ETV Bharat / state

ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಸೆ.25ರಂದು ಭಾರತ್ ಬಂದ್​ಗೆ ಕರೆ - ಅಖಿಲ‌ ಭಾರತ ಕಿಸಾನ್ ಸಂಘರ್ಷ ಸಮಿತಿ

ಕೊರೊನಾ ಸಂದರ್ಭವನ್ನೇ ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದು ಸಮಂಜಸವಲ್ಲ. ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ್ರೆ ವಿಧಾನಸಭಾ ಅಧಿವೇಶನನಲ್ಲಿ ಚರ್ಚೆಯಾಗಬೇಕು. ಸದನದಲ್ಲಿ ಮಂಡನೆಯಾಗಿ ಬಹುಮತ‌ ದೊರೆತ ನಂತರವಷ್ಟೇ ತಿದ್ದುಪಡಿ ಮಾಡಬೇಕು..

ಸೆ.25ರಂದು ಭಾರತ್ ಬಂಸೆ.25ರಂದು ಭಾರತ್ ಬಂದ್​ಗೆ ಕರೆದ್​ಗೆ ಕರೆ
ಸೆ.25ರಂದು ಭಾರತ್ ಬಂದ್​ಗೆ ಕರೆ
author img

By

Published : Sep 21, 2020, 5:41 PM IST

ಬೆಂಗಳೂರು : ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಸೇರಿ ವಿವಿಧ ಕಾಯ್ದೆಗಳಿಗೆ ಸುಗ್ರೀವಾಜ್ಞೆ ತಂದಿರುವುದನ್ನು ವಿರೋಧಿಸಿ ಅಖಿಲ‌ ಭಾರತ ಕಿಸಾನ್ ಸಂಘರ್ಷ ಸಮಿತಿಯು ಸೆ. 25ರಂದು ಭಾರತ್ ಬಂದ್ ಕರೆ ಕೊಟ್ಟಿದೆ.

ನಗರದ ಫ್ರೀಡಂಪಾರ್ಕ್​ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ರೈತ, ದಲಿತ ಹಾಗೂ ಕಾರ್ಮಿಕರಿಗೆ ಮಾರಕವಾಗುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಲಕ್ಷಾಂತರ ರೈತರ ಜೀವನವನ್ನೇ ಕಸಿಯುವ ಕೆಲಸ‌‌ ಮಾಡಿದೆ ಎಂದು ಆರೋಪಿಸಿದರು. ಬಳಿಕ ನಗರ ರೈಲು ನಿಲ್ದಾಣದಿಂದ ಫ್ರೀಡಂಪಾರ್ಕ್​ವರೆಗೂ ಸಾವಿರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಜಾಥಾ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಮಾತನಾಡಿ, ಕೊರೊನಾ ಸಂದರ್ಭವನ್ನೇ ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದು ಸಮಂಜಸವಲ್ಲ. ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ್ರೆ ವಿಧಾನಸಭಾ ಅಧಿವೇಶನನಲ್ಲಿ ಚರ್ಚೆಯಾಗಬೇಕು. ಸದನದಲ್ಲಿ ಮಂಡನೆಯಾಗಿ ಬಹುಮತ‌ ದೊರೆತ ನಂತರವಷ್ಟೇ ತಿದ್ದುಪಡಿ ಮಾಡಬೇಕು.

ಆದರೆ, ಇವೆಲ್ಲವೂ ಅನುಸರಿಸದೆ ಏಕಾಏಕಿ ಸುಗ್ರೀವಾಜ್ಞೆ ತಂದ ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲ. ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ‌. ಜನರಿಗೆ ಅನ್ಯಾಯ ಮಾಡುವ ಕೆಲಸ ಮಾಡಬೇಡಿ. ಈ ಹೋರಾಟ ಇವತ್ತಿಗೆ ನಿಲ್ಲೋದಿಲ್ಲ. ಪಾರ್ಲಿಮೆಂಟ್​ಗೆ ಅಪಮಾನ ಮಾಡುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಎಂದು‌‌‌ ಕಿಡಿಕಾರಿದ್ದಾರೆ.

ಸ್ವರಾಜ್ ಇಂಡಿಯಾ ಪಕ್ಷದ ಯೋಗೇಶ್ ಯಾದವ್ ಮಾತನಾಡಿ, ಕಾಯ್ದೆಗಳಿಗೆ ಸುಗ್ರೀವಾಜ್ಞೆ ತರುವ ಮೂಲಕ ರೈತರಿಗೆ ಉಡುಗೊರೆ ಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ನಿಜವಾಗಿಯೂ ಗಿಫ್ಟ್ ನೀಡಿದ್ದರೆ ಅಧಿವೇಶನದಲ್ಲಿ ಯಾಕೆ ಚರ್ಚೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಭಾರತೀಯ ಕಿಸಾನ್ ಸಂಘಟನೆಯೇ ಇದಕ್ಕೆ ವಿರೋಧಿಸಿದೆ‌.

ರೈತರ ಹೆಸರಿನಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತಂದು‌ ಸುಗ್ರಿವಾಜ್ಞೆ ಹೊರಡಿಸಿದೆ. ಇದನ್ನು ವಿರೋಧಿಸಿ ದೇಶದೆಲ್ಲೆಡೆ ರೈತರು‌ ಪ್ರತಿಭಟನೆ‌ ನಡೆಸುತ್ತಿದ್ದಾರೆ.‌ ಆದರೆ, ಮೋದಿಯವರು ಪ್ರತಿಭಟನೆ ಮಾಡುತ್ತಿರುವುದು ರೈತರಲ್ಲ, ಮಧ್ಯವರ್ತಿಗಳು ಎಂದು ಹೇಳಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಗ್ರೀವಾಜ್ಞೆ ತಂದಿರುವವರ ವಿರುದ್ಧ ಅಖಿಲ‌ ಭಾರತ ಕಿಸಾನ್ ಸಂಘರ್ಷ ಸಮಿತಿಯು ಇದೇ ತಿಂಗಳು 25ರಂದು ಭಾರತ್ ಬಂದ್​ಗೆ ಕರೆ ಕೊಟ್ಟಿದೆ. ಎಲ್ಲರೂ ಬಂದ್​ನಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.