ETV Bharat / state

ರಾಷ್ಟ್ರೀಯ ಹೆದ್ದಾರಿ 7 ಬಂದ್ ಮಾಡಲು ಮುಂದಾದ ಅನ್ನದಾತರು: ರೈತ ಮುಖಂಡನ ವಶಕ್ಕೆ ಪಡೆದ ಪೊಲೀಸರು - ರೈತ ಮುಖಂಡನ ವಶಕ್ಕೆ ಪಡೆದ ಪೊಲೀಸರು

ಇಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸಿಲಿಕಾನ್​ ಸಿಟಿಯಲ್ಲೂ ಅನ್ನಾದಾತರು ಧರಣಿ ನಡೆಸುತ್ತಿದ್ದಾರೆ. ಈ ವೇಳೆ, ರಾಷ್ಟ್ರೀಯ ಹೆದ್ದಾರಿ 07 ಅನ್ನು ಬಂದ್ ಮಾಡಲು ಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈತ ಮುಖಂಡನ ವಶಕ್ಕೆ ಪಡೆದ ಪೊಲೀಸರು
police took them to custody
author img

By

Published : Feb 6, 2021, 1:54 PM IST

Updated : Feb 6, 2021, 2:28 PM IST

ಬೆಂಗಳೂರು: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನ ಜಾರಿಗೆ ಮಾಡುತ್ತಿರೋದನ್ನು ಖಂಡಿಸಿ ದೇಶಾದ್ಯಂತ ಇಂದು ರೈತರು ಪ್ರತಿಭಟನೆ ನಡೆಸುತ್ತಿದ್ದು, ಸಿಲಿಕಾನ್​ ಸಿಟಿಯಲ್ಲೂ ಅನ್ನಾದಾತರು ಧರಣಿ ನಡೆಸುತ್ತಿದ್ದಾರೆ. ಈ ವೇಳೆ, ರಾಷ್ಟ್ರೀಯ ಹೆದ್ದಾರಿ 07 ಅನ್ನು ಬಂದ್ ಮಾಡಲು ಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈತ ಮುಖಂಡನ ವಶಕ್ಕೆ ಪಡೆದ ಪೊಲೀಸರು

ಪ್ರತಿಭಟನೆ ನಡೆಸುತ್ತಿದ್ದ ರೈತರು ಮಾನವ ಸರಪಳಿ ಮಾಡಿ ರಾಷ್ಟ್ರೀಯ ಹೆದ್ದಾರಿ 7 ಬಂದ್ ಮಾಡಲು ಮುಂದಾದರು. ಇದನ್ನು ಗಮನಿಸಿದ ಪೊಲೀಸರು ರೈತ ಮುಖಂಡನನ್ನು ವಶಕ್ಕೆ ಪಡೆದರು. ಈ ವೇಳೆ ಕೆಲಕಾಲ ವಾಗ್ವಾದ ನಡೆದಿದ್ದು, ಬಲವಂತವಾಗಿ ಪೊಲೀಸ್​ ವಾಹನದಲ್ಲಿ ಕರೆದುಕೊಂಡು ಹೋದರು.

ದೇವನಹಳ್ಳಿಯಿಂದ ಏರ್ ಪೋರ್ಟ್ ರಸ್ತೆಯತ್ತ ತೆರಳಲು ರೈತರು ಸಿದ್ಧತೆ:

ಪಟ್ಟಣದ ಪ್ರವಾಸಿ ಮಂದಿರದ ಬಳಿ ರೈತರು ಜಮಾವಣೆಗೊಂಡಿದ್ದು, ದೇವನಹಳ್ಳಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯತ್ತ ತೆರಳಲು ರೈತರ ಸಿದ್ಧತೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಹೆದ್ದಾರಿ ಬಂದ್ ಮಾಡಲು ಅವಕಾಶ ನೀಡದಿದ್ದರೆ ರಸ್ತೆಯಲ್ಲೆ ಮಲಗಿ ಪ್ರತಿಭಟಿಸಲು ರೈತರ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ದೇವನಹಳ್ಳಿಯಿಂದ ಏರ್ ಪೋರ್ಟ್ ರಸ್ತೆಯತ್ತ ತೆರಳಲು ರೈತರು ಸಿದ್ಧತೆ

ಬಿಡದಿ ಬಸ್​ ನಿಲ್ದಾಣದಲ್ಲಿ ಪ್ರತಿಭಟನೆ:

ಬಿಡದಿ ಬಸ್ ನಿಲ್ದಾಣದ ಬಳಿ ರೈತರು ಪ್ರತಿಭಟನೆ ಮಾಡುತ್ತಿದ್ದು, ಮಧ್ಯಾಹ್ನದ ಮೇಲೆ ನೂರಾರು ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಯಿದೆ. ಅನ್ನದಾತರು ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತಿವೆ ಎನ್ನುತ್ತಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಮೇಲಾಧಿಕಾರಿಯಿಂದ ಸೂಚನೆ:

ರೈತರು ಹೆದ್ದಾರಿ ತಡೆಯಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಸ್ಥಳದಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನು ರಾಮನಗರ ಎಸ್ಪಿ ಗಿರೀಶ್​ ಅವರು ಆದೇಶ ಮಾಡಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಪೊಲೀಸರು ಕೂಡ ಎಚ್ಚರಿಕೆ ವಹಿಸಿದ್ದಾರೆ.

ಹಲವು ಸಂಘಟನೆಗಳು ಸಾಥ್​:

ರೈತರು ಕೆಂಗೇರಿ ರಸ್ತೆ ಹಾಗೂ ಮೈಸೂರು ರಸ್ತೆ ಕುಂಬಳಗೋಡು ಬಳಿ ಹೆದ್ದಾರಿ ಬಂದ್ ಮಾಡಲು ಸಾಧ್ಯತೆಯಿದ್ದು, ಅನ್ನದಾತರ ಹೋರಾಟಕ್ಕೆ ಹಲವು ಸಂಘಟನೆಗಳು ಸಾಥ್​ ನೀಡಿವೆ. ಸುಮಾರು ಮೂರು ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿವೆ ಎನ್ನಲಾಗುತ್ತಿದೆ.

ರೈತರನ್ನು ಬಂಧಿಸುವ ಸಾಧ್ಯತೆ:

ಮೈಸೂರು ರಸ್ತೆಯಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಹೆದ್ದಾರಿ ಬಂದ್ ಮಾಡಿದರೆ ರೈತರನ್ನು ಬಂಧಿಸುವ ಸಾಧ್ಯತೆ ಇದೆ. ಪಶ್ಚಿಮ ವಿಭಾಗದ ಪೊಲೀಸರಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.‌

Last Updated : Feb 6, 2021, 2:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.