ETV Bharat / state

ನಕಲಿ ಮಾರ್ಕ್ಸ್​ಕಾರ್ಡ್ ಜಾಲ: 10 ವಿವಿಗಳಿಗೆ ಬೆಂಗಳೂರು ಪೊಲೀಸರಿಂದ ನೋಟಿಸ್

ಅಧಿಕೃತವಾಗಿ ಕಾಲೇಜು ಆಡಳಿತ ಮಂಡಳಿಯಿಂದ ಮಾರ್ಕ್ಸ್ ಕಾರ್ಡ್ ನೀಡಿರುವುದೇ ಅಥವಾ ಆರೋಪಿಗಳು ನಕಲಿ ಮಾರ್ಕ್ಸ್ ಮಾಡಿಸಿಕೊಂಡಿದ್ದಾರಾ? ಎಂಬುದನ್ನು ದೃಢಪಡಿಸಿಕೊಳ್ಳಲು ಪೊಲೀಸರು 10 ವಿವಿಗಳಿಗೆ ನೋಟಿಸ್​​ ಕಳುಹಿಸಿದ್ದಾರೆ.

10 ವಿವಿಗಳಿಗೆ ನೋಟಿಸ್​ ನೀಡಿದ ಪೊಲೀಸರು
10 ವಿವಿಗಳಿಗೆ ನೋಟಿಸ್​ ನೀಡಿದ ಪೊಲೀಸರು
author img

By

Published : Mar 22, 2022, 9:17 PM IST

ಬೆಂಗಳೂರು:‌ ಸಿಲಿಕಾನ್ ಸಿಟಿಯಲ್ಲಿ ಬೃಹತ್ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆ ಹಚ್ಚಿ ಆರೋಪಿಗಳ ಹೆಡೆಮುರಿ ಕಟ್ಟಿದ್ದ ಜಯನಗರ ಪೊಲೀಸರು ಇದೀಗ‌‌ ಅಂಕಪಟ್ಟಿಯ ಅಸಲಿತನದ ಬಗ್ಗೆ 10 ವಿಶ್ವವಿದ್ಯಾಲಯಗಳಿಗೆ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ. ಕಳೆದ ಐದಾರು ವರ್ಷಗಳಿಂದ ನಕಲಿ ಮಾರ್ಕ್ಸ್ ಕಾರ್ಡ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ಧರ್ಮೇಂದ್ರ, ನರೇಶ್, ದಿಲೀಪ್ ಹಾಗೂ ರಘು ಎಂಬುವರನ್ನು ಬಂಧಿಸಿ 150 ನಕಲಿ ಮಾರ್ಕ್ಸ್ ಕಾರ್ಡ್ ಜಪ್ತಿ ಮಾಡಿಕೊಳ್ಳುವಲ್ಲಿ ಜಯನಗರ ಇನ್​ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಮಾರ್ಕ್ಸ್ ಕಾರ್ಡ್ ಮುಟ್ಟುಗೋಲು ಹಾಕಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಆಯಾ ಕಾಲೇಜುಗಳಿಗೆ ಮಾರ್ಕ್ಸ್ ಕಾರ್ಡ್ ನೈಜತೆ ಬಗ್ಗೆ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ.

10 ಕಾಲೇಜುಗಳಿಗೆ ನೋಟಿಸ್: ಅಧಿಕೃತವಾಗಿ ಕಾಲೇಜು ಆಡಳಿತ ಮಂಡಳಿಯಿಂದ ಮಾರ್ಕ್ಸ್ ಕಾರ್ಡ್ ನೀಡಿರುವುದೇ ಅಥವಾ ಆರೋಪಿಗಳು ನಕಲಿ ಮಾರ್ಕ್ಸ್ ಮಾಡಿಸಿಕೊಂಡಿದ್ದಾರಾ? ಎಂಬುದನ್ನು ದೃಢಪಡಿಸಿಕೊಳ್ಳಲು ಮಂಗಳೂರು ಯೂನಿವರ್ಸಿಟಿ, ಸಿವಿಆರ್ ಯೂನಿವರ್ಸಿಟಿ - ಜಾರ್ಖಂಡ್, ಕರ್ನಾಟಕ ಓಪನ್ ಯೂನಿವರ್ಸಿಟಿ, ಜವಾಹರಲಾಲ್ ನೆಹರೂ ಯೂನಿವರ್ಸಿಟಿ - ದೆಹಲಿ, ಕುವೆಂಪು ಯೂನಿವರ್ಸಿಟಿ, ಜನಾರ್ಧನ್ ಯೂನಿವರ್ಸಿಟಿ - ರಾಜಸ್ಥಾನ್, ‌ಗೀತಂ ಯೂನಿವರ್ಸಿಟಿ - ವಿಶಾಖಪಟ್ಟಣಂ, ಠಾಕೂರ್ ಯೂನಿವರ್ಸಿಟಿ - ಮಧ್ಯಪ್ರದೇಶ, ಸಿವಿ ರಾಮನ್ ಯುನಿವರ್ಸಿಟಿ - ಛತ್ತೀಸ್ ಘಡ ಹಾಗೂ ಮಂಗಳೂರು ಟೆಕ್ನಿಕಲ್ ಸೈನ್ಸ್ ಆಫ್ ಇನ್ಸ್ಟಿಟ್ಯೂಟ್ ಗಳಿಗೆ ಪತ್ರ ಬರೆದು ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದ್ದಾರೆ. ಅಲ್ಲದೆ ವಿಚಾರಣೆ ಕರೆದಾಗ ಬರುವಂತೆ ಪತ್ರದಲ್ಲಿ ಸೂಚಿಸಿದ್ದಾರೆ‌

ಇದನ್ನೂ ಓದಿ: ವಿಡಿಯೋ: ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಟೈರ್​​ನಲ್ಲಿ ಸಿಲುಕಿ ಮಹಿಳೆ ಸಾವು

ವಿದ್ಯಾರ್ಥಿಗಳ ವಿಚಾರಣೆ: ಫೇಲ್ ಆದ ಹಾಗೂ ದೂರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಆರೋಪಿಗಳು ನಯವಾಗಿ ಮಾತನಾಡಿ ಅವರನ್ನು ನಂಬಿಸಿ ನಕಲಿ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು. ಇದುವರೆಗೂ 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿ ನೀಡಿದ್ದರು. ಈ ಸಂಬಂಧ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆಯಿಸಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದ ಭಾಗದ ವಿದ್ಯಾರ್ಥಿಗಳೇ ಇದರಲ್ಲಿ ಹೆಚ್ಚಾಗಿದ್ದಾರೆ‌. ವಿಚಾರಣೆ ವೇಳೆ ನಕಲಿ ಅಂಕಪಟ್ಟಿ ಎಂಬುದು ಗೊತ್ತಿಲ್ಲ, ಎಕ್ಸಾಂ ಬರೆಯಿಸಿದ್ದರು. 20 ಸಾವಿರ ಹಣ ಪಡೆದು ಅಂಕಪಟ್ಟಿ ಕೊಡುತ್ತಿದ್ದರು ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಷ್ಪಪಟ್ಟು ಯಾಕ್ ಓದ್ತೀರಾ.. ಮಾರ್ಕ್ಸ್ ಕಾರ್ಡ್ ನಾವು ಕೊಡ್ತೇವೆ.. ನೀವು ಆರಾಮಗಾಗಿ ಕೆಲಸಕ್ಕೆ ಹೋಗಿ ಎಂದು ಆಶ್ವಾಸನೆ ನೀಡುತ್ತಿದ್ದರಂತೆ ಆರೋಪಿಗಳು. ಆರೋಪಿಗಳ ಮಾತಿಗೆ ಬುಟ್ಟಿಗೆ ಬೀಳುತ್ತಿದ್ದ ಆಭ್ಯರ್ಥಿಗಳು ನಕಲಿ ಮಾರ್ಕ್ಸ್ ಕಾರ್ಡ್ ಗಳ ಮೊರೆ ಹೋಗುತ್ತಿದ್ದರು. ಒಂದು ಅಂಕಪಟ್ಟಿಯನ್ನು 25 ರಿಂದ 40 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ನಕಲಿ ಅಂಕಪಟ್ಟಿಗಾಗಿ ಫೇಲ್ ಆದ ವಿದ್ಯಾರ್ಥಿಗಳ ಮನವೊಲಿಸುವ ಕೆಲಸ ಬಂಧಿತ ಆರೋಪಿ ಧರ್ಮೇಂದ್ರ ಮಾಡುತ್ತಿದ್ದರೆ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ನರೇಶ್ ಮನೆಯಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಮಾಡುವ ಕೆಲಸ ಮಾಡುತ್ತಿದ್ದ. ಮಾರ್ಕ್ಸ್ ಕಾರ್ಡ್ ಮಾಡಲು ಎಲ್ಲಾ ಸಾಧನಗಳನ್ನು ಈತ ಸೆಟ್​ ಮಾಡಿಕೊಂಡಿದ್ದನಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.