ETV Bharat / state

ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದ ರೈತ ಸ್ನೇಹಿ ಉರಗ... - Lake snake protection

ಬೆಂಗಳೂರು ನಗರದ ಇನ್‌ಫ್ಯಾಂಟ್ರಿ ರಸ್ತೆಯ ಮಂತ್ರಿ ಅಪಾರ್ಟ್‌ಮೆಂಟ್ ನಲ್ಲಿರುವ ಗಾರ್ಡನ್ ಏರಿಯಾದಲ್ಲಿ ಕಂಡು ಬಂದ ಹಾವನ್ನು ಉರಗ ತಜ್ಞ, ವನ್ಯಜೀವಿ ಸಂರಕ್ಷ ಮೋಹನ್ ಹಿಡಿದು ಸಂರಕ್ಷಿಸಿದ್ದಾರೆ.

Farmer friendly snake found in apartment of Bengaluru
ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದ ರೈತ ಸ್ನೇಹಿ ಉರಗ...
author img

By

Published : Apr 26, 2020, 2:38 PM IST

ಬೆಂಗಳೂರು: ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದ ಕೇರೆ ಹಾವನ್ನು ಉರಗ ತಜ್ಞ, ವನ್ಯಜೀವಿ ಸಂರಕ್ಷ ಮೋಹನ್ ಹಿಡಿದು ಸಂರಕ್ಷಿಸಿದ್ದಾರೆ.

ನಗರದ ಇನ್‌ಫ್ಯಾಂಟ್ರಿ ರಸ್ತೆಯ ಮಂತ್ರಿ ಅಪಾರ್ಟ್‌ಮೆಂಟ್ ನಲ್ಲಿರುವ ಗಾರ್ಡನ್ ಏರಿಯಾದಲ್ಲಿ ಹಾವನ್ನು ಕಂಡ ಅಲ್ಲಿನ‌ ನಿವಾಸಿಗಳು ಉರಗ ತಜ್ಞ ಮೋಹನ್ ಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಮೋಹನ್, ಆರು ಅಡಿಗೂ ಹೆಚ್ಚು ಉದ್ದ ಇದ್ದ ಕೇರೆ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಬೇಸಿಗೆಯಾದ ಕಾರಣ ಬಿಸಿಲಿನ ಶಾಖದಿಂದ ರಕ್ಷಿಸಿಕೊಳ್ಳಲು ಹಾವು ತಂಪು ಜಾಗ ಹುಡುಕಿಕೊಂಡು ಬಂದಿದೆ. ಹೊಲಗದ್ದೆಗಳಲ್ಲಿ ತೆಂಗಿನ ಮರಗಳಲ್ಲಿ ಇರುವ ಇಲಿಗಳನ್ನು ತಿನ್ನುವ ಈ ಹಾವು ರೈತನ ಬೆಳೆ ಸಂರಕ್ಷಿಸುತ್ತದೆ. ಆದ್ದರಿಂದ ಇದನ್ನು ರೈತ ಮಿತ್ರ ಹಾವು ಎಂದು ಕರೆಯುತ್ತಾರೆ ಎಂದು ಮೋಹನ್​ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.