ETV Bharat / state

ರೈತರು ಬೆಳೆದ ಹಣ್ಣು, ತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ: ಸಚಿವ ಎಸ್.ಟಿ.ಸೋಮಶೇಖರ್

ರೈತರು ತಾವು ಬೆಳೆದ ಹಣ್ಣುತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್
author img

By

Published : Dec 8, 2020, 10:23 PM IST

ಬೆಂಗಳೂರು: ಮಂಡ್ಯದ ಬಡಾವಣೆ ನಿರ್ಮಾಣದಲ್ಲಿ ಆದ ಅಕ್ರಮದ ವಿಚಾರಣೆ ನ್ಯಾಯಾಲಯದ ಹಂತದಲ್ಲಿದ್ದು, ಅಲ್ಲಿಂದ ವರದಿ ಲಭಿಸುತ್ತಿದ್ದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಕೆ.ಟಿ.ಶ್ರೀಕಂಠೇಗೌಡ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯದ ಬಡಾವಣೆಯ ಅಕ್ರಮದ ವಿಚಾರಣೆ ಸಿಬಿಐಗೆ ವಹಿಸಲಾಗಿದೆ. ಅವರು‌ ಕೋರ್ಟ್​ಗೆ ಮಾಹಿತಿ ಒದಗಿಸಬೇಕು. ಆದರೆ ಆ ಸಂದರ್ಭ ನಾವು ಏನೂ ಮಾಡುವಂತಿಲ್ಲ. ಆದಾಗ್ಯೂ 16 ಕೋಟಿ ರೂ. ಬಜೆಟ್ ನೀಡಿದ್ದೇವೆ. ನ್ಯಾಯಾಲಯದ ವರದಿ ಬರುತ್ತಿದ್ದಂತೆಯೇ ಅಕ್ರಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಸಂಶಯ ಬೇಡ ಎಂದರು.

ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, 700-800 ಎಕರೆ ವಿಸ್ತಾರವಾದ ಕೆರೆಯನ್ನು ಬಡಾವಣೆ ಮಾಡಿದ್ದರು. ಆದರೆ ಜನ ನಿವೇಶನ ಕೊಳ್ಳಲಿಲ್ಲ. ಶೇ. 50ರಷ್ಟು ನಿವೇಶನ ಖಾಲಿ ಆಗಲಿಲ್ಲ. ಈ ಬಡಾವಣೆಯನ್ನು ನಗರಸಭೆಗೆ ವಹಿಸಿಲ್ಲ. ಇನ್ನೊಂದು ಬಡಾವಣೆ ಕೂಡ ಆಗಿದೆ. ಹೌಸಿಂಗ್ ಬೋರ್ಡ್ ವ್ಯಾಪ್ತಿಗೆ ಒಳಪಟ್ಟಿದೆ. ಸಮಸ್ಯೆ ಹೆಚ್ಚಾಗಿದೆ. ಮೂಲಭೂತ ಸೌಕರ್ಯ ಇಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಸಲಹೆ ನೀಡಿದರು.

ಹಣ್ಣು-ತರಕಾರಿ ವ್ಯಾಪಾರ ಮುಕ್ತ

ರೈತರು ತಾವು ಬೆಳೆದ ಹಣ್ಣುತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಹಣ್ಣು, ತರಕಾರಿಯನ್ನು ಎಪಿಎಂಸಿಯಲ್ಲೇ ಮಾರಬೇಕು ಎಂದಿತ್ತು. ಈಗ ಸರ್ಕಾರ ಎಲ್ಲಿ ಬೇಕಾದರೂ ಮಾರಬಹುದು ಎಂದಿದೆ. ಹಾಪ್ ಕಾಮ್ಸ್ ಚಿಲ್ಲರೆ ಮಾರಾಟ ಮಾಡಿದರೆ, ಎಪಿಎಂಸಿ ಸಗಟು ಮಾರಾಟ ಮಾಡುತ್ತದೆ. ಯಾವ ಹಣ್ಣು, ತರಕಾರಿ ಮಾರಾಟಕ್ಕೂ ಎಲ್ಲಿಯೂ ನಿರ್ಬಂಧ ಇಲ್ಲ. ಅನುಕೂಲ, ಅವಕಾಶ ಇರುವ ಯಾವುದೇ ಸ್ಥಳದಲ್ಲಿ ವ್ಯಾಪಾರ ಮಾಡಬಹುದು. 1600 ಅಪಾರ್ಟ್​ಮೆಂಟ್ ಇದ್ದು, 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಕ್ತವಾಗಿ ಹಣ್ಣು, ತರಕಾರಿ ಮಾರುವ ಅವಕಾಶ ಇಲ್ಲವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರ ಸಚಿವರು, ಹೊಸ ಕಾನೂನು ಬಂದಿದ್ದು, ನಿರ್ಬಂಧ ವಿಧಿಸುವ ಅಂಶವನ್ನು ತೆಗೆದುಹಾಕಿದ್ದೇವೆ. ಲಾಕ್​ಡೌನ್​​ ಸಂದರ್ಭ ಎದುರಾದ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು.

ಮತ್ತೆ ಪಿ.ಆರ್.ರಮೇಶ್ ಮಾತನಾಡಿ, 62 ಕಡೆ ನೀವು ಖಾಸಗಿಯವರಿಗೆ ಅವಕಾಶ ನೀಡಿ ಮುಕ್ತ ‌ಜಾಗತೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ. ಸರ್ಕಾರ ಜನ ಹಾಗೂ ತರಕಾರಿ ಬೆಳೆಗಾರರ ನಡುವಿನ ಅಂತರ ಕಡಿಮೆ ಮಾಡುವ ಕಾರ್ಯ ಮಾಡಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ ಚರ್ಚೆಗೆ ಬಂದಿಲ್ಲ. ಆದರೆ ಈಗಲೇ ಮಳಿಗೆ ತೆರೆಯಲು ಪರವಾನಗಿ ನೀಡಿದ್ದೀರಿ. ಖಾಸಗಿಯವರ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್​, ಇದುವರೆಗೂ ಎಪಿಎಂಸಿಯಲ್ಲಿ ಯಾವುದೇ ದೂರು ಬರದ ರೀತಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಅರ್ಹರದ್ದು ಮಾತ್ರ ಸಾಲ ಮನ್ನಾ

ನಾವು ಸಾಲ ಮನ್ನಾಗೆ ಅರ್ಜಿ ಹಾಕಿದವರದ್ದೆಲ್ಲಾ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ನಾವು ಕೂಡ ವಿಚಾರಣೆ ನಡೆಸಿ ಅರ್ಹರ ಸಾಲ ಮನ್ನಾ ಮಾಡಲಿದ್ದೇವೆ. ಯಾವುದೇ ಆತಂಕ‌ ಬೇಡ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಆದಾಯ ತೆರಿಗೆ ಭರಿಸುವವರು ಸಾಲ ಮನ್ನಾಗೆ ಒಳಪಡಲ್ಲ. ಆದಾಯ ಮಿತಿ ಹೇರಲಾಗಿದ್ದು, ಹೆಚ್ಚಿನವರಿಗೆ‌ ಪಾವತಿ ಆಗಲ್ಲ. ಆಧಾರ್ ಕಾರ್ಡ್ ಇರಬೇಕು ಎಂದಿದೆ. ಬ್ಯಾಂಕ್ ಖಾತೆ ಸಮರ್ಪಕವಾಗಿ ನೀಡಬೇಕೆಂದು ಹೇಳಿದ್ದರೂ 2.30 ಲಕ್ಷ ಮಂದಿಯಲ್ಲಿ ಇನ್ನೂ 36 ಸಾವಿರ ಮಂದಿ ಮಾಹಿತಿ ನೀಡಿಲ್ಲ. 296 ಕೋಟಿ ರೂ. ಹಣ ಪಾವತಿಸುವಂತೆ‌ ಕೋರಿದ್ದು, ಬಿಡುಗಡೆ ಆಗಲಿದೆ. ಕೇಳಿದವರಿಂದ ಸೂಕ್ತ ಮಾಹಿತಿ ಲಭಿಸದಿದ್ದರೆ ಹಣ ಪಾವತಿ ಮಾಡಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಮಾತನಾಡಿ, 57 ಸಾವಿರ ರೈತರ ಸಾಲ ಮನ್ನಾ ಬಾಕಿ ಇದೆ.‌ ಈಗಾಗಲೇ ಸಾಲ ಮನ್ನಾ ಮಾಡಿದ ಹಣದ ಜತೆಗೆ ಭರಿಸಬೇಕಿರುವ ಮೊತ್ತ ಪಾವತಿಸಬೇಕೆಂದು ಮನವಿ ಮಾಡಿದರು.

ಡಿಜಿಟಲೀಕರಣ

ಸಹಕಾರಿ ಕ್ಷೇತ್ರದ ಸಾಲ ನೀಡಿಕೆ, ವಸೂಲಿ ವಿಚಾರವಾಗಿ ಯಾವುದೇ ಅನುಮಾನ ಬಾರದಿರಲಿ ಎಂದು ಸಂಪೂರ್ಣ ಡಿಜಿಟಲೀಕರಣಕ್ಕೆ ಒಳಪಡಿಸುತ್ತಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸದಸ್ಯ ಗೋಪಾಲಸ್ವಾಮಿ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸದಸ್ಯರು ಮಾಡಿದ ಆರೋಪಕ್ಕೆ ಸಂಬಂಧಿಸಿ ಯಾವುದೇ ರೀತಿ ಅರ್ಜಿ ಬಂದಿಲ್ಲ. ಸಾಲ ವ್ಯವಸ್ಥೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ರೀತಿ ಅಕ್ರಮ ಆಗದಂತೆ ನೋಡಿಕೊಳ್ಳುತ್ತೇವೆ. ಸಲ್ಲಿಕೆಯಾದ ದೂರಿನ ವಿಚಾರಣೆ ಬೇರೆ ವಿಭಾಗದ ಉಪ ನೋಂದಣಾಧಿಕಾರಿ ಮೂಲಕ ಬೇಕಾದರೂ ತನಿಖೆ ಮಾಡಿಸೋಣ ಎಂದರು.

ಕೂಡಲೇ ಕಾರ್ಡ್ ವಿತರಣೆ ಆರಂಭ

ಪಂಚಾಯತಿ ಚುನಾವಣೆ‌ ನಂತರ ಗ್ರಾಮೀಣ ಮಟ್ಟದಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ನೀಡುತ್ತೇವೆ. 1.8 ಲಕ್ಷ ಮಂದಿಯ ಅರ್ಜಿ ಬಾಕಿ ಇದೆ. ಕೊರೊನಾ ಬಂದಿದ್ದರಿಂದ ವಿತರಣೆ ಸಾಧ್ಯವಾಗಿರಲಿಲ್ಲ. ಈಗ ರೋಗ ನಿಯಂತ್ರಣಕ್ಕೆ ಬಂದಿದ್ದು, ವಿತರಣೆ ಆರಂಭಿಸುತ್ತೇವೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.

ಕಾಂಗ್ರೆಸ್ ಸದಸ್ಯ ಧರ್ಮಸೇನ ಪ್ರಶ್ನೆಗೆ ಉತ್ತರಿಸಿ, ಓರ್ವ ವ್ಯಕ್ತಿ ಎರಡು ಕಾರ್ಡ್ ಹೊಂದಿದ್ದರೆ ಅದು ಬೋಗಸ್ ಕಾರ್ಡ್ ಆಗುತ್ತದೆ. ಅನರ್ಹ ಅಂದರೆ ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿದವರದ್ದಾಗಿದೆ. ಇದರಿಂದ ಅನರ್ಹಗೊಳಿಸಲಾಗಿದೆ. ಕೋವಿಡ್ ಕಾರಣಕ್ಕೆ ಕಾರ್ಡ್ ನೀಡಿಕೆ ನಿಂತಿದೆ. ಈಗ ಆರಂಭಿಸಿ ವಿತರಣೆ ಮಾಡಲಿದ್ದು, ನಂತರ ಹೊಸ ಅರ್ಜಿ ಸ್ವೀಕರಿಸುತ್ತೇವೆ ಎಂದು ಭರವಸೆ ಇತ್ತರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.