ಬೆಂಗಳೂರು : ದಕ್ಷ, ಪ್ರಾಮಾಣಿಕ ಅಧಿಕಾರಿಯೆಂದೇ ಹೆಸರಾಗಿದ್ದ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರ ಪಿಂಚಣಿಯನ್ನು ತಡೆ ಹಿಡಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕರ್ತವ್ಯದಲ್ಲಿದ್ದಾಗ ಸುಳ್ಳು ಪ್ರಕರಣ ದಾಖಲಿಸಿದ್ದರಿಂದ ಪಿಂಚಣಿ ಹಣ ತಡೆ ಹಿಡಿಯಲಾಗಿದೆ ಎನ್ನಲಾಗ್ತಿದೆ.
ಪ್ರಕರಣವನ್ನು ರದ್ದುಗೊಳಿಸಲು ಸಿಎಂ ಹಾಗೂ ಸಚಿವರ ಆದೇಶ ಇದ್ರೂ ಕಂದಾಯ ಇಲಾಖೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಕೆ.ಮಥಾಯಿ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಬಿಬಿಎಂಪಿ ಜಾಹೀರಾತು ಮಾಫಿಯಾ, ಮಂಡ್ಯಾದ ಮೂಢಾದಲ್ಲಿ ನಿವೇಶನ ಹಂಚಿಕೆ ಅವ್ಯವಹಾರ, ಸಕಾಲದ ಕೆಲಸಕ್ಕೆ ಹಿರಿಯ ಅಧಿಕಾರಿಗಳಿಂದ ಅಡ್ಡಿಯಾಗುತ್ತಿದ್ದ ಬಗ್ಗೆ ಸರ್ಕಾರಕ್ಕೆ ವರದಿ ಮಾಡಿದ್ದ ಕೆ.ಮಥಾಯಿ ಅವರು, ಹಲವು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದರಿಂದ ಅಧಿಕಾರಿಗೆ ನ್ಯಾಯಬದ್ಧವಾಗಿ ದೊರಕಬೇಕಾದ ಸೌಲಭ್ಯಗಳಿಗೂ ಕೊಕ್ಕೆ ಹಾಕಲಾಗಿದೆ. ಎಲ್ಲ ಆಧಾರ ರಹಿತ ಪ್ರಕರಣಗಳನ್ನು ರದ್ದು ಮಾಡಲು ಸ್ವತಃ ಮುಖ್ಯಮಂತ್ರಿಗಳು ಆದೇಶಿಸಿದ್ದರೂ, ರದ್ದು ಮಾಡಿಲ್ಲ.
ಇದರಿಂದ ಐದು ತಿಂಗಳಿಂದ ಬರಬೇಕಾಗಿದ್ದ ಪಿಂಚಣಿ ಸ್ಥಗಿತಗೊಂಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಿಎಂಗೆ ಮನವಿ ಮಾಡಿದ್ದಾರೆ.