೊಳಿಸಲು ಪಾಲಿಕೆ ಮುಂದಾಗಿದೆ.

ಇನ್ಫ್ರಾ ಸಪೋರ್ಟ್‌ ಸಂಸ್ಥೆಯಿಂದ ಸದೃಢತೆ ಪರೀಕ್ಷೆ : ಬಿಬಿಎಂಪಿ ಫ್ಲೈ ಓವರ್ ಗಳ ಸದೃಢತೆ ಪರೀಕ್ಷೆಗೆ ಇನ್ಫಾ ಸಪೋರ್ಟ್‌ ಎಂಬ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆ ನಗರದ 42ರ ಪೈಕಿ 25 ಫ್ಲೈಓವರ್​ಗಳ ಸದೃಢತೆ ಪರೀಕ್ಷೆ ನಡೆಸಿ ಪಾಲಿಕೆಗೆ ಅಂತಿಮ ವರದಿ ಸಲ್ಲಿಸಿದೆ. ಅದರಲ್ಲಿ ಫ್ಲೈ ಓವರ್‌ನಲ್ಲಿ ದೋಷವಿರುವುದು ದೃಢಪಟ್ಟಿದೆ. ಹೊರ ವರ್ತುಲ ರಸ್ತೆಯಲ್ಲಿರುವ ಸುಮ್ಮನಹಳ್ಳಿ ಫ್ಲೈಓವರ್‌ನ ಸ್ಲಾಬ್‌ಗಳಲ್ಲಿ ವೈಟ್ ಪ್ಯಾಚಸ್ (ನೆಲ ಹಾಸು ಕಾಂಕ್ರಿಟ್‌ನಲ್ಲಿ ದೋಷ) ಇದೆ ಎನ್ನಲಾಗಿತ್ತು. ಇದೀಗ ಮೈಸೂರು ರಸ್ತೆಯ ಸಿರ್ಸಿ ಫ್ಲೈ ಓವರ್ ನಲ್ಲಿ ಬಿರುಕುಗಳಿವೆ ಎಂಬ ಅಘಾತಕಾರಿ ಅಂಶ ವರದಿಯಲ್ಲಿ ಬೆಳಕಿಗೆ ಬಂದಿದೆ.

ಲಕ್ಷಾಂತರ ಸವಾರರು ಪ್ರಯಾಣ : ಮೈಸೂರು ರಸ್ತೆಯ ಫ್ಲೈ ಓವರ್ ಬೆಂಗಳೂರು ನಗರದ ಮಧ್ಯ ಭಾಗದಲ್ಲಿರೋ ಅತಿ ಉದ್ದದ ಮೇಲ್ಸೇತುವೆ. ದಿನವೊಂದಕ್ಕೆ ಲಕ್ಷಾಂತರ ಮಂದಿ ಈ ಫ್ಲೈ ಓವರ್ ನಲ್ಲಿ ಪ್ರಯಾಣಿಸುತ್ತಾರೆ. ಕೃಷ್ಣರಾಜ ಮಾರುಕಟ್ಟೆಯಿಂದ ಸಿರ್ಸಿ ಸರ್ಕಲ್ ವರೆಗೆ ಇರುವ ಈ ಫ್ಲೈ ಓವರ್ ಇದಾಗಿದೆ.

26 ವರ್ಷದ ಹಿಂದಿನ ಮೇಲ್ಸೇತುವೆ : 26 ವರ್ಷದ ಹಿಂದೆ ಬಿಬಿಎಂಪಿ 2.86 ಕಿ.ಮೀ ಉದ್ದದ ಫ್ಲೈಓವರ್ ನಿರ್ಮಿಸಿದ್ದು, ಕಂಬಗಳು, ಗರ್ಡರ್ ಹಾಗೂ ಕಾಲಂಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಇದನ್ನು ಸರಿಪಡಿಸಬೇಕೆಂದು ಆಡಿಟ್ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ.

ಡಿಸೆಂಬರ್ ನಲ್ಲಿ ಕೈಸೇರಲಿದೆ ಮತ್ತೊಂದು ವರದಿ : ಡಿಸೆಂಬರ್ ನಲ್ಲಿ ಮತ್ತೊಂದು ವರದಿ ತರಿಸಿಕೊಂಡು ಫ್ಲೈ ಓವರ್ ಸದೃಢಗೊಳಿಸುವ ಕಾರ್ಯ ಮಾಡುತ್ತೇವೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಅಲ್ಲದೆ ಕೆಲವು ಫ್ಲೈ ಓವರ್​ಗಳಲ್ಲಿ ದೋಷಗಳು ಕಂಡುಬಂದಿದ್ದು, ಅದನ್ನು ಸರಿಪಡಿಸುವ ಕಾರ್ಯ ಮಾಡಲಾಗುವುದು. ಫ್ಲೈ ಓವರ್​ ಸದೃಢತೆಯ ಬಗ್ಗೆ ಯಾರೂ ಸಂಶಯ ವ್ಯಕ್ತಪಡಿಸುವ ಅಗತ್ಯ ಇಲ್ಲ ಎಂದು ಇದೇ ವೇಳೆ ಹೇಳಿದರು.

ಎರಡು ಫ್ಲೈ ಓವರ್ ದುರಸ್ತಿ ಕಾರ್ಯ ಬಾಕಿ : ಗೊರಗುಂಟೆಪಾಳ್ಯದಿಂದ ಬಿಇಎಲ್ ಸರ್ಕಲ್ ಕಡೆ ಸಾಗುವ ಮಾರ್ಗದಲ್ಲಿರುವ ಎಂಇಎಸ್ ರೈಲ್ವೆ ಫೈಓವರ್ ಸಮಸ್ಯೆ ಬಗೆಹರಿಸಲಾಗಿದೆ. ಬೇರಿಂಗ್ ನಲ್ಲಿ ಕಾಣಿಸಿಕೊಂಡ ಬಿರುಕು ಮತ್ತು ಕಾಂಕ್ರಿಟ್ ಜೋಡಣೆಯಲ್ಲಿ ಇದ್ದ ದೋಷವನ್ನು ಸರಿಪಡಿಸಲಾಗಿದೆ. ಉಳಿದಂತೆ ಸಿರ್ಸಿ ಮತ್ತು ಸುಮ್ಮನಹಳ್ಳಿ ಫೈಓವರ್‌ಗಳ ದುರಸ್ತಿ ಕೈಗೊಳ್ಳುವುದು ಇನ್ನೂ ಬಾಕಿ ಇದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ : ಸಿಎಂ ಭೇಟಿ ಮಾಡಿದ ಉದ್ಯಮಿ ಮೋಹನ್ ದಾಸ್ ಪೈ: ಬ್ರಾಂಡ್ ಬೆಂಗಳೂರು ಕುರಿತು ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.