ETV Bharat / state

ನೌಕರರ ಬೇಡಿಕೆಗಳು ನ್ಯಾಯ ಸಮ್ಮತ, ಭಿಕ್ಷೆ ಬೇಡಿರೋದು ನೋವು ತರಿಸಿದೆ.. ಖ್ಯಾತ ವೈದ್ಯ ಅಂಜನಪ್ಪ

ಸರ್ಕಾರಕ್ಕೆ ಒಂದು ಮನವಿ ಏನೆಂದರೆ ಸಾರಿಗೆ ಸಿಬ್ಬಂದಿ ಕೂಡ ನಮ್ಮಂತೆ ನಾಗರಿಕರು. ಜೀವನವೇ ಬರ್ಬಾದ್ ಆಗಿರಬೇಕಾದರೆ ಯಾವ ಕೋವಿಡ್​​​ಗೂ ಹೆದರೋದಿಲ್ಲ. ಕೋವಿಡ್ ಬಂದರೂ ಪರವಾಗಿಲ್ಲ, ತಮ್ಮ ಬೇಡಿಕೆ ಈಡೇರಲಿ ಎಂದು ಪ್ರತಿಭಟನೆಗೆ ಕುಳಿತಿದ್ದಾರೆ. ಎಲ್ಲಾ ಸಾರಿಗೆ ಸಿಬ್ಬಂದಿಗೂ ಹಬ್ಬದ ದಿನ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತೇನೆ, ಒಳ್ಳೆಯ ಸಂದೇಶ ಬರಲಿ..

famous-doctor-anjanappa
ಖ್ಯಾತ ವೈದ್ಯ ಅಂಜನಪ್ಪ
author img

By

Published : Apr 13, 2021, 8:54 PM IST

ಬೆಂಗಳೂರು : ಸಾರಿಗೆ ಸಿಬ್ಬಂದಿ ಎಲ್ಲಾ ಸಾಮಾಜದವರಿದ್ದಾರೆ. ನಾನೊಬ್ಬ ಒಕ್ಕಲಿಗ ಸಮಾಜದವನಾದರೂ ಜಾತಿ ತರಲು ಇಷ್ಟಪಡುವುದಿಲ್ಲ. ಒಕ್ಕಲಿಗರ ಸಂಘದ ಚುನಾವಣೆ ನಡೆಯುವಾಗ ಪ್ರತಿಯೊಬ್ಬ ಸದಸ್ಯರ ಹತ್ತಿರ ಹೋಗಿ ಮತ ಕೇಳುತ್ತೇವೆ, ಸಹಾಯ ಮಾಡುತ್ತೇವೆ ಎಂದೂ ಹೇಳುತ್ತೇವೆ. ಆದರೆ, ಇಲ್ಲಿ ನಾವು ಜಾತ್ಯಾತೀತವಾಗಿ ಬೆಂಬಲಿಸಬೇಕು ಎಂದು ಖ್ಯಾತ ವೈದ್ಯ ಅಂಜನಪ್ಪ ಕರೆ ನೀಡಿದ್ದಾರೆ.

ಈ ಕುರಿತು ವಿಡಿಯೋ ಮಾಡಿರುವ ಅಂಜನಪ್ಪ ಅವರು, ಬಿಎಂಟಿಸಿ, ಕೆಎಸ್​​​ಆರ್​ಟಿಸಿ ನೌಕರರು ಅದೂ ಹಬ್ಬದ ಸಮಯದಲ್ಲಿ ಭಿಕ್ಷೆ ಬೇಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿರುವುದನ್ನು ನೋಡಿ ಮನಸ್ಸಿಗೆ ತುಂಬಾ ಬೇಸರ ತಂದಿದೆ.

ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿದ ವೈದ್ಯ ಅಂಜನಪ್ಪ..

ಯಾವುದೇ ಒಂದು ಸಮಾಜದಲ್ಲಿ ತಮಗೆ ಬರಬೇಕಾದ ಅನುಕೂಲುಗಳನ್ನು ಕೇಳುವುದರಲ್ಲಿ ತಪ್ಪಿಲ್ಲ. ಇದು ಪ್ರತಿ ಸರ್ಕಾರದ ಜವಾಬ್ದಾರಿ. ನಾನು ಯಾಕೆ ನ್ಯಾಯಯುತವಾಗಿ ಬೇಡಿಕೆ ಎನ್ನುತ್ತೇನೆ ಅಂದರೆ ಕೋಡಿಹಳ್ಳಿ ಚಂದ್ರಶೇಖರ್ ಅಂಥ ರೈತ ನಾಯಕರು ಈವರೆಗೂ ಉದ್ರೇಕಕ್ಕೊಳಗಾಗುವ ಮಾತನ್ನಾಡಿಲ್ಲ. ಬಹಳ ನ್ಯಾಯ ಸಮಂಜಸವಾಗಿ ಬೇಡಿಕೆಗಳನ್ನು ಕೇಳುತ್ತಿದ್ದಾರೆ ಎಂದಿದ್ದಾರೆ.

ಸರ್ಕಾರಕ್ಕೆ ಒಂದು ಮನವಿ ಏನೆಂದರೆ ಸಾರಿಗೆ ಸಿಬ್ಬಂದಿ ಕೂಡ ನಮ್ಮಂತೆ ನಾಗರಿಕರು. ಜೀವನವೇ ಬರ್ಬಾದ್ ಆಗಿರಬೇಕಾದರೆ ಯಾವ ಕೋವಿಡ್​​​ಗೂ ಹೆದರೋದಿಲ್ಲ. ಕೋವಿಡ್ ಬಂದರೂ ಪರವಾಗಿಲ್ಲ, ತಮ್ಮ ಬೇಡಿಕೆ ಈಡೇರಲಿ ಎಂದು ಪ್ರತಿಭಟನೆಗೆ ಕುಳಿತಿದ್ದಾರೆ. ಎಲ್ಲಾ ಸಾರಿಗೆ ಸಿಬ್ಬಂದಿಗೂ ಹಬ್ಬದ ದಿನ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತೇನೆ, ಒಳ್ಳೆಯ ಸಂದೇಶ ಬರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.