ಬೆಂಗಳೂರು: ಹೆಸರಾಂತ ಮೇಕಪ್ ಆರ್ಟಿಸ್ಟ್ ಕೃಷ್ಣ ಇಂದು ನಿಧನರಾಗಿದ್ದಾರೆ.
ಕನ್ನಡದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಕೃಷ್ಣ, ಮೇಕಪ್ ಕೃಷ್ಣ ಎಂದೇ ಖ್ಯಾತರಾಗಿದ್ರು. 55 ವರ್ಷ ವಯಸ್ಸಿನ ಕೃಷ್ಣ ಸಾಕಷ್ಟು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸದ್ಯ ಕೃಷ್ಣ ಅವರ ಪಾರ್ಥಿವ ಶರೀರವನ್ನು ಬನಶಂಕರಿಯ ಎರಡನೇ ಹಂತದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.
ಇಂದು ಸಂಜೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೇಕಪ್ ಕೃಷ್ಣ ಅವರ ಕುಟುಂಬದವರು ತಿಳಿಸಿದ್ದಾರೆ. ಮೇಕಪ್ ಕೃಷ್ಣ ಕನ್ನಡದ ಕಲಾವಿದರು ಮಾತ್ರವಲ್ಲದೆ, ಬಾಲಿವುಡ್ ಕಲಾವಿದರಿಗೂ ಮೇಕಪ್ ಮಾಡಿ ಸೈ ಎನ್ನಿಸಿಕೊಂಡಿದ್ದರು. ದೂರದರ್ಶನದಲ್ಲಿ ಡಾ. ರಾಜ್ ಕುಮಾರ್ ಅವ್ರ ಸಂದರ್ಶನ ಮಾಡಿ, ಪ್ರಖ್ಯಾತಿ ಗಳಿಸಿದ್ದ ಕೃಷ್ಣ, ಕನ್ನಡದ ಹಲವಾರು ಹಿರಿಯ ನಟರಿಗೆ ಮೇಕಪ್ ಮಾಡಿದ್ದಾರೆ.