ETV Bharat / state

ಮೇಲ್ಮನೆ ಸದಸ್ಯ ಸ್ಥಾನದಿಂದ ನಿವೃತ್ತರಾದ 16 ಸದಸ್ಯರಿಗೆ ಆತ್ಮೀಯ ಬೀಳ್ಕೊಡುಗೆ

ಅವಧಿ ಪೂರ್ಣಗೊಳಿಸಿ ವಿಧಾನಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಿರುವ 16 ಮಂದಿ ಸದಸ್ಯರನ್ನು‌ ಇಂದು ಬೀಳ್ಕೊಡಲಾಯಿತು.

Farewell to 16 members who have retired from the Council
ವಿಧಾನಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಿದ 16 ಮಂದಿ ಸದಸ್ಯರಿಗೆ ಬೀಳ್ಕೊಡುಗೆ
author img

By

Published : Jul 10, 2020, 1:23 PM IST

ಬೆಂಗಳೂರು: ಅವಧಿ ಪೂರ್ಣಗೊಳಿಸಿ ವಿಧಾನಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಿದ 16 ಸದಸ್ಯರನ್ನು‌ ಇಂದು ಬೀಳ್ಕೊಡಲಾಯಿತು.

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ವಿಧಾನ ಪರಿಷತ್ ಸಚಿವಾಲಯ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮತ್ತಿತರ ಗಣ್ಯರು ನಿವೃತ್ತ ಮೇಲ್ಮನೆ ಸದಸ್ಯರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.

Farewell to 16 members who have retired from the Council
ವಿಧಾನಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಿದ 16 ಮಂದಿ ಸದಸ್ಯರಿಗೆ ಬೀಳ್ಕೊಡುಗೆ

ಜಯಮಾಲ, ತಿಪ್ಪಣ್ಣ ಕಮಕನೂರು, ಶರಣಪ್ಪ ಮಟ್ಟೂರು, ಜಯಮ್ಮ, ಬೋಸರಾಜ್, ಎಚ್.ಎಂ.ರೇವಣ್ಣ, ಟಿ.ಎ.ಶರವಣ, ಎಂ.ಸಿ ವೇಣುಗೋಪಾಲ್ ಅವರಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ವೇಳೆ ಎಂಟು ಮಂದಿ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಉಳಿದ ಸದಸ್ಯರು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಸಿಎಂ ಗೈರು :

ಗೃಹ ಕಚೇರಿ ಕೃಷ್ಣಾದಲ್ಲಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಗೈರು ಹಾಜರಾಗಿದ್ದರು.

ನಿವೃತ್ತರಾದ ಪರಿಷತ್ ಸದಸ್ಯರು :

ನಾಮನಿರ್ದೇಶಿತ ಸದಸ್ಯರಾಗಿದ್ದ ಕಾಂಗ್ರೆಸ್‌ನ ಕೆ.ಅಬ್ದುಲ್ ಜಬಬಾರ್, ಹಿರಿಯ ನಟಿ ಡಾ.ಜಯಮಾಲ ರಾಮಚಂದ್ರ, ಐವನ್ ಡಿಸೋಜಾ, ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರ ಅವರು ಜೂ.23 ರಂದು ನಿವೃತ್ತರಾಗಿದ್ದರು.

ರಾಜ್ಯವಿಧಾನ ಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಿದ್ದ ಸದಸ್ಯರಾದ ಕಾಂಗ್ರೆಸ್ ಸದಸ್ಯೆ ಜಯಮ್ಮ, ಎನ್.ಎಸ್.ಬೋಸರಾಜು, ಎಚ್.ಎಂ.ರೇವಣ್ಣ, ಡಿ.ಯು.ಮಲ್ಲಿಕಾರ್ಜುನ, ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್, ಜೆಡಿಎಸ್​ನ ಟಿ.ಎ. ಶರವಣ ಅವರು ಜೂ.30ರಂದು ನಿವೃತ್ತಿಯಾಗಿದ್ದರು. ಹಾಗೆಯೇ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಸದಸ್ಯರಾದ ಜೆಡಿಎಸ್‌ನ ಆರ್. ಚೌಡರೆಡ್ಡಿ ತೂಪಲ್ಲಿ, ಕಾಂಗ್ರೆಸ್​​ನ ಎಸ್.ವಿ.ಸುಂಕನೂರ, ಶಿಕ್ಷಕರ ಕ್ಷೇತ್ರದ ಚುನಾಯಿತ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಕಾಂಗ್ರೆಸ್ ಶರಣಪ್ಪ ಮುಟ್ಟೂರ ಅವರು ಜೂ.30ರಂದು ನಿವೃತ್ತಿಯಾಗಿದ್ದರು.

ಹಿಂದುಳಿದ ಸಮುದಾಯದಿಂದ ಬಂದ ನನಗೆ ಉತ್ತಮ ಅವಕಾಶ ದೊರಕಿಸಿ ಕೊಡಲಾಗಿತ್ತು. ನನಗೆ ತಂದೆ ಇಲ್ಲ. ಸಭಾಪತಿಗಳನ್ನು ತಂದೆ ಸ್ಥಾನದಲ್ಲಿ ನೋಡಿದ್ದೇನೆ. ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಸೋದರನ ಸ್ಥಾನದಲ್ಲಿ ನೋಡಿದ್ದೇನೆ‌ ಎಂದು ಹೇಳುವಾಗ ತಿಪ್ಪಣ್ಣ ಕಮಕನೂರು ಭಾವುಕರಾದರು.

ಈ ಸಂದರ್ಭದಲ್ಲಿ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಪ್ರತಿಪಕ್ಷ ಮುಖ್ಯ ಸಚೇತಕ ನಾರಾಯಣಸ್ವಾಮಿ, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಸೇರಿ ಹಲವರು ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.