ETV Bharat / state

ಖೋಟಾನೋಟು ಸಾಗಣೆ: ಮಹಿಳೆಗೆ ಅಪರಾಧಿ ಎಂದು ಘೋಷಿಸಿ ನಾಳೆಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿಸಿರುವ ಎನ್ಐಎ ಕೋರ್ಟ್ - etv bharat kannada

ಖೋಟಾನೋಟು ಸಾಗಾಟ ಪ್ರಕರಣದಲ್ಲಿ ಬಂಧಿತೆಯಾಗಿದ್ದ ಮಹಿಳೆಗೆ ಎನ್ಐಎ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿದೆ.

ಖೋಟಾನೋಟು ಸಾಗಾಟ ಪ್ರಕರಣ
ಖೋಟಾನೋಟು ಸಾಗಾಟ ಪ್ರಕರಣ
author img

By ETV Bharat Karnataka Team

Published : Sep 11, 2023, 10:57 PM IST

ಬೆಂಗಳೂರು: ನೋಟು ಬ್ಯಾನ್ ಬಳಿಕ ಖೋಟಾನೋಟು ಜಾಲದಲ್ಲಿ ಬಂಧಿತೆಯಾಗಿದ್ದ ಮಹಿಳೆಗೆ ಎನ್ಐಎ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿದೆ. 53 ವರ್ಷದ ಜೆ.ವನಿತಾ ಆಲಿಯಾಸ್ ತಂಗಂ ರಾಮಚಂದ್ರಪುರ ಎಂಬಾಕೆ ಸುದೀರ್ಘ ವಿಚಾರಣೆ ವೇಳೆ ನಕಲಿ ನೋಟು ಸರಬರಾಜು ಮಾಡಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ತೀರ್ಪು ನೀಡಿದ್ದು ನಾಳೆ ಶಿಕ್ಷೆ ಪ್ರಮಾಣ ಘೋಷಿಸಿದೆ.

ನೋಟು ಅಮಾನ್ಯಿಕರಣ ವೇಳೆ 2 ಸಾವಿರ ಮುಖಬೆಲೆಯ 6.40 ಲಕ್ಷ ಹಣವನ್ನ ಸಾಗಾಟ ಹಿನ್ನೆಲೆಯಲ್ಲಿ 2018 ಆಗಸ್ಟ್ ನಲ್ಲಿ ಮಾದನಾಯಕಹಳ್ಳಿ ಠಾಣೆ ಪೊಲೀಸರು ವನಿತಾಳನ್ನ ಬಂಧಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು‌. ಮಾದನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನನ್ನ ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಎನ್ಐಎಗೆ ಹಸ್ತಾಂತರಿಸಲಾಗಿತ್ತು.

ನಂತರ ಸಜ್ಜಿದ್ ಆಲಿ, ಎಂ.ಜಿ.ರಾಜು ಹಾಗೂ ಅಬ್ದುಲ್ ಖಾದರ್ ಸೇರಿ ಆರು ಮಂದಿ ಆರೋಪಿಗಳನ್ನ ಬಂಧಿಸಿದ್ದರು. ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆ 2021 ರಲ್ಲಿ ಎನ್ಐಎ ವಿಶೇಷ‌ ನ್ಯಾಯಾಲಯವು ಆರು ವರ್ಷಗಳ ಕಾಲ‌ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಸದ್ಯ ವನಿತಾ ನಕಲಿ ನೋಟು ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಆಕೆಯನ್ನ ಅಪರಾಧಿ ಎಂದು ಘೋಷಿಸಿ ನಾಳೆ‌ಗೆ ಶಿಕ್ಷೆ ಪ್ರಮಾಣದ ಬಗ್ಗೆ ತೀರ್ಪು ನೀಡಲಿದೆ.

ಇದನ್ನೂ ಓದಿ: Fake Currency: ಬೆಂಗಳೂರಿನಲ್ಲಿ ನಿಲ್ಲದ ಖೋಟಾ ನೋಟು ಹಾವಳಿ: ಮೂವರು ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.