ETV Bharat / state

ಸಂಚಾರಿ ವಿಜಯ್ ಅಂಗಾಂಗ ದಾನಕ್ಕೆ ನಿರ್ಧಾರ: ಸಹೋದರ ಸಿದ್ದೇಶ್ ಮಾಹಿತಿ - ಸಂಚಾರಿ ವಿಜಯ್ ಸಾವು

ರಸ್ತೆ ಅಪಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿರುವ ನಟ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಸಂಬಂಧ ಅವರ ಸಹೋದರ ಸಿದ್ದೇಶ್​ ಮಾಹಿತಿ ನೀಡಿದ್ದಾರೆ.

Sanchari Vijay passes away
ಸಂಚಾರಿ ವಿಜಯ್ ಅಂಗಾಗ ದಾನ
author img

By

Published : Jun 14, 2021, 1:57 PM IST

Updated : Jun 14, 2021, 5:01 PM IST

ಬೆಂಗಳೂರು : ಅಪಘಾತದಿಂದ ತೀವ್ರವಾಗಿ ಗಾಯಗೊಂಡು ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸ್ಯಾಂಡಲ್​ವುಡ್​ ನಟ ಸಂಚಾರಿ ವಿಜಯ್ ಅವರು ಮೆದುಳು ನಿಷ್ಕ್ರಿಯವಾಗಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ವಿಜಯ್ ಅವರ ಸಹೋದರ ಸಿದ್ದೇಶ್ ಮಾತನಾಡಿ, ಬ್ರೈನ್ ಡೆಡ್ ಸ್ಟೇಜ್​ನಿಂದ ಹೊರಬರೋದು ಕಷ್ಟವಿದೆ. ಸಮಾಜದ ಒಳಿತಿಗಾಗಿ ಸಂಚಾರಿ ವಿಜಯ್ ದುಡಿಯುತ್ತಿದ್ದರು. ಆದ್ದರಿಂದ ಅವರ ಅಂಗಾಂಗಗಳನ್ನ ದಾನ ಮಾಡಲು ನಿರ್ಧರಿಸಿದ್ದೇವೆ. ನಾರ್ಮಲ್ ಡೆತ್ ಆದರೆ ಅಂಗಾಂಗ ದಾನ ಮಾಡಕ್ಕಾಗಲ್ಲ. ಇದರಿಂದ ನಾಲ್ಕು ಜನರಿಗೆ ಸಹಾಯವಾಗಲಿ ಎಂದು ಭಾವುಕರಾದರು.

ವಿಜಯ್ ಸಹೋದರ ಸಿದ್ದೇಶ್

ಕೋವಿಡ್ ಕಷ್ಟಕಾಲದಲ್ಲಿ ಕೆಲಸ ಮಾಡಿದ್ದಾನೆ. ನೆರೆ ಪರಿಹಾರಕ್ಕಾಗಿಯೂ 24 ಗಂಟೆ ಶ್ರಮಿಸಿದ್ದಾನೆ. ಅವನ ಹಿಂದೆ ನಿಂತ ಎಲ್ಲ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ, ವಿಶೇಷವಾಗಿ ಡಿಸಿಎಂ ಅಶ್ವತ್ಥ​ ನಾರಾಯಣ ಅವರಿಗೆ ಧನ್ಯವಾದ ಎಂದರು.

ಓದಿ : ಇಹಲೋಕದ 'ಸಂಚಾರ' ನಿಲ್ಲಿಸಿದ ವಿಜಯ್: ಕಂಬನಿ ಮಿಡಿದ ಕಿಚ್ಚ ಸುದೀಪ್‌

Last Updated : Jun 14, 2021, 5:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.